Hubballi March 01: Vishwa Hindu Parishad orgasied mega Hindu Samajotsav at Hubballi in Karnataka on Sunday evening.

BJP MP Yogi Adityanath addressed the gathering, said ‘Those who cant respect National Flag, they are not needed to be here, let them quit the country’. VHP Zonal organsising secreatary Gopal delivered key note address.

DSC_3542

 

ವಿರಾಟ ಹಿಂದು ಸಮಾವೇಶದಲ್ಲಿ ಯೋಗಿ ಆದಿತ್ಯನಾಥ: ತಿರಂಗಾ ಮೇಲೆ ಅಭಿಮಾನ ಇಲ್ಲದವರು ದೇಶಬಿಟ್ಟು ತೊಲಗಲಿ

ಹುಬ್ಬಳ್ಳಿ March 01: ಭಾರತದ ರಾಷ್ಟ್ರ ಧ್ವಜ ಹಾಗೂ ಸಂವಿಧಾನದ ಮೇಲೆ ಯಾರಲ್ಲಿ ಅಭಿಮಾನ ಇಲ್ಲವೋ ಅಂತಹವರು ದೇಶ ಬಿಟ್ಟು ತೊಲಗಲಿ. ಅವರೆಲ್ಲರನ್ನೂ ಬೀಳ್ಕೊಡಲು ನಾವೆಲ್ಲರೂ ಸಿದ್ಧರಿದ್ದೇವೆ ಎಂದು ಉತ್ತರ ಪ್ರದೇಶದ ಗೋರಖಪುರದ ಗೋರಖನಾಥ ಪೀಠಾಧ್ಯಕ್ಷರೂ ಆಗಿರುವ ಯೋಗಿ ಆದಿತ್ಯನಾಥ ಮಹಾರಾಜರು ಗುಡುಗಿದರು.

ವಿಶ್ವ ಹಿಂದು ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ನೆಹರು ಮೈದಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸನಾತನಿಗಳಿಗೆ ಭಾರತವೇ ಭಕ್ತಿ ಹಾಗೂ ಸಂವಿಧಾನವೇ ಗ್ರಂಥವಾಗಿದೆ. ಭಾರತ ಹಾಗೂ ಪಾಕಿಸ್ಥಾನದ ಮಧ್ಯೆ ಕ್ರಿಕೆಟ್ ಪಂದ್ಯ ನಡೆದಾಗ ಭಾರತದ ಪಾಲಿಗೆ ಸೋಲುಂಟಾದಾಗ ಸಂಭ್ರಮಾಚಣೆ ಮಾಡುವುದನ್ನು ಹಿಂದುಗಳು ಸಹಿಸುವುದಿಲ್ಲ. ಇಂತಹ ಘಟನೆಗಳ ವಿರುದ್ಧ ವಿಎಚ್‌ಪಿ ತನ್ನದೇ ಆದ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳುವ ಮೂಲಕ ದೇಶ ಪ್ರೇಮ ಮೆರೆಯಲಿದೆ ಎಂದರು.

ಸನಾತನ ಹಿಂದು ಧರ್ಮಕ್ಕೆ ವಿನಾಶ ಎಂಬುವುದಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಹಿಂದುಗಳಿಗೆ ವರ್ತಮಾನವೂ ಇದೆ. ಭವಿಷ್ಯವೂ ಇದೆ. ಹಿಂದು ಧರ್ಮದ ಮೇಲೆ ದಾಳಿ ನಡೆಸಿದ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬರ್ ವಂಶಸ್ಥರು ಇದೀಗ ಬೀದಿಪಾಲಾಗಿದ್ದಾರೆ.

ಬದುಕು ಕಟ್ಟಿಕೊಳ್ಳಲು ರಿಕ್ಷಾ ಓಡಿಸಬೇಕಾದ ಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದ ದೇಶದ ರಾಷ್ಟ್ರ ಧ್ವಜ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಪಾಕಿಸ್ಥಾನ ಅಥವಾ ಮತ್ಯಾವುದೇ ದೇಶದಲ್ಲಿ ಅಟೋ ನಡೆಸಲಿ ಅಥವಾ ಮತ್ತೊಬ್ಬರ ಮನೆಯಲ್ಲಿ ಪಾತ್ರೆ ತೊಳೆಯಲಿ ಎಂದು ಆದಿತ್ಯನಾಥ ಶ್ರೀ ಸಲಹೆ ನೀಡಿದರು.

ಗೋ ಹತ್ಯೆ ನಿಷೇಧ ಕಾನೂನು

ಶೇ. ೮೫ರಷ್ಟು ಹಿಂದುಗಳಿರುವ ಭಾರತದಲ್ಲಿ ಗೋ ಹತ್ಯೆ ನಿಷೇಧ ಕಾನೂನು ತರಲು ಈವರೆಗೂ ಸಾಧ್ಯವಾಗಿಲ್ಲ. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಕಾನೂನು ಇಂದಿಲ್ಲ ನಾಳೆ ಜಾರಿಗೆ ಬರುವುದರಲ್ಲಿ ಎರಡು ಮಾತಿಲ್ಲ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಒಂದು ಬಾರಿ ಮತ ನೀಡುವ ವ್ಯವಸ್ಥೆ ಇರುವಂತೆಯೇ ಕಾನೂನು ಸಹಾ ಒಂದೇ ರೀತಿಯದ್ದಾಗಿರಬೇಕು ಎಂದೂ ಅವರು ಪ್ರತಿಪಾದಿಸಿದರು.

ಸೌಲಭ್ಯಕ್ಕೆ ಮಾತ್ರ

ದೇಶದ ಕಾನೂನನ್ನು ದ್ವೇಷಿಸುವ ಮುಸ್ಲಿಮರು, ಕಾನೂನಿನ ಪ್ರಕಾರ ಲಭಿಸುವ ಸೌಲಭ್ಯಗಳನ್ನು ಪಡೆಯಲು ಮಾತ್ರ ಮುಂದಾಗುತ್ತಾರೆ. ಅಲ್ಲದೆ, ವಿವಾಹ ಸೇರಿದಂತೆ ಮಕ್ಕಳನ್ನು ಹೇರುವಲ್ಲಿಯೂ ಇವರಿಗಾಗಿಯೇ ಪ್ರತ್ಯೇಕ ಕಾನೂನು ಇದೆ. ಇದು ಬಹುಸಂಖ್ಯಾತರೊಂದಿಗೆ ಮಾಡಿದ ತಾರತಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾನೂನು ವ್ಯವಸ್ಥೆಯಿಂದಾಗಿ ಆಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ತ್ರಿಪುರಾ, ಬಿಹಾರಗಳಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದ್ದು ಇದು ಗಂಭೀರ ಪರಿಸ್ಥಿತಿಯ ಸಂಕೇತವಾಗಿದೆ ಎಂದು ಎಚ್ಚರಿಸಿದರು.

ವ್ಯರ್ಥ ಪ್ರಯತ್ನ

ಸೌದಿ ಅರೇಬಿಯಾದಲ್ಲಿರುವ ಮೆಕ್ಕಾಕ್ಕೆ ತೆರಳುವ ಮುಸ್ಲಿಂರನ್ನು ಆಯಾ ದೇಶದ ರಾಷ್ಟ್ರೀಯತೆಯಿಂದ ಗುರುತಿಸಲಾಗುತ್ತಿದೆ. ಅಂತೆಯೇ, ಭಾರತದ ಮುಸ್ಲಿಂರನ್ನು ಹಿಂದುಗಳೆಂದು ಅಲ್ಲಿ ಪರಿಗಣಿಸಲಾಗುತ್ತದೆ. ಅಲ್ಲಿ ಹಿಂದು ಎಂದು ಗುರುತಿಸಿಕೊಳ್ಳುವ ಇಲ್ಲಿನ ಮುಸ್ಲಿಮರು ಇಲ್ಲಿ ತಮ್ಮದೇ ಆದ ಗುರುತು ಪಡೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಹಿಂದುಗಳು ಯಾವ ಧರ್ಮದ ವಿರೋಗಳೂ ಅಲ್ಲ ಎಂದರು.

ಯಾರು ಕೋಮುವಾದಿಗಳು?

ಹಿಂದುಗಳು ನಡೆಸುವ ಸಭೆ ಸಮಾರಂಭಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವಂತಹ ಒಂದೇ ಒಂದು ಕೃತ್ಯಗಳು ನಡೆಯುವುದಿಲ್ಲ. ಮುಸ್ಲಿಮರು ನಡೆಸುವ ಸಮಾರಂಭಗಳು ಈ ರೀತಿಯಾಗಿರುತ್ತವೆಯೇ ಎಂದು ಪ್ರಶ್ನಿಸಿದ ಆದಿತ್ಯನಾಥ, ಆದಾಗ್ಯೂ ಹಿಂದುಗಳನ್ನು ಕೋಮವಾದಿಗಳೆಂದು ಕರೆಯಲಾಗುತ್ತದೆ. ಇಂತಹವರಿಗೆ ತಕ್ಕಪಾಠ ಕಲಿಸಬೇಕಿದೆ.

ದೇಶದ ಪ್ರಥಮ ಪ್ರಧಾನಿ ನಮ್ಮ ಭಕ್ತ ಭಾರತ ಭಕ್ತಿ. ನಮ್ಮ ಗ್ರಂಥ ಭಾರತದ ಸಂವಿಧಾನ ಎಂದು ಸಾರಿದ್ದರೇ ದೇಶದಲ್ಲಿ ಇಂದು ಸಮಸ್ಯೆಗಳೇ ಇರುತ್ತಿರಲಿಲ್ಲ ಎಂದ ಅವರು, ಒಂದೇ ರಾಷ್ಟ್ರ, ಒಬ್ಬನೇ ಆಡಳಿತಗಾರ ಹಾಗೂ ಒಂದೇ ಕಾನೂನು ದೇಶದಲ್ಲಿ ಜಾರಿಯಾದಾಗ ಮಾತ್ರ ಸಕಲ ಸಮಸ್ಯೆಗಳಿಗೆ ಪರಿಹಾರ ಲಭಿಸಲು ಸಾಧ್ಯ. ಆದ್ದರಿಂದ ಎಲ್ಲ ಹಿಂದುಗಳು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ದೇಶ ಸೇವೆಗಾಗಿ ವಿಎಚ್‌ಪಿಯೊಂದಿಗೆ ಕೈಜೋಡಿಬೇಕೆಂದು ಅವರು ವಿನಂತಿಸಿಕೊಂಡರು.

ವಿಎಚ್‌ಪಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲಜಿ ಪ್ರಾಸ್ತಾವಿಕ ಮಾತನಾಡಿದರು. ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಶ್ರೀಗಳು ಮಾತನಾಡಿದರು.

DSC_3180 DSC_3327 DSC_3350 DSC_3384 DSC_3447

Leave a Reply

Your email address will not be published.

This site uses Akismet to reduce spam. Learn how your comment data is processed.