ಇಂದು ಜಯಂತಿ
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಈ ರಾಷ್ಟ್ರ ಕಂಡಂತಹ ಪ್ರಮುಖ ಸಾಮಾಜಿಕ ಕಾರ್ಯಕರ್ತ. ಇವರು ಭಾರತೀಯ ಕಾರ್ಮಿಕ ಸಂಘದ ನಾಯಕರು ಮತ್ತು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘಗಳ ಸಂಸ್ಥಾಪಕರು. ದತ್ತೋಪಂತ್ ಬಾಪೂ ರಾವ್ ಠೇಂಗಡಿ ಅವರು ಜೀವನವೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದವರು.ಇವರು ದೇಶದ ದುಡಿಯುವ ಸಮುದಾಯದ ಸರ್ವಂಗೀಣ ಶ್ರೇಯೋಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದಾರೆ. ಇಂದು ಅವರ ಜಯಂತಿ.

ಪರಿಚಯ
ದತ್ತೋಪಂತ್‌ ಬಾಪೂರಾವ್‌ ಠೇಂಗಡಿ ಅವರು ನವೆಂಬರ್‌ 10, 1920 ರಂದು ಮಹಾರಾಷ್ಟ್ರದ ವಾರ್ಧಾದ ಅರವಿ ಎಂಬಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ವಾರ್ಧದಲ್ಲಿ ಮುಗಿಸಿದರು. ನಂತರ ಅವರು ನಾಗಪುರದ ಕಾನೂನು ಕಾಲೇಜಿನಲ್ಲಿ ಎಲ್‌ ಎಲ್‌ ಬಿ ಅಧ್ಯಯನ ಮಾಡಿದರು. ಮೋರಿಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಎಲ್‌ ಎಲ್‌ ಎಮ್‌ ಮುಗಿಸಿದರು. 15ನೇ ವಯಸ್ಸಿನಲ್ಲಿ ಅವರು ಅರವಿಯ ಮುನ್ಸಿಪಲ್ ಹೈಸ್ಕೂಲ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು ಮತ್ತು 1936-38 ರಿಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರಾಗಿದ್ದರು. ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್ ಗೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.


ಗುರೂಜೀ ಎಂದೇ ಕರೆಯಲಾಗಿರುವ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಮತ್ತು ಸಮಕಾಲೀನ ನಾಯಕರಾದ ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ವ್ಯಕ್ತಿತ್ವ ದತ್ತೋಪಂತ್‌ ಠೇಂಗಡಿ ಅವರ ಮೇಲೆ ಪ್ರಭಾವ ಬೀರಿತು.
ಅವರು ನಂತರದ ಸಮಯದಲ್ಲಿ ಸಮಾಜ ಕಾರ್ಯಗಳಲ್ಲಿ ತೊಡಕೊಂಡರು. ಹೀಗಾಗಿ ಪೂರ್ಣಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು.


ದತ್ತೋಪಂತ್‌ ಬಾಪೂರಾವ್‌ ಠೇಂಗಡಿ ಅವರು ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. 1955ರಲ್ಲಿ ಭಾರತೀಯ ಮಜ್ದೂರ್ ಸಂಘ, 1979ರಲ್ಲಿ ಭಾರತೀಯ ಕಿಸಾನ್ ಸಂಘ, 1991ರಲ್ಲಿ ಸ್ವದೇಶೀ ಜಾಗರಣ್ ಮಂಚ್, ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಸೇರಿದಂತೆ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಅಷ್ಟೆ ಅಲ್ಲದೆ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಅಖಿಲ ಭಾರತೀಯ ಅಧಿವಕ್ತಾ ಪರಿಷತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮತ್ತು ಭಾರತೀಯ ವಿಚಾರ ಕೇಂದ್ರ ಸಂಸ್ಥೆಗಳಿಗೆ ಸ್ಥಾಪಕ ಸದಸ್ಯರಾಗಿದ್ದರು.


1964ರಿಂದ 1976ರ ವರೆಗೆ ಎರಡು ಅವಧಿಗಳ ಕಾಲ ರಾಜ್ಯಸಭೆಯ ಸದಸ್ಯರಾಗಿದ್ದರು. ಹಾಗೆಯೇ 1968-1970ರವರೆಗೆ ಅದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1975ರಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳನ್ನು ಏಕಾಭಿಪ್ರಾಯಕ್ಕೆ ತರುವುದರಲ್ಲಿ ವರ್ಣನಾತೀತವಾದ ನಾಯಕತ್ವ ಪ್ರತಿಭೆಯನ್ನು ತೋರಿದರು.


ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಭಾರತದಾದ್ಯಂತ ಪ್ರವಾಸ ಕೈಗೊಂಡಿದ್ದರು. 1979ರಲ್ಲಿ 2ನೇ ಅಂತಾರಾಷ್ಟ್ರೀಯ ವರ್ಣಭೇದ ವಿರೊಧ ಸಭೆಗಾಗಿ ಸ್ವಿಜರ್ಲ್ಯಾಂಡ್ನ ಜೆನೀವಾ ನಗರಕ್ಕೆ ಪ್ರವಾಸ ಮಾಡಿದರು. ಅಮೆರಿಕಾ, ಕೆನಡಾ, ಬ್ರಿಟನ್, ಯುಗೋಸ್ಲೇವಿಯಾ ದೇಶಗಳಿಗೂ ಭೇಟಿ ನೀಡಿದ್ದರು.
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಸಾಹಿತ್ಯದ ದೃಷ್ಟಿಯಿಂದ ಅನೇಕ ಪುಸ್ತಕಗಳನ್ನು ಸಹ ಬರೆದಿದ್ದಾರೆ. ದ ಥರ್ಡ್ ವೇ, ಮೋರ್ಡ್ರನೈಜೆಷನ್ ವಿತೌಟ್ ವೆಸ್ಟೆರ್ನೈಜೆಷನ್, ಅವರ್ ನೇಷನಲ್ ರೆನೈಸೆನ್ಸ್,ಇಟ್ಸ್ ಡೈರಕ್ಷನ್ಸ್ ಅನ್ಡ್ ಡೆಸ್ಟಿನೇಷನ್ಸ್, ನೇಷನಲ್ ಪರ್ಸ್ಯೂಟ್,ದ ಗ್ರೇಟ್ ಸೆನ್ತಿನಲ್ ಅನ್ಡ್ ಪ್ರೆಸ್ಪೆಕ್ಟಿವ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.


ಪ್ರಶಸ್ತಿ
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ದೊರತಿತು. ಆದರೆ ಅವರಿಗೆ ಪ್ರಶಸ್ತಿಗೆ ಗಮನ ಹರಿಸಿದೆ ಅದನ್ನು ತಿರಸ್ಕರಿಸಿದರು.

ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಅಕ್ಟೋಬರ್‌ 14, 2004ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.