ಇದೇ ಜುಲೈ 19ರಂದು ಆಷಾಢ ಶುಕ್ಲ ಹುಣ್ಣಿಮೆ; ಆದಿಗುರು ವ್ಯಾಸರ ಜನ್ಮದಿನ . ಜ್ಞಾನದ ಬೆಳಕನ್ನಿತ್ತು ಶ್ರೇಯಸ್ಸಿನೆಡೆಗೆ ನಡೆಯಲು ದಾರಿತೋರುವ ಶಿಕ್ಷಕರನ್ನು ಸ್ಮರಿಸುವ “ಗುರುಪೂರ್ಣಿಮೆ”ಯ ನಿಮಿತ್ತ ಈ ಲೇಖನ.

guru-shishya

ಗುರು ಎಂಬ ಶಬ್ದ ಕಿವಿಗೆ ಬಿದ್ದೊಡನೆ ಏನೋ ಒಂದು ಭರವಸೆ, ಆತ್ಮೀಯತೆ, ಗೌರವ
ಇವೆಲ್ಲ ಭಾವನೆಗಳು ಓಡೋಡಿ ಬಂದು ಮನಸ್ಸನ್ನು ಮುದಗೊಳಿಸುತ್ತವೆ, ಹದಗೊಳಿಸುತ್ತವೆ. ಸೃಷ್ಟಿ- ಸ್ಥಿತಿ-ಲಯಗಳಿಗೆ ಕಾರಣರಾದ ಬ್ರಹ್ಮ-ವಿಷ್ಣು- ಮಹೇಶ್ವರರಿಗೆ ಸಮನಾದವನು ಗುರು ಎಂಬ ನಂಬಿಕೆ ಎಷ್ಟು ಅರ್ಥಪೂರ್ಣ, ಉದಾತ್ತ!
ಗುರು ಎಂದರೆ ಯಾರು? ಗುರು ಎಂದರೆ ಕಲಿಸುವವನು, ದಾರಿ ತೋರಿಸುವವನು, ಕಾರುಣ್ಯವೇ ಮೈವೆತ್ತವನು. ಮೊದಲ ಗುರು ತಾಯಿ. ಅವಳು ಮಕ್ಕಳನ್ನು ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾಳೆ, ಅವರ ಎಲ್ಲ ತಪ್ಪುಗಳನ್ನು ಸಹಿಸಿ ತಿದ್ದುತ್ತಾಳೆ. ಅವಳು ಮುನಿಸಿನಿಂದ ಹೊಡೆದಾಗಲೂ ಮಗು ಅಮ್ಮ ಎಂದೇ ಅಳುತ್ತದೆ, ಸಾಂತ್ವನಕ್ಕಾಗಿ ಅಮ್ಮನ ಮಡಿಲನ್ನೇ ಸೇರುತ್ತದೆ. ಬಾಲ್ಯಕಾಲದಲ್ಲಿ ಅವಳು ಹೇಳಿದ್ದೇ ವೇದ, ಅವಳ ಮಮತೆಯ ಆಸರೆಯಲ್ಲಿ ನಡೆವ ಮಾತುಕತೆಯೇ ಉಪನಿಷತ್ತು. ಅವಳಾಡಿದ ವಾತ್ಸಲ್ಯದ ಕಿವಿನುಡಿಗಳು ನಮ್ಮಲ್ಲಿ ಮೌಲ್ಯಗಳನ್ನು ತುಂಬಿದರೆ, ಗದರುವಿಕೆ-ಪೆಟ್ಟುಗಳು ಮರೆಯಲಾರದ ಪಾಠಗಳಾಗುತ್ತವೆ. ಅವಳ ನಡವಳಿಕೆಯ ಅನುಕರಣೆಯಿಂದಾಗಿ ನಮ್ಮ ಸ್ವಭಾವ
ರೂಪಿತವಾಗುತ್ತದೆ. ಬೆಳೆದಂತೆ ಬೆಳೆದಂತೆ ತಿಳಿಯಬೇಕಾದ ವಿಷಯಗಳೂ ಹೆಚ್ಚುತ್ತವೆ, ಔಪಚಾರಿಕವಾಗಿ ಕಲಿಯಲು ಪ್ರಾರಂಭ. ಅಂದು ಗುರುಕುಲಗಳಲ್ಲಿ ಗುರುಗಳ ಸಾನ್ನಿಧ್ಯದಲ್ಲಿ ಶಿಕ್ಷಣ ಲಭಿಸುತ್ತಿತ್ತು.
ಇಂದು ಶಾಲೆಗಳಲ್ಲಿ ಶಿಕ್ಷಣ ದೊರೆಯುತ್ತದೆ.  ಗುರುಗಳನ್ನು ಗೌರವಿಸುವ ಅಮೋಘ ಪರಂಪರೆಯಲ್ಲಿ ಆರುಣಿ, ಏಕಲವ್ಯ ಮುಂತಾದವರ ಹೆಸರುಗಳು ಚಿರಸ್ಥಾಯಿ. ಭಾರತದ ಹೆಸರಿನಲ್ಲೇ ಜ್ಞಾನದ ಆರಾಧನೆಯಿದೆ. ಜ್ಞಾನ ಏವ ಪರಾಶಕ್ತಿಃ, ನ ಹಿ ಜ್ಞಾನೇನ ಸದೃಶಂ ಇತ್ಯಾದಿ ವಾಕ್ಯಗಳಲ್ಲಿ ಈ ಭಾವ ಧ್ವನಿತವಾಗಿದೆ. ಡಾ. ಅಬ್ದುಲ್ ಕಲಾಂ ‘Ours is a Knowldge based country’ ಎಂದಿದ್ದಾರೆ.

ಆದಿಗುರು ವ್ಯಾಸ: 

Vyas
ವಿಸ್ತಾರವಾಗಿ ಬೆಳೆದಿದ್ದ ವೈದಿಕ ಸಾಹಿತ್ಯವನ್ನು ಸಂಕಲಿಸಿದ ಕೃಷ್ಣದ್ವೈಪಾಯನರು ವೇದವ್ಯಾಸರೆಂದೇ ಹೆಸರಾದರು. ವೇದಗಳನ್ನು ವಿಂಗಡಿಸಿ, ಶಿಷ್ಯ ಪರಂಪರೆಯ ಮೂಲಕ ವೇದಗಳ ಪ್ರಸಾರಕ್ಕೂ ಕಾರಣರಾದರು. 18 ಪುರಾಣ, ಮಹಾಭಾರತಗಳ ಮೂಲಕ ಭಾರತೀಯ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯಂತೂ ಜಗನ್ಮಾನ್ಯವಾಗಿದೆ, ವರ್ಷಗಳು ಕಳೆದಂತೆ ಗೀತೆ ಜೀವನಗ್ರಂಥವಾಗಿ ಜನಪ್ರಿಯವಾಗುತ್ತಿದೆ. ಇಂಥ ಚಿರಂತನ ಕಾರ್ಯ ಮಾಡಿದ ವೇದವ್ಯಾಸರನ್ನು ಆದಿ ಗುರು ಎಂದು ನಮ್ಮ ದೇಶದ ಪರಂಪರೆಯಲ್ಲಿ ಗರವಿಸಲಾಗಿದೆ. ಆಷಾಢ ಮಾಸದ ಹುಣ್ಣಿಮೆಯನ್ನು ಸಮಸ್ತ ಗುರುಪರಂಪರೆಯನ್ನು ಗೌರವಿಸುವ ವ್ಯಾಸ ಪೂರ್ಣಿಮೆ ಉತ್ಸವವಾಗಿ
ಆಚರಿಸಲಾಗುತ್ತದೆ.
ಉತ್ಸವ ಎಂದರೆ ಮೇಲಕ್ಕೆತ್ತುವುದು ಎಂಬರ್ಥ. ಈ ರೀತಿ ಪ್ರತಿ ಹಬ್ಬವೂ ಆನಂದವನ್ನು ಕೊಡುವುದರ ಜೊತೆಗೆ ಜೀವನವನ್ನು ಉನ್ನತಗೊಳಿಸುವ ಸಂಸ್ಕಾರ ನೀಡುತ್ತದೆ. ಶ್ರದ್ಧಾವಾನ್ ಲಭತೇ ಜ್ಞಾನಂ- ಜ್ಞಾನಾರ್ಜನೆಗೆ ಶ್ರದ್ಧೆ ಇರಬೇಕು. ಅದರಂತೇ ಗುರುಹಿರಿಯರ ಬಗ್ಗೆ ಶ್ರದ್ಧಾ, ಭಕ್ತಿಗಳನ್ನು ಬೆಳೆಸುವುದೇ ಗುರುಪೂಜಾ ಉತ್ಸವದ ಹಿಂದಿರುವ ಉದ್ದೇಶ.

ಮಹಾಪುರುಷರ ಹಿಂದಿದ್ದರು :

ಮಹಾಗುರುಗಳು ಭಾರತದ ಇತಿಹಾಸದಲ್ಲಿ ಆಗಿಹೋಗಿರುವ ಎಲ್ಲ ಮಹಾಪುರುಷರರ ಯಶಸ್ಸಿನ ಹಿಂದೆ ಅವರ ಗುರುಗಳ ಮಾರ್ಗದರ್ಶನ, ಆಶೀರ್ವಾದಗಳಿವೆ, ಶ್ರೀರಾಮಚಂದ್ರನಿಗೆ ವಸಿಷ್ಠ, ವಿಶ್ವಾಮಿತ್ರರು; ಶ್ರೀಕೃಷ್ಣನಿಗೆ ಸಾಂದೀಪನಿ ಋಷಿಗಳು ಹೀಗೆ. ಹಿಂದು ಧರ್ಮದ ಉಳಿವಿಗಾಗಿ ವಿದ್ಯಾರಣ್ಯರು ಹಕ್ಕಬುಕ್ಕರ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು. ಛತ್ರಪತಿ ಶಿವಾಜಿ ಮಹಾರಾಜರಿಗೆ ಹಿಂದವೀ ಸ್ವರಾಜ್ಯದ ಸ್ಥಾಪನೆಗೆ ಪ್ರೇರಣೆ ನೀಡಿದವರು ಸಮರ್ಥ ರಾಮದಾಸರು. ಹಾಗೆಯೇ ಕಾಲಕಾಲಕ್ಕೆ ಸಮಾಜ ಜಿಡ್ಡುಗಟ್ಟಿದಾಗ, ವಿಕೃತಿಗಳು ಮೈದೋರಿದಾಗ ತಿದ್ದುವ, ಆದಿಗುರು ವ್ಯಾಸರ ಜನ್ಮದಿನ ಆಷಾಢ ಶುಕ್ಲ ಹುಣ್ಣಿಮೆ. ಶಿಕ್ಷಕರಿಗೆ ಜ್ಞಾನದ ಬೆಳಕನ್ನಿತ್ತು ಶ್ರೇಯಸ್ಸಿನೆಡೆಗೆ ನಡೆಯಲು ದಾರಿತೋರುವ ಶಿಕ್ಷಕರನ್ನು ಸ್ಮರಿಸುವ ಗುರುಪೂರ್ಣಿಮೆಯ ನಿಮಿತ್ತ ಈ ಲೇಖನ .

ಸನ್ಮಾರ್ಗಕ್ಕೆ ತರುವ ಪ್ರಯತ್ನ ಮಾಡಿದ ಸಂತ ಪರಂಪರೆ ಅನನ್ಯ. ಹಿಂದು ಸಮಾಜಕ್ಕೆ ಭಗವಾನ್ ಬುದ್ಧ, ಮಹಾವೀರ, ಆದಿಶಂಕರರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಗುರುನಾನಕರು, ಮಹಾತ್ಮ ಬಸವೇಶ್ವರರು, ನಾರಾಯಣಗುರುಗಳು ಇತ್ಯಾದಿ ಅನೇಕರ ಕೊಡುಗೆ ಅಸಾಮಾನ್ಯ.
ಆಧುನಿಕ ಭಾರತದ ನಿರ್ಮಾಣದಲ್ಲಿ ಮಹರ್ಷಿ ದಯಾನಂದ ಸರಸ್ವತಿಗಳು, ಯೋಗಿ ಅರವಿಂದರು, ರಾಮಕೃಷ್ಣ ಪರಮಹಂಸ- ವಿವೇಕಾನಂದರು ಮುಂತಾದವರ ಪಾತ್ರ ಹಿರಿದು. ಭಾರತದ ಮೊದಲ ಆಧ್ಯಕ್ಷರಾಗಿದ್ದ ಡಾ. ರಾಧಾಕೃಷ್ಣನ್, ಡಾ. ಅಬ್ದುಲ್ ಕಲಾಂರಂಥವರೂ ಗುರುಸ್ಥಾನದಲ್ಲಿ ನಿಂತು ಯುವಪೀಳಿಗೆಗೆ ಪ್ರೇರಣೆ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಮಲ್ಲಾಡಿಹಳ್ಳಿಯ ಸ್ವಾಮಿಗಳು, ಗದಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಸಾವಿರಾರು ಪೀಡಿತರ ಬಾಳಿಗೆ ಬೆಳಕಾಗಿದ್ದಾರೆ. ಸಿದ್ಧಗಂಗೆಯ ಶ್ರೀಗಳು ಅನ್ನ-ಜ್ಞಾನ-ದಾಸೋಹಗಳಿಂದ ಲಕ್ಷಾಂತರ ಜನರ ಬದುಕನ್ನು ರೂಪಿಸಿದ್ದಾರೆ.
ತಮ್ಮ ನಿಸ್ಪೃಹ ನಡವಳಿಕೆ, ಸರಳ ಪ್ರವಚನಗಳಿಂದಾಗಿ ಸಿದ್ಧೇಶ್ವರ ಸ್ವಾಮಿಗಳು ನಡೆದಾಡುವ ದೇವರೆಂದೇ ಪ್ರಸಿದ್ಧರು. ಇಂಥ ಎಲ್ಲ ಗುರುಗಳನ್ನು ನೆನೆದು, ಗೌರವಿಸುವ ಪವಿತ್ರ ದಿನವನ್ನು ಇಡೀ ದೇಶದಲ್ಲಿ ಸಂಭ್ರಮ, ಶ್ರದ್ಧೆಗಳಿಂದ ಆಚರಿಲಾಗುತ್ತಿದೆ.

ಪರಮಪವಿತ್ರ ಭಗವಾಧ್ವಜ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರು

V-Card-3
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಆರು ಉತ್ಸವಗಳನ್ನು ಆಚರಿಲಾಗುತ್ತದೆ. ಅವುಗಳಲ್ಲಿ ಶ್ರೀ ಗುರುಪೂಜಾ ಉತ್ಸವವೂ ಒಂದು. ಇಲ್ಲಿ ಒಂದು ವಿಶೇಷವೆಂದರೆ, ಯಾವುದೇ ವ್ಯಕ್ತಿಯಲ್ಲ,
ಆದಿಗುರು ವ್ಯಾಸ ವಿಸ್ತಾರವಾಗಿ ಬೆಳೆದಿದ್ದ ವೈದಿಕ ಸಾಹಿತ್ಯವನ್ನು ಸಂಕಲಿಸಿದ ಕೃಷ್ಣದ್ವೈಪಾಯನರು ವೇದವ್ಯಾಸರೆಂದೇ ಹೆಸರಾದರು. ವೇದಗಳನ್ನು ವಿಂಗಡಿಸಿ, ಶಿಷ್ಯ ಪರಂಪರೆಯ ಮೂಲಕ ವೇದಗಳ ಪ್ರಸಾರಕ್ಕೂ ಕಾರಣರಾದರು. ೧೮ ಪುರಾಣ, ಮಹಾಭಾರತಗಳ ಮೂಲಕ ಭಾರತೀಯ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಮಹಾಭಾರತದ
ಭಾಗವಾಗಿರುವ ಭಗವದ್ಗೀತೆಯಂತೂ ಜಗನ್ಮಾನ್ಯವಾಗಿದೆ, ವರ್ಷಗಳು ಕಳೆದಂತೆ ಗೀತೆ ಜೀವನಗ್ರಂಥವಾಗಿ ಜನಪ್ರಿಯವಾಗುತ್ತಿದೆ. ಇಂಥ ಚಿರಂತನ ಕಾರ್ಯ ಮಾಡಿದ ವೇದವ್ಯಾಸರನ್ನು ಆದಿ ಗುರು ಎಂದು ನಮ್ಮ ದೇಶದ ಪರಂಪರೆಯಲ್ಲಿ ಗರವಿಸಲಾಗಿದೆ. ಆಷಾಢ ಮಾಸದ ಹುಣ್ಣಿಮೆಯನ್ನು ಸಮಸ್ತ ಗುರುಪರಂಪರೆಯನ್ನು ಗೌರವಿಸುವ ವ್ಯಾಸ ಪೂರ್ಣಿಮೆ ಉತ್ಸವವಾಗಿ ಆಚರಿಸಲಾಗುತ್ತದೆ.
ಉತ್ಸವ ಎಂದರೆ ಮೇಲಕ್ಕೆತ್ತುವುದು ಎಂಬರ್ಥ. ಈ ರೀತಿ ಪ್ರತಿ ಹಬ್ಬವೂ ಆನಂದವನ್ನು ಕೊಡುವುದರ ಜೊತೆಗೆ ಜೀವನವನ್ನು ಉನ್ನತಗೊಳಿಸುವ ಸಂಸ್ಕಾರ ನೀಡುತ್ತದೆ. ಶ್ರದ್ಧಾವಾನ್ ಲಭತೇ ಜ್ಞಾನಂ- ಜ್ಞಾನಾರ್ಜನೆಗೆ ಶ್ರದ್ಧೆ ಇರಬೇಕು. ಅದರಂತೇ ಗುರುಹಿರಿಯರ ಬಗ್ಗೆ ಶ್ರದ್ಧಾ, ಭಕ್ತಿಗಳನ್ನು ಬೆಳೆಸುವುದೇ ಗುರುಪೂಜಾ ಉತ್ಸವದ ಹಿಂದಿರುವ ಉದ್ದೇಶ.
ಬದಲಿಗೆ ಪರಮಪವಿತ್ರ ಭಗವಾಧ್ವಜವೇ ಗುರು. ಹೀಗೇಕೆ ಎಂಬ ಪ್ರಶ್ನೆ ಮೂಡುವುದು ಅತ್ಯಂತ ಸಹಜ.
ಇದಕ್ಕುತ್ತರ ಬೇಕೆಂದಲ್ಲಿ ಸಂಘಸ್ಥಾಪನೆಯ ಹಿನ್ನೆಲೆಯನ್ನು ಗಮನಿಸಬೇಕಾಗುತ್ತದೆ. ಒಂದೊಮ್ಮೆ ಜಗದ್ಗುರುವಾಗಿದ್ದ, ಸಮೃದ್ಧವಾಗಿದ್ದ, ಅಜೇಯವಾಗಿದ್ದ ಭಾರತ ಆಕ್ರಮಣ, ವಿಕೃತಿಗಳಿಗೆ ಸಿಲುಕಿ ಗುಲಾಮಿತನಕ್ಕೆ ತುತ್ತಾಯಿತು. ಇಡೀ ದೇಶದಲ್ಲಿ ಸ್ವರಾಜ್ಯ ಪ್ರಾಪ್ತಿಗಾಗಿ ಹೋರಾಟ ನಡೆಯಿತು. ಬ್ರಿಟಿಷರನ್ನು ಭಾರತದಿಂದ ಓಡಿಸುವುದೊಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಬಹುತೇಕ ಜನರು ಭಾವಿಸಿದ್ದರು. ಆದರೆ, ಸಂಘಸ್ಥಾಪಕ ಡಾ.ಕೇಶವ
ಬಲಿರಾಮ ಹೆಡಗೇವಾರರು ತಮ್ಮ ಅನುಭವ, ಆಧ್ಯಯನಗಳಿಂದ ಭಾರತದ ಪುತ್ರರೂಪಿ ಹಿಂದು ಸಮಾಜದಲ್ಲಿ ಮೂಡಿರುವ ಆತ್ಮಹೀನಾಯತೆ, ಸ್ವಾರ್ಥ, ಅಶಿಸ್ತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂಘಟನಾಹೀನತೆಗಳೇ ಈ ದಾಸ್ಯಕ್ಕೆ, ಪತನಕ್ಕೆ ಕಾರಣ ಎಂದು ಕಂಡುಕೊಂಡರು. ಸ್ವಾಮಿ ವಿವೇಕಾನಂದರು, ಸೋದರಿ ನಿವೇದಿತಾ, ಮಹರ್ಷಿ ಅರವಿಂದರು, ಸ್ವಾತಂತ್ರ್ಯವೀರ ಸಾವರಕರ ಮುಂತಾದ ಮಹಾಪುರುಷರೂ ಇದೇ ನಿಷ್ಕರ್ಷೆಗೆ ಬಂದಿದ್ದರು. ಹಿಂದು ಸಮಾಜವನ್ನು ಸಂಘಟಿಸುವ, ದೋಷಮುಕ್ತವನ್ನಾಗಿಸುವ, ಭಾರತಮಾತೆಯನ್ನು ಮತ್ತೊಮ್ಮೆ ಜಗದ್ಗುರುವನ್ನಾಗಿಸುವ ಉದ್ದೇಶದಿಂದ ಡಾ. ಹೆಡಗೇವಾರರು 1925ರಲ್ಲಿ ಸಂಘವನ್ನು ಸ್ಥಾಪಿಸಿದರು. ಈ ಮಹಾನ್ ಗುರಿಗಾಗಿ ದುಡಿಯುವ ಯೋಗ್ಯ ಕಾರ್ಯಕರ್ತರ ನಿರ್ಮಾಣಕ್ಕಾಗಿ ಶಾಖಾ ಪದ್ಧತಿ ಪ್ರಾರಂಭವಾಯಿತು. ಇಂಥ ಮಹಾನ್  ಲಕ್ಷ್ಯ ಹೊಂದಿರುವವರ ಕಣ್ಮುಂದೆ ಭಾರತದ ಎಲ್ಲ ಪರಂಪರೆಯನ್ನು ಪ್ರತಿನಿಧಿಸುವ ಭಗವಾಧ್ವಜವನ್ನು ಗುರುವನ್ನಾಗಿ ಸ್ವೀಕರಿಸಲಾಗಿದೆ. ಏಕೆಂದರೆ ವ್ಯಕ್ತಿ ಎಷ್ಟೇ ಶ್ರೇಷ್ಠನಾಗಿರಲಿ ಅವನು ಶಾಶ್ವತನೂ ಅಲ್ಲ, ಅವನಲ್ಲಿ ಕೆಡುಕುಗಳೂ ಬಂದುಬಿಡಬಹುದು. ಎಂದಿಗೂ ವ್ಯಕ್ತಿಪೂಜೆಗಿಂತ ಧ್ಯೇಯದಾರಾಧನೆಯೇ ಹಿರಿದಾದದ್ದು. ಹೀಗಾಗಿ ತತ್ತ್ವರೂಪಿ ನಮಗೆ ಗುರು.
ಪರಮಪವಿತ್ರ ಭಗವಾಧ್ವಜ ಜ್ಞಾನದ ಸಂಕೇತ. ಉದಿಸುವ ಸೂರ್ಯನ ಬಣ್ಣ ಕೇಸರಿ. ಹಾಗೆಂi ಕೇಸರಿ ತ್ಯಾಗದ ಪರಮಾದರ್ಶವನ್ನೂ ಪ್ರತಿನಿಧಿಸುತ್ತದೆ – ಸನ್ಯಾಸಿಗಳು ಇದೇ ಬಣ್ಣದ ವಸ್ತ್ರ ಧರಿಸುತ್ತಾರೆ. ಭಗವಾ ಧರ್ಮಕ್ಕೇ ಜಯವೆಂಬ ನಮ್ಮ ಶ್ರದ್ಧೆಯ ಪ್ರತೀಕವೂ ಹೌದು. ಶ್ರೀರಾಮನ, ಶ್ರೀಕೃಷ್ಣನ, ರಾಣಾ ಪ್ರತಾಪನ, ಛತ್ರಪತಿ ಶಿವಾಜಿ ಮಹಾರಾಜರ ರಥಗಳ
ಮೇಲೆ ರಾರಾಜಿಸಿದ್ದ ಭಗವಾಧ್ವಜ ನಮ್ಮ ಹಿರಿಯರ ಸಾಹಸ, ಶೌರ್ಯಗಳನ್ನು ನೆನಪಿಸುತ್ತದೆ. ಇವೆಲ್ಲ ಕಾರಣಗಳಿಂದಾಗಿಯೇ
ಭಗವಾಧ್ವಜ ಹಿಂದುಧರ್ಮದ ಧ್ವಜವಾಗಿ ಸನಾತನ ಕಾಲದಿಂದಲೂ ಶೋಭಿಸುತ್ತಿದೆ. ಈ ಧ್ವಜದ ಮುಂದೆ ಸಂಘದ ಸ್ವಯಂಸೇವಕ ಪ್ರತಿನಿತ್ಯ ಸಾಧನೆ ಮಾಡುತ್ತಾನೆ, ಶರೀರ-ಮನ-ಬುದ್ಧಿಗಳನ್ನು ದೇಶಕಾರ್ಯಕ್ಕೆ ಸಜ್ಜುಗೊಳಿಸುತ್ತಾನೆ, ಭಾರತಮಾತೆಯ ವೈಭವಕ್ಕಾಗಿ ಜೀವನಸರ್ವಸ್ವವನ್ನೂ ಅರ್ಪಿಸುವ ಸಂಕಲ್ಪವನ್ನು ಮಾಡುತ್ತಾನೆ. ನಿತ್ಯ ಗುರುವಿನ ಮುಂದೆ ಸಾಧನಾರತ ಸ್ವಯಂಸೇವಕನಿಗೆ, ತನ್ನ ಗುರುವನ್ನು ಪೂಜಿಸುವ ಈ ಸಂದರ್ಭ ಅತ್ಯಂತ ಸೌಭಾಗ್ಯದ್ದು. ವರ್ಷವಡೀ ತನು-ಮನಗಳಿಂದ ದೇಶಕಾರ್ಯದಲ್ಲಿ ಲೀನವಾಗಿರುವ ಸ್ವಯಂಸೇವಕನಿಗೆ ಇಂದು ಧನವನ್ನೂ ಸಮರ್ಪಿಸುವ ಅಪರೂಪದ
ಅವಕಾಶ!
ಹೂವುಗಳಿಂದ ಪೂಜಿಸುವ ಕ್ರಿಯೆಯ ಹಿಂದೆ ಇರುವ ಭಾವ ಸಮರ್ಪಣೆಯದ್ದೇ. ಇದ್ದುದೆಲ್ಲವ ಕೊಟ್ಟು ಬರಿದಾಗಿ ಧ್ಯೇಯರೂಪವೇ ಆದ ಡಾಕ್ಟರ್‌ಜಿಯವರ ಜೀವನ ನಮ್ಮ ಮುಂದಿರುವ ಆದರ್ಶ. ಸಮರ್ಪಿತ ಸ್ವಯಂಸೇವಕರ ಕ್ರಿಯಾಶಕ್ತಿಯಿಂದಾಗಿಯೇ ಎಲ್ಲ ವಿರೋಧಗಳನ್ನು ಮೆಟ್ಟಿನಿಂತು ಹಿಂದು ಸಮಾಜಕ್ಕೆ ಶಕ್ತಿತುಂಬುವಲ್ಲಿ ಯಶಸ್ವಿಯಾಗಿದೆ. ಸಮಾಜದ
ಹಿರಿಯರು ಸಂಘವನ್ನು ಆಶಾಕಿರಣವಾಗಿ ನೋಡುತ್ತಿದ್ದಾರೆ. ಮತ್ತೆ ಜಗದ್ಗುರುವಾಗಲಿ ಭಾರತ. ಇಡೀ ಜಗತ್ತು ಮತೀಯ ಭಯೋತ್ಪಾದನೆಯಿಂದ ಬೆಚ್ಚಿಬಿದ್ದಿದೆ, ಅತಿಯಾದ ವ್ಯಕ್ತಿಕೇಂದ್ರಿತ ಚಿಂತನೆಯಿಂದಾಗಿ ಸಮಾಜಜೀವನ ಉಧ್ವಸ್ಥವಾಗಿದೆ, ಮಿತಿಮೀರಿದ ಭೋಗವಾದದಿಂದಾಗಿ ಪ್ರಕೃತಿಯ ಸಂತುಲನ ಹದಗೆಟ್ಟು, ಜಗತ್ತು ವಿನಾಶದ ಅಂಚಿನೆಡೆಗೆ ನಡೆದಿದೆ. ಇದಕ್ಕೆಲ್ಲ ಭಾರತೀಯ ಜೀವನಶೈಲಿ, ಹಿಂದು ಚಿಂತನೆಗಳೇ ಪರಿಹಾರ. ಸಂಘದ ಶಕ್ತಿ ಬೆಳೆದಂತೆಲ್ಲ ಹಿಂದು ಸಮಾಜದಲ್ಲಿ ವಿಶ್ವಾಸವೂ ಬೆಳೆದಿದೆ, ಜಗತ್ತಿನಲ್ಲಿ ಮತ್ತೊಮ್ಮೆ ಭಾರತದ ಬಗ್ಗೆ ಗೌರವ ಹೆಚ್ಚುತ್ತಿದೆ. ಭಾರತದ ಯೋಗ, ಪ್ರಾಣಾಯಾಮ, ಧ್ಯಾನ, ಆಯುರ್ವೇದ, ಕುಟುಂಬ ಪದ್ಧತಿ, ಕಲೆ-ಸಾಹಿತ್ಯ-ಸಂಗೀತಗಳು
ಜಗತ್ತನ್ನು ಆವರಿಸಿವೆ.
ಈ ಸಂದರ್ಭದಲ್ಲಿ ಎಲ್ಲ ಸಜ್ಜನಶಕ್ತಿ ಭಾರತಮಾತೆಯನ್ನು ಜಗದ್ಗುರುವನ್ನಾಗಿಸುವ, ತನ್ಮೂಲಕ ಜಗತ್ತಿನ ಕಲ್ಯಾಣದಹೆಬ್ಬಯಕೆಯನ್ನು ಧರಿಸಿ ಕಾರ್ಯಪ್ರವೃತ್ತವಾಗಲೇಬೇಕು. ಇದಕ್ಕಾಗಿ ಸಂಘಕಾರ್ಯದ ವಿಸ್ತಾರವಾಗಲೇಬೇಕು. ಈ ನೆಲೆಯಲ್ಲಿ ನಾವೆಲ್ಲರೂ ಇನ್ನಷ್ಟು ಹೆಚ್ಚು ಸಮಯ ಕೊಟ್ಟು ಸಂಘಕಾರ್ಯದಲ್ಲಿ, ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ತೊಡಗಬೇಕು. ಸಂಘಕಾರ್ಯಕ್ಕಾಗಿ ಸರ್ವಸ್ವವನ್ನು ಧಾರೆಯೆರೆದಿರುವ ಅನೇಕ ಹಿರಿಯರ ಆದರ್ಶ ನಮ್ಮ ಮುಂದೆ ಇದ್ದೇ ಇದೆ. ಅನೇಕ ಹೂಗಳು ಅರಳುತ್ತವೆ, ಅರಳಿ ಬಾಡಿ ಉದುರಿ ಹೋಗುತ್ತವೆ, ಅವನ್ನು ಯಾರು ತಾನೆ ಲೆಕ್ಕಿಸುತ್ತಾರೆ ? ಆದರೆ, ಗಜೇಂದ್ರನು
ಶ್ರೀಹರಿಯ ಪೂಜೆಗೆ ಕಿತ್ತು ಅರ್ಪಿಸಿದ ತಾವರೆಯೇ ಧನ್ಯ. ಅಂತಯೇ ದೇಶಮಾತೆಯ ಬಿಡುಗಾಗಿ ಅರ್ಪಿತವಾದ ಜೀವನಪುಷ್ಪಗಳೇ ಧನ್ಯ, ಪಾವನ ಈ ಸಾವರಕರರ ಅಮರವಾಣಿ ನಮಗೆ ಪ್ರೇರಣೆ.

‘ಭಾರತ್ ಮಾತಾ ಕೀ ಜಯ್ ‘ಈ ಸಂಕಲ್ಪದೊಂದಿಗೆ, ಪರಮ ಪವಿತ್ರ ಭಗವೆಯ ಅಡಿಯಲ್ಲಿ ನಮ್ಮ ಸಾಧನೆಯನ್ನು ಇನ್ನಷ್ಟು ತೀವ್ರಗೊಳಿಸೋಣ.

ಲೇಖನ: ರಘುನಂದನ್ , ಸಂಯೋಜಕರು ಪ್ರಜ್ಞಾ ಪ್ರವಾಹ, (ದಕ್ಷಿಣ ಮಧ್ಯ ಕ್ಷೇತ್ರ)

Leave a Reply

Your email address will not be published.

This site uses Akismet to reduce spam. Learn how your comment data is processed.