
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಕಾರ್ಮಿಕರ ವಿಶ್ರಾಂತಿ ಕೊಠಡಿಯೊಂದನ್ನು ಮುಸಲ್ಮಾನರ ಪ್ರಾರ್ಥನಾ ಮಂದಿರವನ್ನಾಗಿಸಿ ನಮಾಜ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ನಿಟ್ಟಿನಲ್ಲಿ ಹಿಂದೂ ಜಾಗೃತಿ ಸಮಿತಿ ಅಲ್ಲಿನ ಸ್ಟೇಷನ್ನಿನ ಮ್ಯಾನೇಜರ್‌ಅವರಿಗೆ ಪತ್ರ ಬರೆದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತ್ತು.

ಇದಕ್ಕೆ ಮುನ್ನ ರೈಲ್ವೇ ನಿಲ್ದಾಣದ ಐದನೆಯ ಪ್ಲಾಟಫಾರಮ್ಮಿಗೆ ಹೋಗಿ ವಾಸ್ತವ ಅಂಶಗಳನ್ನು ಪರಿಶೀಲಿಸಿ, ಮನವಿ ಮಾಡಲಾಗಿದೆ.
ಆ ವಿಶ್ರಾಂತಿ ಕೊಠಡಿಯು ಎಲ್ಲ ಸಮುದಾಯದ ಕಾರ್ಮಿಕರಿಗೂ ಸಮಾನವಾಗಿದೆ.ಆದರೆ ಕಳೆದ ಹತ್ತು ವರ್ಷಗಳಿಂದ ಅದನ್ನು ಮುಸಲ್ಮಾನರ ಪ್ರಾರ್ಥನಾ ಮಂದಿರ ಮಸೀದಿಯನ್ನಾಗಿ ಬದಲಾವಣೆ ಮಾಡಿದ್ದು,ಬೇರೆ ಯಾವ ಸಮುದಾಯದ ಜನರಿಗೂ ಒಳಗೆ ಪ್ರವೇಶವಿರಲಿಲ್ಲ. ಇದರಿಂದ ಅನೇಕ ಕಾರ್ಮಿಕರಿಗೂ ಅನಾನುಕೂಲವಾಗಿತ್ತು.
ಈ ಬಗೆಗೆ ಹಿರಿಯ ರೈಲ್ವೇ ಅಧಿಕಾರಿಗಳು ಹೇಳಿಕೆ ನೀಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೊದಲು ಅಲ್ಲಿ ಪ್ರಾರ್ಥನಾ ಮಂದಿರ ಇರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ.ನಂತರ ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.


ಅದರ ಬೆನ್ನಲ್ಲೇ ಆ ವಿಶ್ರಾಂತಿ ಕೊಠಡಿಗೆ ಬೀಗ ಹಾಕಲಾಗಿತ್ತು.ನಂತರ ಫೆಬ್ರವರಿ ೧ರ ಮಂಗಳವಾರ ಹಸಿರು ಬಣ್ಣದ ಪೇಂಟ್ ತೆಗೆದು ಎಲ್ಲ ವಿಶ್ರಾಂತಿ ಕೊಠಡಿಯಂತೆಯೇ ಪೇಂಟ್ ಮಾಡಲಾಗಿದ್ದು,ಎಲ್ಲ ಸಮುದಾಯದ ದೇವರಿರುವ ಫೋಟೋವನ್ನು ನೇತುಹಾಕಲಾಗಿದೆ.