Monika Arora, Debjani Bhattacharyya, T G Mohandas. Madan Gopal attended the webinar organised by VSK Karnataka. The session was moderated by Dr. Ragotham S

ವಿಶ್ವದ ಯಾವುದೇ ದೇಶ, ರಾಜ್ಯ, ಪ್ರದೇಶದಲ್ಲಿ ನಡೆಯುವ ಇಸ್ಲಾಮಿಕ್ ದಂಗೆಗಳಲ್ಲಿ ಸಮಾನವಾದ ವಿನ್ಯಾಸವಿರುವುದು ಕಂಡುಬರುತ್ತಿದ್ದು, ಇಸ್ಲಾಂ ಮೂಲಭೂತವಾದವಲ್ಲದೆ, ಸ್ವತಃ ಇಸ್ಲಾಂ ಸಿದ್ಧಾಂತವೇ ಸಮಸ್ಯೆಯ ಮೂಲವಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಕೇಂದ್ರವಾದ ವಿಶ್ವ ಸಂವಾದ ಕೇಂದ್ರ ಕರ್ನಾಟಕ ವತಿಯಿಂದ ಸೆ.12ರ ಶನಿವಾರ ಆನ್‌ಲೈನ್ ಮೂಲಕ ಆಯೋಜಿಸಿದ್ದ ಭಯೋತ್ಪಾದನೆ ಮೂಲಕ ವೈಶ್ವಿಕ ಇಸ್ಲಾಮಿಕ್ ಆತಂಕದ ಕುರಿತು ಸಂವಾದದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಂವಾದದಲ್ಲಿ ಸುಪ್ರೀಂಕೋರ್ಟ್ ವಕೀಲೆ ಹಾಗೂ ’ಡೆಲ್ಲಿ ರಯಟ್ಸ್ 2020’ ಕೃತಿಯ ಲೇಖಕಿ ಮೋನಿಕಾ ಅರೋರಾ, ತಿರುವನಂತಪುರದ ಲೇಖಕ ಹಾಗೂ ವಕೀಲ ಟಿ.ಜಿ. ಮೋಹನ್‌ದಾಸ್, ಕೊಲ್ಕತಾದ ಬರಹಗಾರ್ತಿ ದೇಬ್ಜಾನಿ ಭಟ್ಟಾಚಾರ್ಜಿ, ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ದಂಗೆಗಳ ಸತ್ಯಶೋಧನಾ ಸಮಿತಿ ಸದಸ್ಯ ಮದನ್ ಗೋಪಾಲ್ ಭಾಗವಹಿಸಿದರು. ವಿಎಸ್‌ಕೆ ಕರ್ನಾಟಕದ ಡಾ. ರಘೋತ್ತಮ್ ಸುಂದರರಾಜನ್ ನಿರೂಪಿಸಿದರು.

ಸಂವಾದದಲ್ಲಿ ಭಾಗವಹಿಸಿದವರನ್ನು ಪರಿಚಯಿಸಿದ ಉದ್ಯಮಿ ಶಕುಂತಲಾ ಅಯ್ಯರ್, ದೆಹಲಿ ನಂತರ ಬೆಂಗಳೂರಿನಲ್ಲೂ ದಂಗೆ ನಡೆಯಿತು. ಮೇಲ್ನೋಟಕ್ಕೆ ಪ್ರತಿಕ್ರಿಯಾತ್ಮಕ ಎನ್ನಿಸಿದರೂ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಹತ್ಯಾಕಾಂಡಗಳು ಭಯೋತ್ಪಾದನೆ ಕೃತ್ಯಕ್ಕಿಂತ ಯಾವ ನಿಟ್ಟಿನಲ್ಲೂ ಕಡಿಮೆಯಲ್ಲ ಎಂದರು.

ಪ್ರಸ್ತಾವಿಕ ನುಡಿಯ ಮೂಲಕ ನಿರೂಪಣೆ ಆರಂಭಿಸಿದ ರಘೋತ್ತಮ್ ಮಾತನಾಡಿ, ಒಂದು ತಿಂಗಳ ಹಿಂದಷ್ಟೇ ಬೆಂಗಳೂರು ಬೃಹತ್ ಹಿಂಸೆಗೆ ಸಾಕ್ಷಿಯಾಯಿತು. ಇತ್ತೀಚಿನ ವರ್ಷಗಳಲ್ಲಂತೂ ಬೆಂಗಳೂರು ಇಂತಹ ಹಿಂಸೆಯನ್ನು ಕಂಡುಕೇಳಿಲ್ಲ. ಮೂಲಭೂತವಾದಿಗಳು ವಾಹನಗಳಿಗೆ ಬೆಂಕಿ ಹಚ್ಚಿದರು, ಮನೆಗಳನ್ನು ಹಾಳು ಮಾಡಿದರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನು ಸುಟ್ಟರು. ಶಾಸಕರ ಸಂಬಂಧಿ ನವೀನ್ ಎಂಬವರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಬರೆಹ ಬರೆದರು ಎಂಬುದು ನೆಪವಷ್ಟೆ ಎಂಬುದು ಒಟ್ಟಾರೆ ಘಟನೆಯನ್ನು ಕಂಡರೆ ತಿಳಿಯುತ್ತದೆ. ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಈ ಕುರಿತು ಪರಿಶೀಲನೆಗೆ ನ್ಯಾ. ಶ್ರೀನಿವಾಸ್ ಬಬಲಾದಿ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿ ಮದನ್ ಗೋಪಾಲ್ ಸಹ ಇದ್ದರು ಎಂದರು.

ಮದನ್ ಗೋಪಾಲ್ ಮಾತನಾಡುತ್ತಾ, ಸಮಿತಿ ಸದಸ್ಯನಾಗಿ ಮಾತ್ರವಲ್ಲ, ಅಧಿಕಾರಿಯಾಗಿದ್ದಾಗ ವಿಜಯಪುರ, ಕಲಬುರ್ಗಿ, ರಾಯಚೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಸಮಿತಿಯು ಒಂದು ವಾರದೊಳಗೆ ಎರಡು ಬಾರಿ ದೇವರಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜಿಹಳ್ಳಿ) ಪ್ರದೇಶಗಳಿಗೆ ಭೇಟಿ ನೀಡಿ 5-6 ಗಂಟೆ ಸಮಯ ಶೋಧನೆ ನಡೆಸಿತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸಂಬಂಧಿಕ ನವೀನ್ ಮನೆ ಜತೆಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದೆವು, ದಂಗೆಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಮೂವರ ಮನೆಗೂ ಭೇಟಿ ನೀಡಿದ್ದೇವೆ.


ದಂಗೆಯು ತಕ್ಷಣದ ಪ್ರತಿಕ್ರಿಯೆ ಎಂಬುದು ಸತ್ಯವಲ್ಲ ಎಂಬುದು ನವೀನ್ ತಂದೆಯನ್ನು ಭೇಟಿಯಾದಾಗ ತಿಳಿಯಿತು. ಒಂದು ಸಣ್ಣ ಮುಸ್ಲಿಂ ಗುಂಪು ಒಂದೂವರೆ ವರ್ಷದಿಂದ ನವೀನ್ ಜತೆಗೆ ಹಿನ್ನೆಲೆ ಕಾಳಗ ನಡೆಸುತ್ತಲೇ ಇತ್ತು. ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಇದು ನಡೆಯುತ್ತಿತ್ತು. ಈ ಸರಪಳಿ ಕೊಂಡಿಯನ್ನು ಉದ್ದೇಶಪೂರ್ವಕವಾಗಿ ಕೆಲವರು ಮರೆಮಾಚುತ್ತಿದ್ದಾರೆ. ಕೃಷ್ಣಾಷ್ಟಮಿ ದಿನ ಒಬ್ಬರು ಕೃಷ್ಣನ ಕುರಿತು ಮಾಡಿದ ಆಕ್ಷೇಪಾರ್ಹ ಬರಹಕ್ಕೆ ನವೀನ್ ಉತ್ತರಿಸಿದ್ದ.

Monika Arora, Debjani Bhattacharyya, T G Mohandas. Madan Gopal attended the webinar organised by VSK Karnataka. The session was moderated by Dr. Ragotham S


ಇದು ಸಣ್ಣ ಗುಂಪು ಘರ್ಷಣೆ ಎಂದು ಬಿಂಬಿಸುತ್ತಿರುವುದೂ ಸತ್ಯವಲ್ಲ. ಇದು ರಾಜ್ಯಾಂಗದ ವಿರುದ್ಧ ನಡೆದ ದಂಗೆ. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಶಾಸಕರಿಗಾಗಲಿ, ಇತರೆ ಉದ್ಯಮಿಗಳಿಗಾಗಲಿ ತಾವೇನು ತಪ್ಪು ಮಾಡಿದ್ದೇವೆ, ತಮ್ಮ ಆಸ್ತಿಪಾಸ್ತಿಗೇಗೆ ಬೆಂಕಿ ಹಚ್ಚಲಾಯಿತು ಎಂಬುದು ತಿಳಿದಿಲ್ಲ. ಪ್ರತಿಷ್ಠಿತರನ್ನು ಭಯಭೀತಗೊಳಿಸಿ, ಹಿಂದುಗಳ ಮನದಲ್ಲಿ ಭಯವನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶ.
ಈ ದಂಗೆಯ ಹಿಂದೆ ಭೂ ಜಿಹಾದ್ ಇದೆ ಎಂದು ನಾವು ಹೇಳಿದ್ದೇವೆ. ಯಾವುದೇ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮೊದಲು ಸಣ್ಣ ದಂಗೆ ನಡೆಸುವುದು, ನಿಧಾನವಾಗಿ ಹೆಚ್ಚಿಸಿಕೊಂಡು, ದೊಡ್ಡ ದಂಗೆ ನಡೆಸುವುದು. ಇದರಿಂದ ಹೆದರುವ ಅಲ್ಲಿರುವ ಇತರೆ ಸಮುದಾಯಗಳ ಆಸ್ತಿಯ ಬಾಡಿಗೆ ಪ್ರಮಾಣ ಇಳಿಕೆಯಾಗುತ್ತದೆ, ಆಸ್ತಿಯನ್ನು ಮುಸ್ಲಿಮರಿಗೆ ಮಾರುತ್ತವೆ. ಈ ಮೂಲಕ ಹಿಂದುಗಳನ್ನು ಓಡಿಸಿ ತಮ್ಮ ಅಸ್ತಿತ್ವ ಹೆಚ್ಚಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ.


ಸ್ಥಳೀಯ ಜನರು ದಂಗೆಯಲ್ಲಿ ಇಲ್ಲ ಎನ್ನುವುದು ಸತ್ಯವಲ್ಲ. ಅಲ್ಲಿನ ಜನರನ್ನು ಮಾತನಾಡಿಸಿದಾಗ, ಕೆಲವು ಜನರು ಒಂದು ವಾರದ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು, ಎಲ್ಲೆಲ್ಲಿ ಹಿಂದುಗಳ ವಾಹನ ನಿಲ್ಲಿಸಲಾಗುತ್ತದೆ, ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂಬುದನ್ನು ಪತ್ತೆ ಹಚ್ಚಿದ್ದರು. ದಾಳಿ ನಡೆಸಲಾಗಿರುವುದು ಪೂರ್ವಯೋಜಿತ ಕೃತ್ಯ ಎಂಬುದನ್ನು ಇದು ಪುಷ್ಟೀಕರಿಸುತ್ತದೆ. ಇವೆಲ್ಲವುಗಳ ಆಧಾರದಲ್ಲಿ, ಏನು ಮಾಡಬೇಕು ಎಂಬುದನ್ನು ನಾವು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿದ್ದೇವೆ. ಅಂತಾರಾಷ್ಟ್ರದಿಂದ ಸ್ಥಳೀಯತೆವರೆಗೆ ಒಂದು ಕಡೆ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕರ ಗುಂಪು, ಮತ್ತೊಂದೆಡೆ ನಕ್ಸಲರು, ಇನ್ನೊಂದೆಡೆ ಡ್ರಗ್ಸ್ ಪೆಡ್ಲರ್‌ಗಳ ಜಾಲ ಬಲಗೊಳ್ಳುತ್ತಿರುವುದು ಕಾಣುತ್ತದೆ ಎಂದರು.

ಸಿಟಿಜನ್ಸ್ ಫಾರ್ ಡೆಮಾಕ್ರಸಿ ವರದಿ ಇಲ್ಲಿ ಓದಬಹುದು

ಮೋನಿಕಾ ಅರೋರಾ ಅವರು ಮಾತನಾಡುತ್ತಾ, ಬೆಂಗಳೂರು ದಂಗೆ ಕುರಿತು ಸತ್ಯಶೋಧನಾ ಸಮಿತಿ ಅತ್ಯುತ್ತಮ ಕಾರ್ಯ ಮಾಡಿದೆ. ನನ್ನ ಮನೆಯ 25 ಕಿ.ಮೀ. ಸುತ್ತಳತೆಯಲ್ಲಿ ದೆಹಲಿ ದಂಗೆ ನಡೆದಿದೆ. 300ಕ್ಕೂ ಹೆಚ್ಚು ವಕೀಲರು, ಪೊಲೀಸರು ಮುಂತಾದವರು ಸೇರಿ ಸಾರ್ವಜನಿಕ ವಲಯದಲ್ಲಿ ಈ ದಂಗೆಗಳ ಕುರಿತು ಸತ್ಯಾಂಶಗಳನ್ನು ನೀಡುತ್ತಿದ್ದೇವೆ. ನಮ್ಮ ಗುಂಪು ಆ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಅಲ್ಲಿ ಸುಟ್ಟ ವಾಹನಗಳು, ಮನೆಗಳ ಧೂಳು ನಮ್ಮ ಉಡುಪನ್ನು ಮೆತ್ತಿಕೊಳ್ಳುವಷ್ಟು ಪರಿಸ್ಥಿತಿ ಗಂಭಿರವಾಗಿತ್ತು.
ಈ ವರದಿಯನ್ನು ಗೃಹ ಸಚಿವಾಲಯಕ್ಕೆ ನೀಡಿ, ಇದು ಭಯೋತ್ಪಾದನಾ ಕೃತ್ಯವಾಗಿದ್ದು, ಎನ್‌ಐಎ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದೆವು.


ನಂತರ ಇದನ್ನು ನಾವು ಪುಸ್ತಕವಾಗಿ ಪ್ರಕಟಿಸಲು ಮುಂದಾದಾಗ, ಯಾವುದೇ ಪ್ರಕಾಶಕರು ಮುಂದೆ ಬರಲಿಲ್ಲ. ಅನೇಕ ಸುತ್ತಿನ ಮಾತುಕತೆ, ಚರ್ಚೆ ನಂತರ ಬ್ಲೂಮ್ಸ್‌ಬರ್ಗ್ ಪ್ರಕಟಿಸುವುದಾಗಿ ತಿಳಿಸಿತು. ಆದರೆ ಇನ್ನೇನು ಬಿಡುಗಡೆ ಆಗಬೇಕು ಎನ್ನುವಷ್ಟರಲ್ಲಿ ಬ್ಲೂಮ್ಸ್‌ಬರ್ಗ್‌ನಿಂದ ಫೋನ್ ಬಂತು, ನಮಗೆ ಒತ್ತಡ ಬರುತ್ತಿದೆ, ಹಾಗಾಗಿ ಪುಸ್ತಕವನ್ನು ಹಿಂಪಡೆಯುವಂತೆ ತಿಳಿಸಿತು. ಆದರೂ ಬಿಡುಗಡೆಯಾಯಿತು, ಅಮೇಜಾನ್‌ನಲ್ಲಿ ನಂ.1 ಆಯಿತು. ಆದರೆ ಬ್ಲೂಮ್ಸ್‌ಬರ್ಗ್ ಈ ಪುಸ್ತಕವನ್ನು ಹಿಂಪಡೆಯಿತು. ನಂತರ ಭಾರತೀಯ ಪ್ರಕಾಶಕರ ಬಳಿ ತೆರಳಿದೆವು, ಇಲ್ಲಿವರೆಗೆ 30 ಸಾವಿರ ಕೃತಿಗಳು ಮಾರಾಟವಾಗಿವೆ. ನವ ಭಾರತ ನಮ್ಮ ಬೆನ್ನಿಗೆ ನಿಂತಿತು. ನವ ಭಾರತವೇ ಈ ಪುಸ್ತಕವನ್ನು ಪೋಷಿಸಿದೆ. ಈ ಪುಸ್ತಕವನ್ನು ನಿಷೇಧಿಸಬೇಕು ಎಂಬುದರ ಹಿಂದೆ ಅರ್ಬನ್ ನಕ್ಸಲರ ಕೈವಾಡವಿದೆ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದಾಗಲೆಲ್ಲ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟನ್ನೇ ತೆಗಳುತ್ತಾರೆ, ಅಫ್ಜಲ್ ಗುರುವನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಣಾ ಅಯ್ಯೂಬ್ ಗುಜರಾತ್ ದಂಗೆ ಬಗ್ಗೆ ಪುಸ್ತಕ ಬರೆದಾಗ ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ, ಆದರೆ ಸಂಪೂರ್ಣ ಸತ್ಯಾಂಶವನ್ನು ಇಟ್ಟುಕೊಂಡು ಬರೆದ ಪುಸ್ತಕಕ್ಕೆ ನಿಷೇಧ ಹೇರಲು ಪ್ರಯತ್ನಿಸುತ್ತಾರೆ.
ದೆಹಲಿಯಲ್ಲಿ ಶಹೀನ್ ಬಾಗ್ ರೀತಿಯ 15 ಪ್ರತಿಭಟನೆಗಳು ನಡೆದಿವೆ. ಎಲ್ಲ ಪ್ರತಿಭಟನೆಗಳೂ ಮಸೀದಿಗಳ ಸಮೀಪದಲ್ಲೇ ನಡೆದಿವೆ, ಮಹಿಳೆಯರನ್ನು ಒಗ್ಗೂಡಿಸಲು ಸುಲಭವಾಗಲಿ ಎಂಬುದಕ್ಕಾಗಿ. ಅಲ್ಲಿ ಕೂಗಿದ್ದೆಲ್ಲ-ಜಿನ್ನಾವಾಲಿ ಆಜಾದಿಯಂತಹ- ದೇಶವಿರೋಧಿ ಘೋಷಣೆಗಳೆ. ಶಹೀನ್ ಬಾಗ್‌ನಲ್ಲಿ ಬುರ್ಖಾದಲ್ಲಿ ಕಾಳಿ ಮಾತೆಯ ಪೋಸ್ಟರ್ ಬಳಸಿದರು. ಎಲ್ಲವೂ ಸಂವಿಧಾನ ವಿರೋಧಿ ಕೆಲಸಗಳನ್ನೇ ನಡೆಸಿದರು. ಅದೆಲ್ಲದರ ವರದಿ ಈ ಪುಸ್ತಕದಲ್ಲಿದೆ.


ಪ್ರೀತಿ ಗರ್ಗ್ ಎಂಬ ಗೃಹಿಣಿ ಮನೆಯಲ್ಲಿ ತಮ್ಮ ಪಾಡಿಗೆ ತಾವಿದ್ದಾಗ ಇಡೀ ಮನೆಗೆ ಬೆಂಕಿ ಹಚ್ಚಲಾಯಿತು. ತಮ್ಮ ಮಕ್ಕಳನ್ನು ಮೊದಲ ಮಹಡಿಯಿಂದ ಎಸೆದು ರಕ್ಷಿಸಿಕೊಂಡರು. ಆ ಮಕ್ಕಳು ಇನ್ನೂ ಅದೇ ಆಘಾತದಲ್ಲಿದ್ದಾರೆ.
ಒಂದು ಗ್ಯಾಂಗ್ ದಾಳಿ ಮಾಡುತ್ತದೆ, ಮತ್ತೊಂದು ಗ್ಯಾಂಗ್ ಪುಸ್ತಕ ಬರೆಯುತ್ತದೆ, ಮುಸ್ಲಿಮರನ್ನು ಹೇಗೆ ಹತ್ಯೆ ಮಾಡಲಾಯಿತು ಎಂಬುದರ ಕುರಿತು ಮೂರನೇ ಗುಂಪು ದಶಕಗಳವರೆಗೆ ಸುಳ್ಳು ಪ್ರಚಾರ ಮಾಡುತ್ತಲೇ ಇರುತ್ತದೆ. ಸ್ವೀಡನ್, ಬೆಂಗಳೂರು, ದೆಹಲಿ, ಎಲ್ಲ ಕಡೆಯೂ ಒಂದೇ ವಿನ್ಯಾಸವಿದೆ. ಒಬ್ಬನೇ ದೇವರು, ಒಂದೇ ಪುಸ್ತಕ, ಒಂದೇ ಪೂಜಾ ಪದ್ಧತಿ ಇದೆ ಎಂಬುದನ್ನು ಮದರಸಾಗಳಿಂದಲೇ ಮಕ್ಕಳ ಮನಸ್ಸಿನಲ್ಲಿ ತುಂಬಿಸುವುದು ಇದರ ಕಾರಣ. ನಾವು ಈಗಷ್ಟೇ ಪುಸ್ತಕವನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಮಾಡಿದ್ದೇವೆ, ಸದ್ಯದಲ್ಲೆ ಅಮೆರಿಕದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

ಟಿ.ಜಿ. ಮೋಹನ್‌ದಾಸ್ ಮಾತನಾಡಿ, ಕೇರಳವು ಇದೀಗ ಭಾರತದ ಭಯೋತ್ಪಾದನೆ ರಾಜಧಾನಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಿಗೆ ಕೇರಳ ಸಂಪರ್ಕವಿರುತ್ತವೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಶೇ.20 ಜನರು ಕೇರಳದಿಂದ ತೆರಳಿದ್ದರು. ಶೇ.90 ಪ್ರತಿಭಟನೆಗಳು ಆಯೋಜನೆಯಾಗಿದ್ದು ಕೇರಳದಿಂದ. ಆದರೆ ಕೇರಳ ಶಾಂತಿಯುತ ಎಂದು ಹೇಳುತ್ತಾರೆ. ಏಕೆಂದರೆ 2003ರಲ್ಲಿ ನಡೆದ ದಂಗೆ ನಂತರ ಕೇರಳ ಮೇಲ್ನೋಟಕ್ಕೆ ಶಾಂತಿಯುತವಾಗಿದೆ. ಆದರೆ ಅಲ್ಲಿಂದ ನಂತರದ ದೇಶದಲ್ಲಿ ನಡೆಯುವ ಯಾವುದೇ ದಂಗೆಯಲ್ಲಿ ಜನರು, ಹಣ, ಶಸ ಅಥವಾ ಸಾಹಿತ್ಯ ಕೇರಳದಿಂದ ಹೋಗಿರುತ್ತದೆ.
ಮಲಪ್ಪುರಂ ಜಿಲ್ಲೆಯು ದುಬೈನಷ್ಟೆ ವಿಸ್ತೀರ್ಣವಾಗಿದ್ದು, ಅದನ್ನು ಸ್ವತಂತ್ರ ದೇಶವಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಕಡೆಗೆ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಯಲ್ಲಿ ಪಿ ಎಫ್ ಐ ಕಚೇರಿಗಳಿವೆ, ಅಗಾಧ ಪ್ರಮಾಣದ ಆಸ್ತಿಪಾಸ್ತಿ ಖರೀದಿ ಮಾಡಿದ್ದಾರೆ. 1995ರಿಂದ ಈ ಪ್ರಯತ್ನ ನಡೆಯುತ್ತಿದ್ದು, ಯಾವುದೇ ದಂಗೆಯಾದ ಸಂದರ್ಭದಲ್ಲಿ ಸೇನೆ, ಪೊಲೀಸರು ಆಗಮಿಸದಂತೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಬಹುದು.


ಬೆಂಗಳೂರು ದಂಗೆಯನ್ನು ಕೇರಳ ಸುದ್ದಿವಾಹಿನಿಗಳು ಬಿತ್ತರಿಸಲೇ ಇಲ್ಲ, ಆದರೆ ದೆಹಲಿ ದಂಗೆಯನ್ನು ಮುಸ್ಲಿಂ ಕೋನದಿಂದ ಬಿತ್ತರಿಸಿದವು. ಎರಡು ಚಾನೆಲ್‌ಗಳು ಮಾತ್ರ ಬೆಂಗಳೂರು ದಂಗೆ ಕುರಿತು ಸತ್ಯಾ ಹೇಳಿದವು. ಮುಖ್ಯವಾಹಿನಿ ಮಾಧ್ಯಮವು ಇಸ್ಲಾಂ ಒತ್ತಡಕ್ಕೆ ಮಣಿದಿದೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದುಗಳ ಜನನ ಪ್ರಮಾಣ ಗಮನಿಸಿದರೆ ಅತ್ಯಂತ ಶೀಘ್ರದಲ್ಲಿ ಮುಸ್ಲಿಮರ ಸಂಖ್ಯೆ ತೀವ್ರ ಹೆಚ್ಚುವ ಅಪಾಯವಿದೆ. ಒಮ್ಮೆ ಈ ಜನಸಂಖ್ಯೆ ಹೆಚ್ಚಳವಾದರೆ ಕೇರಳವು ಭಾರತದಿಂದ ಬೇರ್ಪಡುತ್ತದೆ. ಕಾಶ್ಮೀರದಲ್ಲಿ 1990ರಲ್ಲಿ ಆದಂತೆಯೇ ಮುಂದೆ ಕೇರಳದಲ್ಲಿ ನಡೆಯುತ್ತದೆ.


ಶಿಕ್ಷಿತರು, ಜಾತ್ಯತೀತ ರಾಜ್ಯ ಕೇರಳ ಎಂದು ಬಿಂಬಿಸಲಾಗಿದೆ. ಆದರೆ ಅತ್ಯಂತ ಕೋಮುವಾದಿ ಕಾರ್ಯ ಕೇರಳದಲ್ಲಿ ನಡೆಯುತ್ತಿದೆ. ಶಿಕ್ಷಣ, ಪ್ರೇಮ, ಭೂಮಿ, ಹಣಕಾಸು… ಎಲ್ಲ ಕಡೆ ಕೋಮುವಾದ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಬಂಧನವಾಗುವ ಭಯೋತ್ಪಾದಕರಿಗೂ ಕೇರಳದ ನಂಟಿದೆ. ಇಸ್ಲಾಮಿಕ್ ಮೂಲಭೂತವಾದ ಸಮಸ್ಯೆಯಲ್ಲ, ಸ್ವತಃ ಇಸ್ಲಾಂ ಬಹುದೊಡ್ಡ ಸಮಸ್ಯೆ, ಹದೀಸ್ ಕೂಡ ಸಮಸ್ಯೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಮೋಹನದಾಸ್ ಅವರ ಅಂತಿಮ ವಾಕ್ಯಗಳನ್ನು ಅನುಮೋದಿಸುತ್ತಲೇ ಮಾತನ್ನು ಆರಂಭಿಸಿದ ದೇಬ್ಜಾನಿ ಭಟ್ಟಾಚಾರ್ಯ, ಸ್ವತಃ ಸಿದ್ಧಾಂತವೇ ಸಮಸ್ಯೆ ಎಂಬುದು ಸತ್ಯ. ವಿಶ್ವದ ಅನೇಕ ಕಡೆಗಳಲ್ಲಿ ಅವರು ಕಲ್ಲೆಸೆಯುತ್ತಾರೆ. ಪಶ್ಚಿಮ ಬಂಗಾಳವು 2,500 ಕಿ.ಮೀ. ಅಂತಾರಾಷ್ಟ್ರೀಯ ಗಡಿ ಹೊಂದಿದ್ದು, ಬಹಳ ಪ್ರಮಾಣ ಬಾಂಗ್ಲಾದೇಶದ ಜತೆಗಿದೆ. ಇದು ಸಂಚಾರಕ್ಕೆ ಬಹುತೇಕ ಮುಕ್ತವಾಗಿದೆ. ವಿವಿಧ ಗಡಿಗಳು ವಿವಿಧ ಅಪರಾಧಗಳಿಗೆ ಮೀಸಲಾಗಿರುವಂತೆ ಬಳಕೆಯಾಗುತ್ತಿವೆ. ಮಾಲ್ಡಾ ಗಡಿ ಮೂಲಕ ನಕಲಿ ಕರೆನ್ಸಿಯು ಪಾಕಿಸ್ತಾನಂದಿಂದ ಆಗಮಿಸುತ್ತದೆ. ದೇಶದ ಯಾವುದೇ ಭಾಗದಲ್ಲಿ ನಡೆಯುವ ದಂಗೆಯ ಪ್ರಾತ್ಯಕ್ಷಿಕೆಯು ಪಶ್ಚಿಮ ಬಂಗಾಳದಲ್ಲಿ ನಡೆದಿರುತ್ತದೆ. ನಕಲಿ ನೋಟು ದಂಧೆಗೆ ತೊಂದರೆ ನೀಡುತ್ತಿದ್ದರು ಎಂಬ ಕಾರಣಕ್ಕೆ ಕಾಲಿಯಾ ಚೌಕ್‌ನಲ್ಲಿ ಮೊದಲಿಗೆ ಪೊಲೀಸ್ ಠಾಣೆಯನ್ನು ಸುತ್ತುವರಿದು ನಂತರ ದಂಗೆ ನಡೆಸಿದ್ದರು. 2017ರಲ್ಲಿ ಬದುರಿಯಾ, ನಾರ್ತ್ 24 ಜಿಲ್ಲೆಯಲ್ಲಿ, ಒಬ್ಬನ ಫೇಸ್‌ಬುಕ್ ಖಾತೆಯಲ್ಲಿ ಅವನ ಪರವಾಗಿ ಕೆಲವು ಆಕ್ಷೇಪಾರ್ಹ ಬರಹ ದಾಖಲಿಸಿ ಅವನ ಮನೆ ಮೇಲೆ ದಾಳಿ ನಡೆಸಿದರು. ನಂತರ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರು. ಬೆಂಗಳೂರಿನಲ್ಲಿ ಪೊಲೀಸರು ಪ್ರತಿಕ್ರಿಯೆಯನ್ನಾದರೂ ನೀಡಿದರು, ಆದರೆ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರದ ಕಾರಣದಿಂದಾಗಿ ಪೊಲೀಸರು ಸುಮ್ಮನಿದ್ದರು. ಡಿಜೆ ಹಳ್ಳಿಯಲ್ಲಿ ಪ್ರಮುಖರ ಮೇಲೆ ದಾಳಿ ಮಾಡುವ ಮೂಲಕ, ನಾವು ಯಾರ ಮೇಲೆ ಬೇಕಾದರೂ ದಾಳಿ ಮಾಡಬಲ್ಲೆವು ಎಂಬ ಸಂದೇಶ ನೀಡಲು ಮುಂದಾಗಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಇಂತಹ ದಂಗೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಸೌತ್ ಪರಗಣವು ಮಹಿಳಾ ಕಳ್ಳ ಸಾಗಣೆಗೆ ಕುಖ್ಯಾತ. ಕೆಲವು ಗಡಿಗಳು ರೋಹಿಂಗ್ಯಾ ಪ್ರವೇಶಕ್ಕೆ ಮೀಸಲಿವೆ. ಖಾಮ್ರೂದ್ ಜಮಾವುಲ್ಲಾ ಇದರ ನೇತೃತ್ವ ವಹಿಸಿದ್ದಾನೆ. ಅವರೆಲ್ಲರ ಗುರಿಯು ಬೆಂಗಳೂರೇ ಆಗಿದೆ.


ಔರಂಗಾಬಾದ್, ಶಾಹೀನ್ ಬಾಗ್, ಬಿಲಾಲ್ ಬಾಗ್ ಸೇರಿ ಅನೇಕ ಸ್ಲೀಪರ್ ಸೆಲ್‌ಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯದಲ್ಲೆ ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತೇವೆ ಎಂದು ಐಸಿಸ್ ತಿಳಿಸಿದೆ.
ದೇಶದಲ್ಲಿ ಮೊದಲು ಸಿಎಎ ವಿರೋಧಿ ಪ್ರತಿಭಟನೆಗಳು ನಡೆದದ್ದು ಪಶ್ಚಿಮ ಬಂಗಾಳದಲ್ಲಿ, ಅದೂ ಸಂಸತ್ತಿನಲ್ಲಿ ಸಿಎಎಗೆ ಒಪ್ಪಿಗೆ ಪಡೆದ ಮರುದಿನವೇ(ಡಿ.13) ಮುರ್ಷಿದಾಬಾದ್‌ನಲ್ಲಿ. ರೈಲ್ವೆ ಅಧಿಕಾರಿಗಳ ಮೇಲೆ, ಆರ್ ಪಿ ಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿ, ರೈಲ್ವೆ ಹಳಿಗಳನ್ನು ಕಿತ್ತುಹಾಕಿದರು, ರೈಲುಗಳನ್ನು ಸುಟ್ಟರು, ಅಗ್ನಿಶಾಮಕ ವಾಹನವನ್ನೂ ಸುಟ್ಟರು. ಯಾವುದೇ ಪರಿಸ್ಥಿತಿಗೆ ಅವರು ಸಾಕಷ್ಟು ಸಿದ್ಧರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಅವರು ರಸ್ತೆಗಳನ್ನು ಬಂದ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಡ್ರೋನ್ ಮುಂತಾದ ತಂತ್ರಜ್ಞಾನದ ಮೂಲ ಸೌಕರ್ಯ ಅಭಿವೃದ್ಧಿಮಾಡುವುದು ಮುಖ್ಯವಾಗುತ್ತದೆ.

ಆಡಳಿತಾತ್ಮಕ ನಿರ್ಧಾರದ ಜತೆಗೆ ಆರ್ಟಿಕಲ್ 30 ಪ್ರಕಾರ ಅಲ್ಪಸಂಖ್ಯಾತರಿಗೆ ಮಾತ್ರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದನ್ನು ಸ್ಥಗಿತಮಾಡಬೇಕು. ದೂರಗಾಮಿಯಾಗಿ, ಇಸ್ಲಾಂ ಸುಧಾರಣೆಗಾಗಿ ವೈಶ್ವಿಕ ಧ್ವನಿ ಮೊಳಗಬೇಕಿದೆ. ಇಸ್ಲಾಮನ್ನು ಈಗಿನ ಜಗತ್ತಿಗೆ ಅನುಗುಣವಾಗಿ ರೂಪಿಸಬೇಕಿದೆ ಎಂದು ಹೇಳಿದರು.

ಪ್ರಶ್ನೋತ್ತರದಲ್ಲಿ, ಇದೆಲ್ಲ ಸಮಸ್ಯೆಗಳ ಬಗ್ಗೆ ನಾವೇನಾದರೂ ಮಾಡಲು ಸಾಧ್ಯವಿದೆಯೇ? ಎಂಬ ಕುರಿತು ಮದನ್ ಗೋಪಾಲ್ ಪ್ರತಿಕ್ರಿಯಿಸಿದರು. 9/11ರ ನಂತರ, ಇಸ್ಲಾಮಿಕ್ ಮೂಲಭೂತ ಯಾವ ರೀತಿ ನಡೆಯುತ್ತದೆ ಎಂಬುದು ಎಲ್ಲ ದೇಶಗಳಿಗೂ ಅರಿವಿಗೆ ಬಂದಿದೆ. ಸ್ಪೇನ್, ಸ್ವೀಡನ್, ಫ್ರಾನ್ಸ್, ಇಟಲಿ, ಆಸಟ್ರಿಯಾದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿದರೆ, ಒಟ್ಟಾರೆ ಯೋಜನೆ ತಿಳಿಯುತ್ತದೆ.


ಈ ಐಡಿಯಾಲಜಿಗಳ ರಾಜಕೀಯ ದೀವಾಳಿತನವನ್ನು ನಾವು ನಿರೂಪಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುವ ಬದಲಿಗೆ ಪ್ರೊ ಆಕ್ಟಿವ್ ಆಗಿರಬೇಕು, ಮಾನವ ಹಕ್ಕುಳ ಕುರಿತು ನಮ್ಮ ದೃಷ್ಟಿಕೋನದಲ್ಲಿ ಮಾತನಾಡಲು ಆರಂಭಿಸಬೇಕು ಎಂಬುದು ಪರಿಹಾರ ಎಂದರು.

ಮತ್ತೊಂದು ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಮೋಹನದಾಸ್ ಅವರು, ಸಮಾಜವನ್ನು ಸಂಘಟಿಸದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಆ ಕಾರ್ಯವನ್ನು ಆರೆಸ್ಸೆಸ್ 90 ವರ್ಷಗಳಿಂದ ನಡೆಸುತ್ತಿದೆ. ಆಡಳಿತದಲ್ಲಿ ಸದೃಢ ವ್ಯಕ್ತಿಗಳನ್ನು ನಾವು ಹೊಂದಬೇಕಿದೆ. ನ್ಯಾಯಾಂಗದಲ್ಲಿ ಸುಧಾರಣೆ ಆಗಬೇಕಿದೆ. ಅನೇಕ ನ್ಯಾಯಾಧೀಶರ ಮನಸ್ಥಿತಿ ಅರ್ಬನ್ ನಕ್ಸಲರಿಗೆ ಸಹಾಯ ಮಾಡುವಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪೊಲೀಸರು ಹೆಚ್ಚು ಸದೃಢವಾಗಬೇಕು. ಕೇರಳವು ದೇಶದಿಂದ ಕೈತಪ್ಪುವ ಸಾಧ್ಯತೆಯಿದ್ದರೂ, ಸದೃಢ ನಿರ್ಧಾರಗಳ ಮೂಲಕ ಅದನ್ನು ಹಿಂಪಡೆಯಲು ಅವಕಾಶವಿದೆ. ಮುಖ್ಯವಾಹಿನಿ ಮಾಧ್ಯಮದ ಜತೆಗೆ ಸಾಮಾಜಿಕ ಜಾಲತಾಣಗಳೂ ಅರ್ಬನ್ ನಕ್ಸಲರ ಕೈನಲ್ಲಿವೆ. ಮೇಲ್ನೋಟಕ್ಕೆ ಕಾಣುವಷ್ಟು ಸಣ್ಣ ಸಮಸ್ಯೆ ಇದಲ್ಲ. ಕೇರಳ ಹೋದರೆ ಕನಿಷ್ಟ ಕರ್ನಾಟಕವನ್ನು ಅದು ಜತೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಶಕುಂತಲಾ ಅಯ್ಯರ್ ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.