
ಬೆಂಗಳೂರು, ೩೦ ಮೇ ೨೦೨೦: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಹಾಗೂ ಶ್ರೀ ಜ್ಞಾನಾಕ್ಷಿ ಪ್ರಕಾಶನ ಗ್ರಂಥ ಬಿಡುಗಡೆ ಹಾಗೂ ವೆಬಸೈಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಜೂನ್ ೫ ರಂದು ಫೇಸ್ಬುಕ್ ಲೈವ್ ಮೂಲಕ ಆಯೋಜಿಸಿದ್ದಾರೆ.
ಡಾ. ಎಸ್ ಆರ್ ಲೀಲಾ ರಚಿಸಿರುವ ‘ಆಪರೇಷನ್ ರೆಡ್ ಲೋಟಸ್ ಮತ್ತು ಇತರೆ ಬರಹಗಳು’ , ‘ಜೀವಂತ ದುರ್ಗಾಪೂಜೆ’,’ ನಡುಗುಡಿಯ ಪೂಜಾರಿಗಳು ಇತ್ಯಾದಿ ಹಾಗು ಎರಡು ತೆರನಾದ ಭಾರತೀಯರು’ ಎಂಬ ಪುಸ್ತಕಗಳು ಹಾಗೂ ಡಾ. ರೋಹಿಣಾಕ್ಷ ಶಿರ್ಲಾಲು ರಚಿಸಿರುವ ‘ನೆಲದನಿಯ ಶೋಧ’ ಬಿಡುಗಡೆಗೊಳಲಿವೆ.
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ರವೀಂದ್ರ ಪೈ, ಮುಖ್ಯ ಅತಿಥಿಗಳಾಗಿ ಶ್ರೀ ಹಯಗ್ರೀವಾಚಾರ್ಯರು ಭಾಗವಹಿಸುತ್ತಾರೆ,
ಆರೆಸ್ಸೆಸ್ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಚನ್ನಕೇಶವಪುರ ಅವರು ಪುಸ್ತಕ ಬಿಡುಗಡೆಯ ಜೊತೆ, ಆಶಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮವನ್ನು ಈ ಲಿಂಕ್ ಮೂಲಕ ಲೈವ್ ನೋಡಬಹುದಾಗಿದೆ.
https://www.facebook.com/absp.karnataka.5