ಗುರು ಹಾಗೂ ಪಂಥದ ಸೇವೆಯಲ್ಲಿ ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡ ಸಚ್ಖಂಡ್ ಶ್ರೀ ದರ್ಬಾರ್ ಸಾಹಿಬ್ ನ ಮಾಜಿ ಮುಖ್ಯಗ್ರಂಥಿ ಶ್ರೀ ಜ್ಞಾನಿ ಜಗತಾರ್ ಸಿಂಗ್ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾದುದು. ಜ್ಞಾನಿ ಜಗತಾರ್ ಸಿಂಗ್ ಅವರು ಅಖಂಡ ಪಾಠಿ ಮತ್ತು ಗ್ರಂಥಿಯಾಗಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ನಂತರ ಶ್ರೀ ದರ್ಬಾರ್ ಸಾಹಿಬ್ ನ ಮುಖ್ಯ ಗ್ರಂಥಿಯಾಗಿ ಗುರು ಮತ್ತು ಪಂಥದ ಅಪಾರ ಸೇವೆ ಸಲ್ಲಿಸಿದ್ದರು. ಗುರು ಮತ್ತು ಪಂಥಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ ಜ್ಞಾನಿ ಜಗತಾರ್ ಸಿಂಗ್ ಅವರ ಬದುಕು ನಮಗೆಲ್ಲ ಅನುಕರಣೀಯವಾದುದು. ಅಂತಹ ಪವಿತ್ರ ಜ್ಯೋತಿ ಅಖಂಡ ಜ್ಯೋತಿಯಲ್ಲಿ ವಿಲೀನವಾಗಿದೆ. ಗುರು ಮಹಾರಾಜರು ದಿವಂಗತರ ಆತ್ಮಕ್ಕೆ ಸದ್ಗತಿ ನೀಡಲಿ ಮತ್ತು ಅವರ ಪರಿವಾರದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ದತ್ತಾತ್ರೇಯ ಹೊಸಬಾಳೆ,
ಸರಕಾರ್ಯವಾಹ,
ರಾಷ್ಟ್ರೀಯ ಸ್ವಯಂಸೇವಕ ಸಂಘ
28.08.2023
गुरु और पंथ की सेवा में सम्पूर्ण जीवन समर्पित करने वाले सचखंड श्री दरबार साहिब के पूर्व मुख्य ग्रंथी ज्ञानी जगतार सिंह जी के निधन का समाचार पा कर अतीव दुःख हुआ।
ज्ञानी जगतार सिंह जी ने अखंड पाठी व ग्रंथी के नाते कई वर्ष सेवा निभाने के बाद श्री दरबार साहिब के मुख्य ग्रंथी के रूप में गुरु और पंथ की अपार सेवा की। ज्ञानी जी का सम्पूर्ण जीवन गुरु और पंथ की सेवा में समर्पित रहा जो हम सब के लिए अनुकरणीय है। उनकी पवित्र जोत अखण्ड ज्योति में समा गई। गुरु महाराज जी दिवंगत आत्मा को अपने श्रीचरणों में स्थान दें और परिवारजनों को दुःख सहन करने की शक्ति प्रदान करें, हम ऐसी प्रार्थना करते हैं।
दत्तात्रेय होसबाले
सरकार्यवाह, राष्ट्रीय स्वयंसेवक संघ