ಇಂದು ಜಯಂತಿ
ಜಾದುನಾಥ್ ಸಿಂಗ್ ಅವರು ಭಾರತೀಯ ಸೈನಿಕರಾಗಿ ಪ್ರಸಿದ್ಧಿ ಪಡೆದವರು. ಇವರು ಸೇನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಭಾರತದ ಅತ್ಯುನ್ನತ ಮಿಲಿಟರಿ ಅಲಂಕಾರವಾದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಸೇನಾನಾಯಕ. ಇಂದು ಅವರ ಜಯಂತಿ.
ಪರಿಚಯ
ಜಾದುನಾಥ್ ಸಿಂಗ್ ಅವರು ನವೆಂಬರ್ 21, 1916 ರಂದು ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ ಜನಿಸಿದರು. ಇವರ ತಂದೆ ಬಿರ್ಬಲ್ ಸಿಂಗ್ ರಾಥೋಡ್ ಹಾಗೂ ತಾಯಿ ಜಮುನಾ ಕನ್ವರ್. ಜಾದುನಾಥ್ ಸಿಂಗ್ ಅವರಿಗೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಬಾಲ್ಯದಲ್ಲಿ ಬಹಳ ಸಮಯ ಕೃಷಿ ಕೆಲಸ ಮಾಡಿ ತಮ್ಮ ಕುಟುಂಬಕ್ಕೆ ಸಹಾಯ ಮಾಡಿದರು.
ಎರಡನೇಯ ಮಹಾಯದ್ಧದ ಸಮಯದಲ್ಲಿ ಜಾದುನಾಥ್ ಸಿಂಗ್ ಅವರು ಭಾರತೀಯ ಸೇನೆಯ 7ನೇ ರಜಪೂತ ರೆಜಿಮೆಂಟ್‌ಗೆ ನವೆಂಬರ್ 21, 1941ರಂದು ಫತೇಘರ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಸೇರಿಕೊಂಡರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಜಾದುನಾಥ್ ಸಿಂಗ್ ಅವರನ್ನು ರೆಜಿಮೆಂಟ್‌ನ 1 ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು.
1942ರ ಕೊನೆಯಲ್ಲಿ ಬರ್ಮಾದ ಕಾರ್ಯಾಚರಣೆಯ ಸಮಯದಲ್ಲಿ ಬೆಟಾಲಿಯನ್ ಅನ್ನು ಅರಕನ್ ಪ್ರಾಂತ್ಯಕ್ಕೆ ಕಳುಹಿಸಲಾಯಿತು. ಅಲ್ಲಿ ಜಾದುನಾಥ್ ಸಿಂಗ್ ಅವರು ಜಪಾನಿಯರ ವಿರುದ್ಧ ಹೋರಾಡಿದರು.
ಅಕ್ಟೋಬರ್ 1947ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ದಾಳಿಕೋರರ ಆಕ್ರಮಣದ ನಂತರ ಭಾರತೀಯ ಕ್ಯಾಬಿನೆಟ್‌ನ ರಕ್ಷಣಾ ಸಮಿತಿಯು ಮಿಲಿಟರಿ ಪ್ರತಿಕ್ರಿಯೆಯನ್ನು ಕೈಗೊಳ್ಳಲು ಸೇನಾ ಪ್ರಧಾನ ಕಛೇರಿಯನ್ನು ನಿರ್ದೇಶಿಸಿತು. ನಿರ್ದೇಶನದಂತೆ ದಾಳಿಕೋರರನ್ನು ಓಡಿಸಲು ಸೇನೆಯು ಹಲವಾರು ಕಾರ್ಯಾಚರಣೆಗಳನ್ನು ಯೋಜಿಸಿದ್ದರು. ಅಂತಹ ಒಂದು ಕಾರ್ಯಾಚರಣೆಯಲ್ಲಿ 50ನೇ ಪ್ಯಾರಾ ಬ್ರಿಗೇಡ್, ರಜಪೂತ್ ರೆಜಿಮೆಂಟ್ ಅನ್ನು ಲಗತ್ತಿಸಲಾಯಿತು, ನೌಶಾಹ್ರಾವನ್ನು ಸುರಕ್ಷಿತವಾಗಿರಿಸಲು ಮತ್ತು ನವೆಂಬರ್ ಮಧ್ಯದಲ್ಲಿ ಜಂಗರ್ನಲ್ಲಿ ನೆಲೆಯನ್ನು ಸ್ಥಾಪಿಸಲು ಆದೇಶಿಸಲಾಯಿತು.
ಡಿಸೆಂಬರ್ 24 ರಂದು ನೌಶಹ್ರಾ ವಲಯದ ಆಯಕಟ್ಟಿನ ಅನುಕೂಲಕರ ಸ್ಥಾನವಾದ ಜಂಗಾರ್ ಅನ್ನು ಪಾಕಿಸ್ತಾನಿಗಳು ವಶಪಡಿಸಿಕೊಂಡರು. ಪಾಕಿಸ್ತಾನಿ ಪಡೆಗಳ ಮತ್ತಷ್ಟು ಪ್ರಗತಿಯನ್ನು ತಡೆಯಲು ಭಾರತೀಯ ಸೇನೆಯು ನೌಶಾಹ್ರಾದ ವಾಯುವ್ಯದಲ್ಲಿ ಹಲವಾರು ಕಾರ್ಯಾಚರಣೆಗಳನ್ನು ಕೈಗೊಂಡಿತು. 50ನೇ ಪ್ಯಾರಾ ಬ್ರಿಗೇಡ್‌ನ ಕಮಾಂಡಿಂಗ್ ಆಫೀಸರ್ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ನಿರೀಕ್ಷಿತ ದಾಳಿಯನ್ನು ಎದುರಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರು.
ತೈನ್ ಧಾರ್‌ನಲ್ಲಿ ಎರಡನೇ ಪಿಕೆಟ್ ಸ್ಥಾನದ ಫಾರ್ವರ್ಡ್ ಪೋಸ್ಟ್ ಅನ್ನು ನಿರ್ವಹಿಸುವ ಒಂಭತ್ತು ಸಿಬ್ಬಂದಿಗೆ ಜಾದುನಾಥ್ ಸಿಂಗ್ ನಾಯಕರಾಗಿದ್ದರು. ಪೋಸ್ಟ್ ಅನ್ನು ವಶಪಡಿಸಿಕೊಳ್ಳಲು ಶತ್ರುಗಳು ಮೂರನೇ ಬಾರಿ ದಾಳಿ ಮಾಡಿದರು. ನಾಯಕ್ ಜಾದುನಾಥ್ ಸಿಂಗ್ ಏಕಾಂಗಿಯಾಗಿ ಮತ್ತು ಗಾಯಗೊಂಡಿದ್ದರೂ ಸಹ ತನ್ನ ಬಂದೂಕಿನಿಂದ ಶತ್ರುಗಳ ಮೇಲೆ ಗುಂಡು ಹಾರಿಸಿದರು. ಈ ವೇಳೆ ಜಾದುನಾಥ್ ಅವರ ಮೇಲೆ ಶತ್ರುಗಳು ಪ್ರತಿದಾಳಿಯಿಂದ ತಲೆ ಮತ್ತು ಎದೆ ಗುಂಡು ಬಿದ್ದು ನಿಧನರಾದರು.
ಜಾದುನಾಥ್ ಸಿಂಗ್ ಅವರು ತಮ್ಮ ಪಿಕೆಟ್ ಸ್ಥಾನವನ್ನು ಉಳಿಸಿದವರು. ದೇಶಕ್ಕಾಗಿ ಅವರು ಮಾಡಿದ ಸ್ವಯಂ ತ್ಯಾಗವನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ” ವನ್ನು ನೀಡಿ ಗೌರವಿಸಲಾಯಿತು.