ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇದರ ಕಛೇರಿ (ವಿಕ್ರಮ ಕಟ್ಟಡ)ಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಿಕ್ರಮ ಪತ್ರಿಕೆಯ ಹಿರಿಯ ಅಂಕಣಕಾರ ರಮಾನಂದ ಆಚಾರ್ಯ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು. ವಿಕ್ರಮ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ನ.ನಾಗರಾಜ್ ಮಾತನಾಡಿದರು. ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ಸು.ನಾಗರಾಜ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಕ್ರಮ ವಾರಪತ್ರಿಕೆ, ಪುಂಗವ, ವಿಶ್ವ ಸಂವಾದ ಕೇಂದ್ರ ಮತ್ತು ಸಂವಾದ ಚಾನೆಲ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.