

ಶಿವಮೊಗ್ಗ: ದೇವಾಲಯ ಸಂವರ್ಧನಾ ಸಮಿತಿಯ ಕರ್ನಾಟಕ
ಪ್ರಾಂತದ ಮೊದಲ ದೇವಾಲಯ ಧರ್ಮದರ್ಶಿಗಳ ಚಿಂತನ ಸಭೆ ಕಾರ್ಯಕ್ರಮ ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 9ರಂದು ನಡೆಯಿತು.

‘ಗುಡಿ- ಜನರ ಜೀವನಾಡಿ’ ಎನ್ನುವ ಪರಿಕಲ್ಪನೆಯೊಂದಿಗೆ ದೇವಾಲಯ ಕೇಂದ್ರೀಕೃತ ಚಟುವಟಿಕೆಗಳು ನಿರಂತರವಾಗಿ ಮಾಡುವ ನಿಮಿತ್ತ ನಡೆಯುತ್ತಿರುವ ಧರ್ಮದರ್ಶಿಗಳ ಚಿಂತನ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕ ಸುಧೀರ್, ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ದೇವಾಲಯ ಸಂವರ್ಧನಾ ಸಮಿತಿ , ಕರ್ನಾಟಕ ರಾಜ್ಯ ಸಂಯೋಜಕ ಮನೋಹರ ಮಠದ್, ಸಾಗರ ಜಿಲ್ಲಾ ಸಂಘಚಾಲಕ ಹನಿಯ ರವಿ ಉಪಸ್ಥಿತರಿದ್ದರು.


