
Sri Dinesh, RSS Kasaragod Sanghachalak speaks after inaugurating GOKULOTSAVAM
ಮಂಜೇಶ್ವರ Feb-17, 2013: ಮಂಜೇಶ್ವರ ತಾಲೂಕಿನ ಮೀಂಜ ,ವರ್ಕಾಡಿ ಹಾಗೂ ಪೈವಳಿಕೆ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ “ಗೋಕುಲೋತ್ಸವ ” 17/2/2013 ರಂದು
“ಶ್ರೀ ದುರ್ಗಾ ಸದನ “ಆವಳ ಮಠ ಇಲ್ಲಿ ನಡೆಯಿತು.
ಪೂರ್ವಾಹ್ನ ದೀಪ ಬೆಳಗುವುದರೊಂದಿಗೆ ಉದ್ಘಾಟನೆಯನ್ನು ಶ್ರೀ ದಿನೇಶ ,ಕಾಸರಗೋಡು ತಾಲೂಕು ಸಂಘಚಾಲಕ,,ರಾಷ್ಟ್ರೀಯ ಸ್ವಯಂಸೇವಕ ಸಂಘ ಅವರು ಮಾಡಿದರು .ಮುಖ್ಯ ಅತಿಥಿಗಳಾಗಿ ಶ್ರೀ ಗಣಪತಿ ಭಟ್, ಆಡಳತ ಮೊಕ್ಥೇಸರರು ಅವಳ ಮಠ ಹಾಗೂ ಶ್ರೀ ವಿಶ್ವನಾಥ ಭಟ್ ,ಪ್ರಾಂಶುಪಾಲರು,ಸರಕಾರಿ ಪ್ರಥಮದರ್ಜೆ ಕಾಲೇಜು,ಹಳೆಯಂಗಡಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರವೀಶ ಭಟ್.ಎ ಅವರು ವಹಿಸಿದ್ದರು.
ಸಾಮೂಹಿಕವಾಗಿ ವಂದೇ ಮಾತರಂ ಹಾಗೂ ಶ್ಲೋಕ ಗಳನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಗಿ, ತದನಂತರ ಎಲ್ಲರೂ ಬೌಧ್ಧಿಕ ಹಾಗೂ ಶಾರೀರಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಅಪರಾಹ್ನ ಭೋಜನದ ನಂತರ ಬಾಲಗೋಕುಲದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಲೋಕೇಶ ಜೋಡುಕಲ್ಲು ,ತಾಲೂಕು ಕಾರ್ಯವಾಹ ,ಮಂಜೇಶ್ವರ ತಾಲೂಕು ;ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಮಾತನಾಡಿದರು.ಅಧ್ಯಕ್ಷತೆಯನ್ನು ಶ್ರೀ ಸದಾನಂದ,ಕಾರ್ಯದರ್ಶಿ ,ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಲಿ, ಸಜಂಕಿಲ
ವಹಿಸಿದ್ದರು.
Report by Shivakrishna N