Dasarahalli Bangalore: ಸ್ವಾಮೀ ವಿವೇಕಾನಂದರ ೧೫೦ನೇ ಜನ್ಮ ವರ್ಷ ಅಭಿಯಾನ ಸಮಿತಿ ವತಿಯಿಂದ ವಿವೇಕಾನಂದರ ಜನ್ಮದಿನದ ಅಂಗವಾಗಿ ದಾಸರಹಳ್ಳಿಯಲ್ಲಿನ ಎಂ ಇ ಐ ಮೈದಾನದಲ್ಲಿ ಬೃಹತ್ ಸಮಾವೇಶವನ್ನುಏರ್ಪಡಿಸಲಾಗಿತ್ತು. ಈ ಸಮಾವೇಶವನ್ನು ರಂಗನಾಥ ಗೌಡಿಗೆ ಮಠದ ಶ್ರೀ ಭಕ್ತಿ ವೇದಾಂತ ದಂಡಿ ಮಹಾರಾಜ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀ ವಿವೇಕಾನಂದರ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾದದ್ದು, ಅವರ ವಿಚಾರಗಳು ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗಿರದೆ ರಾಷ್ಟ್ರಭಕ್ತಿಯನ್ನು ಹೊಂದಿದೆ. ಸ್ವಾಮೀ ವಿವೇಕಾನಂದ ಕೇವಲ ಸನ್ಯಾಸಿ ಮಾತ್ರ್ವವಲ್ಲ ಅಪ್ರತಿಮ ರಾಷ್ಟ್ರ ಭಕ್ತ. ಸ್ವತಂತ್ರ ಹೋರಾಟಕ್ಕೂ ಪ್ರೇರಣೆ ನೀಡಿದವರು ಎಂದು ವಿವೇಕಾನಂದರನ್ನು ಸ್ಮರಿಸಿ. ಇಂದಿನ ಯುವ ಪೀಳಿಗೆ ಅವರ ವಿಚಾರಗಳನ್ನು ಮೈಗೂಡಿಸಿ ಕೊಂಡು ದೇಶಕ್ಕೆ ಮಾರಕ ವಾಗಿರುವ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರವನ್ನು ಹುದುಕಾಬೇಕಾಗಿದೆ ಎಂದರು.

IMG_2141

ನಂತರದಲ್ಲಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಟಿ ಎಸ್ ನಾಗಾಭರಣ ಮಾತನಾಡಿ, ದೇಶವೇ ನಮ್ಮತನವನ್ನು ಮೈಮರೆತು, ನನ್ನ ಮಾತು ನನ್ನದಲ್ಲ, ನನ್ನ ವಿಚಾರ ನನ್ನದಲ್ಲ ವೆಂದು ಘಾಡವಾದ ನಿದ್ರೆಯಲ್ಲಿ ಮುಳುಗಿದ್ದಾಗ ಸ್ವಾಮೀ ವಿವೇಕಾನಂದ ಈ ದೇಶದ ಜನತೆಗೆ ಆತ್ಮ ವಿಶ್ವಾಸವನ್ನು ಆತ್ಮ ಸ್ಥೈರ್ಯವನ್ನು ತುಂಬಿದರು. ದೇಶ ಅವರಿಂದಾಗಿ ಹೊಸ ಶಕ್ತಿಯನ್ನು ಪಡೆದಿದೆ. ಬದುಕಿದ್ದುದು ಕೆಲವೇ ವರ್ಷಗಳಾದರೂ ಮುಂದಿನ ೩೯೦೦ ವರ್ಷಗಳಿಗೆ ಬೇಕಾಗುವಷ್ಟು ಕೆಲಸಗಳನ್ನು ಮಾಡಿದ್ದರೆ. ವಿವೆಕಾನಂದರ ವಿಚಾರಗಳು ಏಕಮುಖಿಯಾಗಿರದೆ, ದೇಶ, ಧರ್ಮ, ಆದ್ಯಾತ್ಮಿಕ, ವಾಣಿಜ್ಯ ಹೀಗೆ ಎಲ್ಲವುಗಳಿಂದ ಕೂಡಿದೆ. ಇಂದಿನ ೧೫೦ನೆ ವರ್ಷಕ್ಕೂ ಇಂಥಹ ವಿಚಾರಗಳೇ ಪ್ರಸ್ತುತವಾಗಿದೆ. ಹಾಗಾಗಿ ೧೫೦ನೆ ವರ್ಷ ಆಚರಣಾ ಸಮಿತಿಯು ಈ ಜನ್ಮದಿನವನ್ನು ಕೇವಲ ಒಂದು ದಿನಕ್ಕಷ್ಟೇ ಸೀಮಿತ ಮಾಡದೆ, ವರ್ಷವಿಡಿ ಆಚರಣೆ ಮಾಡಲು ಯೋಜನೆಗಳನ್ನು ರೂಪಿಸಿದೆ. ಎಲ್ಲ ವರ್ಗದ ಜನರನ್ನು ತಲುಪುವ ಸಲುವಾಗಿ ಯುವ ಭಾರತ, ಗ್ರಾಮಾಯಣ, ಅಸ್ಮಿತಾ, ಪ್ರಬುದ್ದ ಭಾರತ ಹೀಗೆ ಹಲವಾರು ವಿಭಾಗಗಳನ್ನಾಗಿ ಮಾಡಿ ಕಾರ್ಯ ಯೋಜನೆಯನ್ನು ರೂಪಿಸಿದೆ. ನಮ್ಮ ಸಂಕಲ್ಪಗಳು ಕೇವಲ ಈ ಕ್ಷಣಕ್ಕೆ ಮಾತ್ರವಾಗದೆ ಬದುಕಿನ ಕಡೆಯವರೆಗೂ ಪ್ರೇರಣೆಯಾಗಲಿ ಎಂದರು.

IMG_2123

ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ, ಇಡೀ ವಿಶ್ವಕ್ಕೆ ಹಿಂದೂ ಧರ್ಮದ ಪರಿಚಯವನ್ನು ಮಾಡಿಕೊಟ್ಟವರು ಶ್ರೀ ವಿವೇಕಾನಂದರು. ಭಾರತದಲ್ಲಿ ಕ್ರೈಸ್ತ ಮಿಷನರಿಗಳು ಧರ್ಮಾನ್ದತೆಯಲ್ಲಿ ನಡೆಸುತ್ತಿದ್ದ ಮಾತಾಂತರಕ್ಕೆ ತಕ್ಕ ಉತ್ತರವನ್ನು ಕೊಟ್ಟವರು ಶ್ರೀ ವಿವೇಕಾನಂದರು ಎಂದು ಅವರ ಜೀವನದ ಹಲವಾರು ಸಂಗತಿಗಳನ್ನು ತಿಳಿಸಿದರು. ಮಕ್ಕಳನ್ನು ಬೆಳೆಸುವಾಗ ಡಾಕ್ಟರ, ಇಂಜಿನಿಯರ್ ಆಗಬೇಕೆಂಬ ಆಸೆಗಳಿಂದ ಬೆಳೆಸಬಾರದು. ಈಗಾಗಲೇ ಡಾಕ್ಟರ ಇಂಜಿನಿಯರ್ ಓದಿರುವವರನ್ನೇ ನಮ್ಮ ಮಕ್ಕಳೆಂದು ಭಾವಿಸಿ, ವಿವೇಕಾನಂದರ ತಾಯಿ ಭುವನೇಶ್ವರಿ ದೇವಿಯಂತೆ ಬೆಳೆಸಬೇಕು. ಭಾರತ ಹೆಮ್ಮೆಯ ಪುತ್ರರನ್ನಾಗಿ ಬೆಳೆಸಬೇಕು. ಧರ್ಮಾಂದತೆ ಇಂದಿಗೂ ಕಾಡುತ್ತಿದೆ. ಹೈದರಾಬಾದ್ ನ ಶಾಸಕ ಓಹ್ವೈಸಿ ಮಾತುಗಳನ್ನು ಖಂಡಿಸಿ, ಧರ್ಮವೆಂದರೆ ಶಕ್ತಿಯ ಪ್ರದರ್ಶನವಲ್ಲ, ಸಹಬಾಳ್ವೆಯೇ ಧರ್ಮ. ಮುಸ್ಲಿಮರು ಭಾವೈಕರಾಗಿ ಬಾಳಿದಲ್ಲಿ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿ ಹಂತಗಳಲ್ಲಿಯೋ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದೆ. ಹೊರಗಿನ ಆಕ್ರಮಣಕಾರರಿಗಿಂತ ಒಳಗಿನ ಉಗ್ರಗಾಮಿ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

IMG_2175

ಇದಕ್ಕೂ ಮೊದಲು ಚಿಕ್ಕಬಾಣವರ, ಜಾಲಹಳ್ಳಿ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಹಾಗೂ ತುಮಕೂರು ರಸ್ತೆ ಬಳಿಯಿಂದ ಪೂರ್ಣ ಕುಂಬ ಹೊತ್ತ ಮಹಿಳೆಯರಿಂದ ಹಾಗೂ ವಿವೇಕಾನಂದ ವೇಷದಾರಿ ಬಾಲಕರಿಂದ ಆಕರ್ಷಕ ಶೋಭಾಯಾತ್ರೆ ನಡೆಯಿತು ಡೊಳ್ಳು ಕುಣಿತ, ಕಂಸಾಳೆ ನೃತ್ಯ ಹಾಗು ಜಾನಪದ ಕಲಾವಿದರಿಂದ ಶೋಭಾಯಾತ್ರೆಯು ವರ್ಣಮಯಗೊಂಡಿತ್ತು. ವಿವಿಧ ಶಾಲೆಯ ಮಕ್ಕಳು ಅತ್ಯಾಕರ್ಷಕ ಪಥಸಂಚಳನ ನಡೆಸಿದರು. ವೇದಿಕೆಯಲ್ಲಿ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜುರವರು ಹಾಗು ವಿವೇಕಾನಂದ ೧೫೦ ನೆ ಜನ್ಮ ವರ್ಷ ಸಮಿತಿಯ ಮಹಾನಗರ ಸಂಚಾಲಕರಾದ ಶರದ್ ಹೊಂಬಾಳೆ, ಸಮಿತಿ ಸದಸ್ಯರಾದ ಶಿವಲಿಂಗಯ್ಯನವರು ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ೧೫೦ನೆ ಜನ್ಮವರ್ಷ ಅಭಿಯಾನ ಸಮಿತಿಯು ಹೊರತಂದಿರುವ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ೫೦೦೦ಕ್ಕೂ ಹೆಚ್ಚು ಮಂದಿ ಬಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೊ ಮೊದಲು ಚಿಂತನಪಲ್ಲಿ ಕೃಷ್ಣಮೂರ್ತಿ ಸಂಗೀತ ಅಕಾಡಮಿವತಿಯಿಂದ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿತ್ತು.

IMG_2111

Leave a Reply

Your email address will not be published.

This site uses Akismet to reduce spam. Learn how your comment data is processed.