
ಜೂನ್ 20: ಸ್ವದೇಶಿ ಜಾಗರಣ್ ಮಂಚ್ ಇಂದು ವಿಶ್ವ ಜಾಗೃತಿ ದಿವಸ್ ಅನ್ನು ವಿಶಿಷ್ಟವಾಗಿ ಆಚರಿಸಿತು. ಪ್ರಪಂಚದ ಜನರು ಜಾಗೃತರಾಗಿದ್ದರೆ ಭವಿಷ್ಯದಲ್ಲಿ ಪ್ರಪಂಚ ಎದುರಿಸಬೇಕಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ . ಕರ್ನಾಟಕ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಕಡೆ ಸಾವಿರಾರು ಸ್ವದೇಶೀ ಜಾಗರಣ ಮಂಚ್ ಕಾರ್ಯಕರ್ತರು ಪ್ಲಕಾರ್ಡನ್ನು ಹಿಡಿದುಕೊಂಡು ‘ಪೇಟೆ೦ಟ್ ಮುಕ್ತ ವಾಕ್ಸಿನ್’ ಅಭಿಯಾನವನ್ನು ಆಯೋಜಿಸಿತ್ತು, ಈಗಾಗಲೆ ಸ್ವದೇಶಿ ಜಾಗರಣ್ ಮಂಚ್ ಆಯೋಜಿಸಿರುವ ಪೇಟೆ೦ಟ್ ಮುಕ್ತ ಆನ್ ಲೈನ್ ಅಭಿಯಾನದಲ್ಲಿ ದೇಶದಾದ್ಯಂತ 13 ಲಕ್ಷಕ್ಕೂ ಹೆಚ್ಚು ಸಹಿಯನ್ನು ಸಂಗ್ರಹಿಸಲಾಗಿದೆ. ‘ವಿಶ್ವ ಜಾಗೃತಿ ದಿನ’ ಕ್ಕೆ ಪೇಟೆ೦ಟ್ ಮುಕ್ತ ಅಭಿಯಾನವನ್ನು ಬೆಂಬಲಿಸಿ ವಿಶ್ವದಾದ್ಯಂತ 500 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯದವರು ಬೆಂಬಲ ವ್ಯಕ್ತ ಪಡಿಸಿರುವುದು ಅಭಿಯಾನದ ಯಶಸ್ಸು. ಈ ಪೇಟೆ೦ಟ್ ಮುಕ್ತ ಅಭಿಯಾನಕ್ಕೆ ಎಲ್ಲ ಸಮುದಾಯದವರು ಬೆಂಬಲವನ್ನು ಸೂಚಿಸಿರುವುದು ಅಭಿನಂದಾರ್ಹವಾಗಿದೆ ಎಂದು ಜಾಗರಣ ಮಂಚ್ ತನ್ನ ಪ್ರೆಸ್ ರಿಲೀಸ್ ನಲ್ಲಿ ತಿಳಿಸಿದೆ.
ಮಾನವೀಯತೆಯ ಕರೆ : ಜಗತ್ತಿನ ಎಲ್ಲರಿಗೂ ಲಸಿಕೆ ಹಾಗೂ ವಿಶ್ವ ವ್ಯಾಪಾರ ಸಂಸ್ಥೆ ಕೊರೋನ ಲಸಿಕೆಯನ್ನು ಪೇಟೆಂಟ್ ಮುಕ್ತ ಮಾಡಲಿ ಎಂಬ ಪ್ಲಕಾರ್ಡ್ ಗಳನ್ನು ಹಿಡಿದು ಅಭಿಯಾನದಲ್ಲಿ ಜನರು ಭಾಗವಹಿಸಿದರು. ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹರಾದ ನ ತಿಪ್ಪೇಸ್ವಾಮಿಯವರು, ಸ್ವದೇಶೀ ಜಾಗರಣ ಮಂಚ್ ನ ಕ್ಷೇತ್ರೀಯ ಸಂಘಟಕರಾದ ಶ್ರೀ ಜಗದೀಶ್ ಕಾರಂತ್, ಕರ್ನಾಟಕ ದಕ್ಷಿಣ ಪ್ರಾಂತದ ಸಹಸ೦ಯೋಜಕರಾದ ಶ್ರೀ ಗುರುರಾಜ್ ರಾವ್, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ್ ಪ್ರಮುಖರಾದ ಶ್ರೀ ಕಿಶೋರ್ ಪಟವರ್ಧನ್ ಭಾಗವಹಿಸಿದ್ದರು.



