ಭಾರತವು ಇಂದು (ಜ. 21, ಗುರುವಾರ) ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಭಾರತದ ಕೋವಿಶೀಲ್ಡ್ ಕೊವಿಡ್-19 ಲಸಿಕೆಯನ್ನು ರವಾನಿಸಿದೆ.
ಭಾರತದ ಸೀರಂ ಸಂಸ್ಥೆಯು ಒಟ್ಟು 20 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಬಾಂಗ್ಲಾದೇಶಕ್ಕೆ ಹಾಗೂ 1 ಲಕ್ಷ ಡೋಸ್ ಲಸಿಕೆಯನ್ನು ನೇಪಾಳಕ್ಕೆ ರವಾನಿಸಿದೆ.
ನೆರೆಯ ಮಾಲ್ಡೀವ್ಸ್ ಮತ್ತು ಬೂತಾನ್ ಗೆ ಬುಧವಾರ(ಜ. 20ರಂದು) ಲಸಿಕೆ ಕಳುಹಿಸಿಕೊಡಲಾಗಿದೆ.
ನೆರೆಯ ರಾಷ್ಟ್ರಗಳು ಮೊದಲು’ ಎಂಬ ನೀತಿಯನ್ನು ಪ್ರಧಾನಿ ಮೋದಿ ತಮ್ಮ ಸರ್ಕಾರದ (2014ರಿಂದ) ಪ್ರಾರಂಭದ ದಿನಗಳಿಂದ ಅನುಸರಿಸಿಕೊಂಡು ಬಂದ ನೀತಿ. ಇದೀಗ ಕೊರೋನಾ ಸಂಕಷ್ಟದಿಂದ ಜಗತ್ತೇ ನಲಗುತ್ತಿದೆ. ಭಾರತ ಸ್ವತಂತ್ರ್ಯವಾಗಿ 2 ಲಸಿಕೆಯನ್ನು ತಯಾರಿಸಿದ್ದು, ಭಾರತೀಯರ ಉಪಯೋಗಕ್ಕೆ ಈಗಾಗಲೇ ಬಳಸುತ್ತಿದೆ.