
ಕುಶಲ ಸಂಸದ, ರಾಷ್ಟ್ರಹಿತ ಎಲ್ಲಕ್ಕಿಂತ ಮಿಗಿಲು ಎನ್ನುವ ಭಾವನೆಯನ್ನು ಜೀವನದಲ್ಲಿಟ್ಟುಕೊಂಡ, ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಹಾಗೂ ಎಲ್ಲಾ ಪಕ್ಷಗಳಲ್ಲೂ ಸಮಾನವಾಗಿ ಗೌರವಕ್ಕೆ ಪಾತ್ರರಾಗಿದ್ದ ಎಲ್ಲಾ ಪಕ್ಷಗಳಿಂದಲೂ ಸಮ್ಮಾನಿತರಾಗಿದ್ದ, ಮಿತಭಾಷಿಯೂ, ಲೋಕಪ್ರಿಯರೂ ಭಾರತದ ಪೂರ್ವ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಇಂದು ತಮ್ಮ ಜೀವನ ಯಾತ್ರೆಯನ್ನು ಮುಗಿಸಿದ್ದಾರೆ. ಭಾರತದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಅವರ ಸಾವಿನಿಂದ ಶೂನ್ಯತೆ ಸೃಷ್ಟಿಯಾಗಿದ್ದು ಅದನ್ನು ಭರಿಸುವುದು ಕಷ್ಟ ಸಾಧ್ಯ. ಸಂಘದ ಬಗ್ಗೆ ತಮಗಿದ್ದ ಪ್ರೇಮ, ಸದ್ಭಾವನೆ ಅಪಾರವಾದುದು. ನಮಗೆ ಅವರು ಮಾರ್ಗದರ್ಶಕರಾಗಿದ್ದರು. ಅವರ ಸಾವಿನಿಂದ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ಪರಿವಾರದವರಿಗೆ ಈ ಸಮಯದಲ್ಲಿ ಸಂವೇದನೆಯನ್ನು ವ್ಯಕ್ತಪಡಿಸುತ್ತಾ, ತನ್ನ ಚರಣಗಳಲ್ಲಿ ಪ್ರಣಬ್ ದಾ ಅವರಿಗೆ ಸ್ಥಾನ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಮೋಹನ್ ಭಾಗವತ್, ಸರಸಂಘಚಾಲಕರು ಹಾಗೂ ಸುರೇಶ್ ಜೋಶಿ, ಸರಕಾರ್ಯವಾಹರು,
ರಾಷ್ಟ್ರೀಯ ಸ್ವಯಂಸೇವಕ ಸಂಘ



