
ಆರಿಝೋನಾ: ಹಿಂದೂ ಸ್ವಯಂಸೇವಕ ಸಂಘದ ವತಿಯಿಂದ ಆರಿಝೋನಾ ಕಣಿವೆಯ ಮೂರು ವಿವಿಧ ಸ್ಥಳಗಳಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಗಳಲ್ಲಿ 260ಕ್ಕೂ ಹೆಚ್ಚು ಜನರು ಪಾಲ್ಗೊಂಡರು. 61 ಮಂದಿ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳು ಗೌರವ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಮತ್ತು ವಿವಿಧ ಸಮುದಾಯದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾರತೀಯ ಆಹಾರಗಳ ಪರಿಚಯ ಮತ್ತು ಭಾರತದ ಅಸ್ಮಿತೆಗಳ ವಿಷಯಾಧಾರಿತ ಹಲವು ಪೋಸ್ಟರ್ ಗಳ ಪ್ರದರ್ಶನ ಮಾಡಲಾಯಿತು.


