
ಶಿವಮೊಗ್ಗದ ಆರೆಸ್ಸೆಸ್ ಸ್ವಯಂಸೇವಕರು, ಕವಿಗಳು, ಹಿತೈಷಿಗಳಾದ ಡಾ. ಪಿ. ನಾರಾಯಣ ಭಟ್ (82 ವರ್ಷಗಳು) ಇನ್ನಿಲ್ಲ. ‘ಎಲ್ಲಾ ಬೇಧ ಮರೆತು, ಬನ್ನಿರಿ ನಾವು ಸಮಾನ’, ‘ಜನನಿ ಜನ್ಮಭೂಮಿ…ಸಾವಿರ ಜನ್ಮವು ಬಂದರೆ ಬರಲಿ, ತಾಯೆ ನಿನ್ನಯ ಮಡಿಲೆನಗಿರಲಿ’ ಸೇರಿದಂತೆ ಅನೇಕ ದೇಶಭಕ್ತಿ ಗೀತೆಗಳನ್ನು ರಚಿಸಿದವರು. ವಿಕ್ರಮ, ಉತ್ಥಾನ ಪತ್ರಿಕೆಗಳಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿದ್ದವು. ‘ಚಕ್ರಧಾರಿ’ ಎಂಬ ಕಾವ್ಯನಾಮದಲ್ಲಿ ಮುಕ್ತಕಗಳು, ಕವಿತೆಗಳನ್ನು ಇವರು ಬರೆದಿದ್ದರು.

