- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತರು
“Hindu- a dying race “(ಹಿಂದು – ನಶಿಸುತ್ತಿರುವ ಒಂದು ಜನಾಂಗ). ಇಂತಹುದೊಂದು ಪುಟ್ಟ ಪುಸ್ತಕವನ್ನು ಬರೆದಿರುವವರು ಮಿಲಿಟರಿಯಲ್ಲಿ ವೈದ್ಯಾಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಉಪೇಂದ್ರೋ ನಾಥ್ ಮುಖರ್ಜಿ (ಯು.ಎನ್.ಮುಖರ್ಜಿ). ಅವರು ಆ ಪುಸ್ತಕವನ್ನು ಬರೆದಿದ್ದು 1914ರಲ್ಲಿ, ಈಗ್ಗೆ ಬರೋಬ್ಬರಿ 112 ವರ್ಷ ಗಳ ಹಿಂದೆ. ಅಷ್ಟು ವರ್ಷಕ್ಕೂ ಹಿಂದೆಯೇ ಅವರಿಗೆ ಹಿಂದು ಸಮುದಾಯದ ಹಣೆಬರಹ ಗೊತ್ತಾಗಿತ್ತು. ಅಖಂಡ ಭಾರತ ಹೋಳಾಗಿ ಪಾಕಿಸ್ತಾನವೆಂಬ ಪ್ರತ್ಯೇಕ ದೇಶ ನಿರ್ಮಾಣವಾಗಬಹುದೆಂಬ ಅಂದಾಜೂ ಅವರಿಗಿತ್ತು. ಅವರ ಈ ನಿಖರ ಭವಿಷ್ಯವಾಣಿಗೆ, ಆಧಾರವಾಗಿದ್ದದ್ದು 1911ರ ಜನಗಣತಿ ದಾಖಲೆ.
ಆ ಸಮಯದಲ್ಲಿ ಆರೆಸ್ಸೆಸ್ ಇರಲಿಲ್ಲ. ಸಾವರ್ಕರ್ ಇನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ದರು. ಹಿಂದು ಮಹಾಸಭಾ ಅಸ್ತಿತ್ವಕ್ಕೇ ಬಂದಿರಲಿಲ್ಲ. ಹಾಗಿದ್ದರೂ ಮುಖರ್ಜಿಯವರಿಗೆ, ಕಳೆದ ನೂರು ವರ್ಷಗಳಲ್ಲಿ ನಡೆದ ಹಿಂದು ನರಮೇಧ ಮತ್ತು ದೇಶದ ಮೂರನೇ ಒಂದು ಭಾಗ ಪ್ರದೇಶದಿಂದ ಹಿಂದುಗಳನ್ನು ನಿರ್ವಸಿತರನ್ನಾಗಿಸಿದ್ದು, ಇದನ್ನೆಲ್ಲ ಕಣ್ಣಾರೆ ಕಂಡರೂ ಸೆಕ್ಯುಲರ್ ಹಿಂದುಗಳೆಂಬ ಹಣೆಪಟ್ಟಿ ತೊಟ್ಟ ರಾಜಕೀಯ ಮುಖಂಡರು ಮೌನಕ್ಕೆ ಮೊರೆಹೋಗಿದ್ದು – ಇವೆಲ್ಲದರ ಅರಿವು ಚೆನ್ನಾಗಿಯೇ ಇತ್ತು.
ಈ ಪುಸ್ತಕ ಪ್ರಕಟವಾಗುತ್ತಿದ್ದಂತೆಯೇ ಕೆಲವು ಪ್ರಾಮಾಣಿಕ, ದೇಶಪ್ರೇಮಿ ಹಿಂದುಗಳು ನಿದ್ದೆ ಬಿಟ್ಟೆದ್ದರು. ಹೊದ್ದಿದ್ದ ಹಚ್ಚಡವನ್ನು ಕಿತ್ತೆಸೆದರು. ದೇಶಪ್ರೇಮಿ ಪಂಡಿತ್ ಮದನಮೋಹನ ಮಾಲವೀಯರ ನಾಯಕತ್ವದಲ್ಲಿ ಅದೇ ವರ್ಷ (1915) ಹಿಂದು ಮಹಾಸಭಾ ಸಂಘಟನೆ ಪ್ರಾರಂಭವಾಯಿತು. ಅನಂತರ ಆರ್‍ಯ ಸಮಾಜವೂ ಹಿಂದು ಸಮುದಾಯದ ಜನಸಂಖ್ಯೆ ಕುಸಿತವಾಗದಂತೆ ಇತರೆ ಮತಗಳಿಗೆ ಮತಾಂತರಗೊಂಡವರನ್ನು ಮರಳಿ ಹಿಂದು ಧರ್ಮಕ್ಕೆ ಕರೆ ತರುವ ‘ಶುದ್ಧೀಕರಣ ಚಳವಳಿ’ಗೆ ಚಾಲನೆ ಕೊಟ್ಟಿತು. ಆರ್‍ಯ ಸಮಾಜದ ಈ ಮಹತ್ವದ ಕಾರ್‍ಯಕ್ಕೆ ಮುಸ್ಲಿಂ ಪಾತಕಿಯೊಬ್ಬ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆಗೈಯುವ ಮೂಲಕ ತಾತ್ಕಾಲಿಕ ತಡೆಗೋಡೆ ನಿರ್ಮಿಸಿಬಿಟ್ಟ.
ಅನಂತರ 1925ರ ವಿಜಯದಶಮಿಯಂದು ಆರಂಭಗೊಂಡಿದ್ದೇ ‘ಆರೆಸ್ಸೆಸ್’ ಎಂದು ಈಗ ಜನಪ್ರಿಯವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಡೀ ಹಿಂದು ಸಮಾಜವನ್ನು ಸಂಘಟಿಸಿ, ಅದನ್ನು ಸಶಕ್ತಗೊಳಿಸಲು ಡಾ. ಹೆಡಗೇವಾರ್ ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಅದೆಲ್ಲ ಈಗ ಇತಿಹಾಸ. ಹಿಂದುತ್ವ, ಹಿಂದು ಅಸ್ಮಿತೆಯನ್ನು ಜನರೆದೆಯಲ್ಲಿ, ಭಾವನೆಗಳಲ್ಲಿ ಪ್ರಜ್ವಲಿಸಲು ಪ್ರಯತ್ನಿಸಿದ ಲಾಲಾ ಲಜಪತರಾಯ್, ಬಿ.ಎಸ್. ಮೂಂಜೆ, ಅನಂತರ ವಿನಾಯಕ ದಾಮೋದರ ಸಾವರ್ಕರ್ ಮೊದಲಾದ ಪ್ರಾತಃಸ್ಮರಣೀಯರ ಕೊಡುಗೆ ಸ್ಮರಣಾರ್ಹ. ಆದರೆ ಇವರೆಲ್ಲರ ಅಹರ್ನಿಶಿ ಪ್ರಯತ್ನ, ಹೋರಾಟದ ಹೊರತಾಗಿಯೂ ಮುಖರ್ಜಿಯವರ “ಹಿಂದು -ನಶಿಸುತ್ತಿರುವ ಒಂದು ಜನಾಂಗ” ಎಂಬ ಮಾತನ್ನು ಹುಸಿಗೊಳಿಸಲಾಗಲಿಲ್ಲ.
ಗಾಂಧೀಜಿಯವರ ಅಹಿಂಸೆ, ಜೊತೆಗೆ ಮುಸ್ಲಿಂ ಮೂಲಭೂತವಾದದ ಭೂತದ ಆರ್ಭಟ ಮಾನವ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹಿಂದುಗಳ ಸಾಮೂಹಿಕ ಹತ್ಯೆಗೆ ಕಾರಣವಾಯಿತು. ಕಾಬೂಲ್‌ನಿಂದ ಡಾಕಾದವರೆಗೆ ಶರಿಯಾ ಕಾನೂನು ಹಿಂದುಗಳ ಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸಿತು. ಈಗ ಹಿಂದುಗಳದ್ದೇ, ಹಿಂದುಗಳಿಗಾಗಿಯೇ ಇರುವ ಈ ಭಾರತವೆಂಬ ಭಾರತದಲ್ಲಿ ಹೊಸ ಸಂವಿಧಾನವು ಹಿಂದುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹಿಂದುಗಳದ್ದೇ ಆದ ಈ ದೇಶದಲ್ಲಿ ಮುಸ್ಲಿಮರಿಗೆ ಶರಿಯಾ ಕಾನೂನು ಪಾಲನೆಗೆ ಅನುಮತಿ, ಧಾರ್ಮಿಕ ಮತಾಂತರಕ್ಕೆ ಅನುಮತಿ, ವೈಯಕ್ತಿಕ ಪ್ರತ್ಯೇಕ ಕಾನೂನುಗಳಿಗೆ ಅವಕಾಶ, ಹಿಂದು ಯಾತ್ರಾ ಸ್ಥಳಗಳ ಮೇಲೆ ನಿಯಂತ್ರಣಕ್ಕೂ ಮುಸ್ಲಿಮರಿಗೆ ಅವಕಾಶ – ಇವೆಲ್ಲ ಈಗಲೂ ಬದಲಾಗಿಲ್ಲ. ಹಿಂದು ಕುಟುಂಬಗಳು ಕೇವಲ ಒಂದು ಮಗುವಿಗೆ ಸೀಮಿತಗೊಳಿಸಿ ತಾವಾಗಿಯೇ ಸಂತಾನ ನಿಯಂತ್ರಣಕ್ಕೆ ಜೋತು ಬಿದ್ದಿದ್ದಾರೆ. ‘ಮಕ್ಕಳಿರಲವ್ವ ಮನೆ ತುಂಬ’ ಎಂಬ ಹಳೆಯ ಗಾದೆ ಮಾತು ಹೇಳಿದರೆ ‘ಇವನಿಗೆಲ್ಲೋ ಭ್ರಾಂತು’ ಎಂದು ಮೂಗು ಮುರಿಯುವವರೇ ಹೆಚ್ಚು. ಹಿಂದು ಸಮಾಜದ ಬಲವರ್ಧನೆ, ಸಂಖ್ಯಾವರ್ಧನೆ ದೃಷ್ಟಿಯಿಂದ ಆರೆಸ್ಸೆಸ್ ಮುಖ್ಯಸ್ಥ ಡಾ. ಮೋಹನ್ ಭಾಗವತರು ‘ಪ್ರತಿಯೊಂದು ಹಿಂದು ಕುಟುಂಬವೂ ಮೂರು ಮಕ್ಕಳಿರುವಂತೆ ನೋಡಿಕೊಳ್ಳಬೇಕು’ ಎಂಬ ಕಳಕಳಿಯ ಕರೆ ನೀಡಿದರೆ, ‘ಹಾಗಿದ್ದರೆ ಮೋಹನ್ ಭಾಗವತರೇಕೆ ಮದುವೆ ಮಾಡಿಕೊಂಡಿಲ್ಲ?’ ಎಂದು ಉಡಾಫೆಯ ಪ್ರಶ್ನೆ ಕೇಳುವ ಹಿಂದುಗಳಿಗೇನೂ ಕೊರತೆಯಿಲ್ಲ. ಹಿಂದು ಸಮಾಜದ ಬಲವರ್ಧನೆ ಬಗ್ಗೆ ಅಂಥವರಿಗೆ ಯಾವ ಕಾಳಜಿಯೂ ಇರುವುದಿಲ್ಲವೆನ್ನುವುದು ಸ್ಪಷ್ಟ. 1951ರಲ್ಲಿ ಶೇ. 9.8ರಷ್ಟಿದ್ದ ಭಾರತದ ಮುಸ್ಲಿಂ ಜನಸಂಖ್ಯೆ 2011ರಲ್ಲಿ ಶೇ. 14.2ಕ್ಕೆ ಏರಿಕೆ. ಹಿಂದು ಜನಸಂಖ್ಯೆ ಇದೇ ಅವಧಿಯಲ್ಲಿ ಶೇ. 84.1ರಿಂದ ಶೇ. 79.8ಕ್ಕೆ ಇಳಿಕೆ. ಈಗ ಜನಗಣತಿಯಾದರೆ, ಮುಸ್ಲಿಂ ಜನಸಂಖ್ಯೆಯ ಪ್ರಮಾಣ 20 ಕೋಟಿ ದಾಟಿದರೆ ಅಚ್ಚರಿಯೇನೂ ಇಲ್ಲ.
ಇಡೀ ದೇಶದ್ದು ಹಾಗಿರಲಿ, ಕರ್ನಾಟಕ ರಾಜ್ಯದ ಅಂಕಿಸಂಖ್ಯೆಯನ್ನೇ ಪರಿಗಣಿಸಿ. ಈಚಿನ ಅಧ್ಯಯನ ವರದಿಯೊಂದರ ಪ್ರಕಾರ, ಮುಸ್ಲಿಂ ಜನ ಸಂಖ್ಯೆಯ ಪ್ರಮಾಣ – ಬೀದರ್ ಶೇ. 35, ಗುಲಬರ್ಗಾ ಶೇ. 22.5, ರಾಯಚೂರು ಶೇ. 30, ಕೊಪ್ಪಳ ಶೇ.32, ಬಳ್ಳಾರಿ ಶೇ. 30, ಬಿಜಾಪುರ ಶೇ. 36, ಧಾರವಾಡ ಶೇ. 22, ದ.ಕನ್ನಡ ಶೇ. 22, ಕೋಲಾರನಗರ ಶೇ. 46…. ಹೀಗೆ ಎಲ್ಲ ಜಿಲ್ಲೆಗಳಲ್ಲೂ ಮುಸ್ಲಿಂ ಜನಸಂಖ್ಯೆ ವ್ಯವಸ್ಥಿತವಾಗಿ ಏರಿಕೆಯಾಗುತ್ತಲೇ ಇದೆ. ಈ ಪರಿಯಲ್ಲಿ ಬೆಳೆಯುತ್ತಿರುವ ಮುಸ್ಲಿಂ ಮತದಾರರೇನಾದರೂ ಒಂದಾಗಿ ಒಂದೇ ಪಕ್ಷಕ್ಕೆ (ಬಿಜೆಪಿ-ಜೆಡಿಎಸ್‌ಗೆ ಖಂಡಿತ ಅವರು ತಮ್ಮ ಮುದ್ರೆ ಒತ್ತುವುದಿಲ್ಲ) ಮತ ಚಲಾಯಿಸಿದಲ್ಲಿ ರಾಜ್ಯದಲ್ಲಿ ಮುಸ್ಲಿಂ ಬಾಹುಳ್ಯದ ಸರ್ಕಾರ ಅಧಿಕಾರಕ್ಕೇರಿ ಹಿಂದುಗಳ ಉಸಿರಾಟ ಸ್ತಬ್ಧಗೊಂಡರೆ ಅದೇನೂ ಉತ್ಪ್ರೇಕ್ಷೆಯಲ್ಲ.
ಇಷ್ಟೆಲ್ಲ ಸಂಭಾವ್ಯ ಅಪಾಯಗಳು ಕಾಲಕೆಳಗೇ ಇದ್ದರೂ ನಮ್ಮ ಹಿಂದು ಕುಟುಂಬದ ಪೋಷಕರು ನಿಶ್ಚಿಂತರಾಗಿ ತಮ್ಮ ಮಕ್ಕಳನ್ನು ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಜರ್ಮನಿ, ಅರಬ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಮುಗಿಬಿದ್ದು ಅಟ್ಟುತ್ತಿದ್ದಾರೆ. ಏಕೆಂದರೆ ಅಲ್ಲೆಲ್ಲ ಭಾರತಕ್ಕಿಂತ ದುಪ್ಪಟ್ಟು, ಮೂರು ಪಟ್ಟು ವೇತನ, ಐಷಾರಾಮಿ ಜೀವನ. ಅಲ್ಲಿಗೆ ಹಾರಿದ ಹಲವರು ಅಲ್ಲೇ ಮದುವೆಯಾಗಿ, ಆಯಾ ದೇಶದ ನಾಗರಿಕತ್ವ ಪಡೆಯುವ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನು ವಿದೇಶಗಳಿಗೆ ಹೋಗಲಾಗದ ಹಲವು ಹೆಣ್ಣು ಮಕ್ಕಳು ‘ಲವ್ ಜಿಹಾದ್’ಗೆ ಬಲಿಯಾಗಿ ತಮ್ಮ ಬದುಕನ್ನು ನರಕಮಯ ಗೊಳಿಸಿಕೊಳ್ಳುತ್ತಿರುವುದಕ್ಕೆ ನಿದರ್ಶನಗಳು ನೂರಾರು. ನೂಪುರ್ ಶರ್ಮಾ ಎಂಬ ಗಟ್ಟಿಗಿತ್ತಿ ಮಹಿಳೆ ಇಸ್ಲಾಂ ಅನ್ನು ಟೀಕಿಸಿದ್ದಕ್ಕೆ ಆಕೆಯ ವಿರುದ್ಧ ಫತ್ವಾ , ಹತ್ಯೆಗೆ ಯತ್ನ, ಅತ್ಯಾಚಾರ ಬೆದರಿಕೆ. ಒಂದೇ? ಎರಡೇ? ಕಳೆದೆರಡು ವರ್ಷಗಳಿಂದ ಆಕೆಯ ವೈಯಕ್ತಿಕ ಬದುಕನ್ನೇ ಬರ್ಬಾದ್ ಮಾಡಲಾಗಿದೆ. ಮನೆ ಬಿಟ್ಟು ಹೊರಗೆಲ್ಲೂ ಆಕೆ ಹೋಗುವಂತಿಲ್ಲ. (ಬಿಜೆಪಿ ಕೂಡ ಆಕೆಯ ರಕ್ಷಣೆಗೆ ಮುಂದಾಗಲಿಲ್ಲ!) ಹಿಂದುಗಳು ಬಹುಸಂಖ್ಯಾತ ಸಮುದಾಯವೆನಿಸಿಕೊಂಡಿದ್ದರೂ ಹಿಂದು ಮಹಿಳೆಯರಿಗೆ ಅಪಮಾನ, ಅತ್ಯಾಚಾರದ ಬೆದರಿಕೆಗಳು ಬರುತ್ತಲೇ ಇವೆ. ಭಾರತದ ಬಹುತೇಕ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಹಿಂದು ಮಹಿಳೆಯರು ಸಂಜೆಯಾದೊಡನೆ ಒಬ್ಬಂಟಿಯಾಗಿ ಓಡಾಡಲಾರದ ಭಯಾನಕ ಪರಿಸ್ಥಿತಿ.
ದೇಶದ ಪ್ರಮುಖ ನಗರಗಳಿಂದ ಹಿಡಿದು ತಾಲೂಕು ಮಟ್ಟದ ನಗರ ಗಳವರೆಗೆ ವ್ಯಾಪಾರ-ವ್ಯವಹಾರಗಳಲ್ಲಿ ‘ಬಾಂಧವರದ್ದೇ’ ಅಧಿಪತ್ಯ. ಅದು
ಗುಜರಾತಿನ ಜಾಮ್ ನಗರ ಇರಲಿ, ಲಕ್ನೋದ ಹಜರತ್‌ಗಂಜ್ ಇರಲಿ, ಮುಂಬಯಿಯ ಹಾಜಿ ಆಲಿ, ಗೋರಖ್‌ಪುರದ ಹಿಂದಿ ಬಜಾರ್, ದೆಹಲಿಯ
ಕರೋಲ್‌ಭಾಗ್, ಬೆಂಗಳೂರಿನ ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ, ಶಿವಾಜಿ ನಗರ, ಕೊನಗೆ ಅಪ್ಪಟ ಮಲೆನಾಡಿನ ಸಾಂಸ್ಕೃತಿಕ ಕೇಂದ್ರಗಳೆನಿಸಿರುವ ತೀರ್ಥಹಳ್ಳಿ, ಸಾಗರ… ಇಲ್ಲೆಲ್ಲ ವ್ಯಾಪಾರ ವ್ಯವಹಾರಗಳ ಮೇಲೆ ಬಿಗಿ ನಿಯಂತ್ರಣ ಅವರದ್ದೇ. ಬಟ್ಟೆ ಹೊಲಿಸಲು ದರ್ಜಿ ಬಳಿಗೆ ಹೋಗಿ, ಅಲ್ಲಿರುವವರೆಲ್ಲ ಅಲ್ಲಾಹುವಿನ ಆರಾಧಕರೇ. ಡಾಬಾ, ಹೋಟೆಲ್, ಜ್ಯುವೆಲ್ಲರಿ, ಲಾಡ್ಜ್, ಸಾರಿಗೆ ವ್ಯವಹಾರ, ಓಲಾ, ಉಬರ್ ಚಾಲಕರು…ಎಲ್ಲರೂ ಶುಕ್ರವಾರದ ಆರಾಧಕರು.
ಹೀಗೇಕಾಯ್ತು? ಕೆಲ ಹಿಂದುಗಳು ತಮ್ಮ ಮನೆತನದ ಕುಲಕಸಬುಗಳಾದ ದರ್ಜಿ, ಬಟ್ಟೆ ವ್ಯಾಪಾರ, ನೇಕಾರಿಕೆ, ಕಾಳುಕಡ್ಡಿ ವ್ಯಾಪಾರ, ಕೃಷಿ, ಹೈನುಗಾರಿಕೆ ಮೊದಲಾದ ವೃತ್ತಿಗಳಿಗೆ ಎಳ್ಳುನೀರು ಬಿಟ್ಟು, ತಮ್ಮ ಮಕ್ಕಳು ಯಾವುದೋ ದೇಶದಲ್ಲಿ ಯಾವುದೋ ಕಂಪನಿಯ ಕೂಲಿಯಾಳಾಗಿ ಹಣ ಗಳಿಸುವುದೇ ಶ್ರೇಷ್ಠ ಎಂದು ಭ್ರಮಿಸಿದರು. ದೇಶಕ್ಕೆ ನನ್ನ ಕುಟುಂಬದ ಕೊಡುಗೆಯೇನು ಎಂಬ ಬಗ್ಗೆ ಬಹಳಷ್ಟು ಹಿಂದುಗಳು ತಲೆಕೆಡಿಸಿಕೊಳ್ಳಲೇ ಇಲ್ಲ. ಈಗಲೂ ಅಷ್ಟೆ. ತಮ್ಮ ಮಕ್ಕಳು ವಿದೇಶಿ ಕಂಪನಿಗಳ ಗುಲಾಮರಾಗಿದ್ದರೂ ಪರವಾಗಿಲ್ಲ. ಹಣವಂತರಾದರೆ ಸಾಕು. ವಿಲಾಸಿ ಕಾರುಗಳಲ್ಲಿ ಓಡಾಡಿದರೆ ಅದಕ್ಕಿಂತ ಸೌಭಾಗ್ಯದ ಸಂಗತಿಯಿಲ್ಲ ಎಂದು ಚಿಂತಿಸಿದವರೇ ಜಾಸ್ತಿ. ಕೆಲವರಂತೂ ತಮ್ಮ ಜಾತಿಯೇ ಮೇಲು, ಉಳಿದವರೆಲ್ಲ ಕೀಳು ಎಂಬ ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದಾರೆ.ಬಹು ಸಂಖ್ಯಾತರಾಗಿದ್ದರೂ ನರಸತ್ತಂತವರಂತಿದ್ದಾರೆ.
ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಇದೀಗ ದೇಶದಾದ್ಯಂತ, ರಾಜ್ಯದಲ್ಲೂ ಹಿಂದು ಸಮಾಜೋತ್ಸವಗಳು ಸಡಗರ, ಸಂಭ್ರಮದಿಂದ ನಡೆಯುತ್ತಿವೆ. ಹಿಂದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ, ಹಿಂದುಗಳಲ್ಲಿ ಸ್ವಾಭಿಮಾನ, ದೇಶಪ್ರೇಮವನ್ನು ಬಡಿದೆಬ್ಬಿಸುವ ಸ್ವಾಗತಾರ್ಹ ಪ್ರಯತ್ನ ನಡೆದಿದೆ. ಕೇಸರಿ ಬಾವುಟವೆಂದರೇನೇ ಹೆದರುತ್ತಿದ್ದವರು ಇಂದು ಅದೇ ಬಾವುಟ ಹಿಡಿದು, ಕೇಸರಿಶಾಲು ಹೊದ್ದು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರಂತೂ ದುರ್ಗಾಮಾತೆಯಂತೆ ಹೊರಹೊಮ್ಮಿದ್ದಾರೆ. ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರೂ ಧೈರ್‍ಯ ವಹಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯದ ಮೂರು ಸಾವಿರಕ್ಕೂ ಹೆಚ್ಚು ಕಡೆ, ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹಿಂದು ಸಮಾಜೋತ್ಸವ ನಡೆಯಲಿದೆ ಎಂದು ಆರೆಸ್ಸೆಸ್ ಅಂಬೋಣ.
ಆದರೆ ಇಷ್ಟಾದರೆ ಸಾಕೆ? ಒಂದು ದಿನ ಕೇಸರಿ ಬಾವುಟ ಹಿಡಿದು, ಕೇಸರಿ ಶಾಲು ಹೆಗಲಿಗೇರಿಸಿ ‘ಭಾರತ್ ಮಾತಾಕೀ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಮುಗಿಲೆತ್ತರ ಮುಟ್ಟಿಸಿದರೆ ಸಾಕೆ? ಹಿಂದು ಸಮಾಜದ ಸ್ಥಿತಿ ಈಗ ಹೇಗಿದೆಯೆಂದರೆ ಚದುರಂಗದಾಟದಲ್ಲಿ ಕಾಯಿಗಳು ರಾಜನನ್ನು ಸುತ್ತಲೂ ಸುತ್ತುವರಿದಂತೆ, ಕಾಡಿನಲ್ಲಿ ಕಾಡಿನ ರಾಜ ಸಿಂಹವನ್ನು ತೋಳಗಳು ಮುತ್ತಿಗೆ ಹಾಕಿದಂತೆ, ಕೌರವರು ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದಂತೆ ಆಗಿದೆ. ಚದುರಂಗದಾಟದಲ್ಲಿ ಗೆಲ್ಲುವುದು ಬೇಡವೆ? ಸಿಂಹ ಎಂದಿನಂತೆ ವನರಾಜನಾಗುವುದು ಬೇಡವೆ? ಚಕ್ರವ್ಯೂಹದಿಂದ ಅಭಿಮನ್ಯುವನ್ನು ರಕ್ಷಿಸುವುದು ಬೇಡವೆ?
ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಈ ಜನಪ್ರಿಯ ಕವನವನ್ನು ಮತ್ತೆ ಮತ್ತೆ ಮನನ ಮಾಡಿ : ಇರುಳ ವಿರುದ್ಧ ಬೆಳಕಿನ ಯುದ್ಧ/ ಕೊನೆಯಿಲ್ಲದ ಕಾದಾಟ/ ತಡೆಯೇ ಇಲ್ಲದೆ ನಡೆಯಲೇಬೇಕು/ ಸೋಲಿಲ್ಲದ ಹೋರಾಟ/
ಈಗ ನಡೆದಿದ್ದು ಸಾಂಕೇತಿಕ ಹಿಂದು ಸಮಾಜೋತ್ಸವ. ಆದರೆ ಅದು ನಿತ್ಯೋತ್ಸವ ಆಗಬೇಕು. ಹಿಂದು ಅಸ್ಮಿತೆ, ಹಿಂದು ಸ್ವಾಭಿಮಾನ ಜಾಗೃತಿಗೆ ಇದು ಅನಿವಾರ್ಯ, ಅತ್ಯಗತ್ಯ. ಇರುಳ ವಿರುದ್ಧ ಬೆಳಕಿನ ಯುದ್ಧ ನಿರಂತರವಾಗಿರಲಿ.