ಇಂದು ಜಯಂತಿ

ಬಂಗಾಳಿ ವೈಜ್ಞಾನಿಕ ಕಾದಂಬರಿಯ ಪಿತಾಮಹ ಎಂದೇ ಕರೆಯಲ್ಪಡುವ ಜಗದೀಶ್‌ ಚಂದ್ರ ಬೋಸ್‌ ಅವರು ಬಹುಮುಖ ಪ್ರತಿಭೆವುಳ್ಳ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ  ವಿಜ್ಞಾನದ ಅನೇಕ ವಿಭಾಗಗಳಲ್ಲಿ ಸಂಶೋಧನೆ ನಡೆಸಿದ್ದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಜಗದೀಶ್‌ ಚಂದ್ರ ಬೋಸ್‌ ಅವರು ನವೆಂಬರ್ 30, 1858 ರಂದು ಬಂಗಾಳದ ಮೈಮೆನ್‌ಸಿಂಗ್‌ನಲ್ಲಿ ಜನಿಸಿದರು. ಇವರ ತಂದೆ ಭಗವಾನಚಂದ್ರರು ಫರೀದಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದರು. ಜಗದೀಶ್‌ ಚಂದ್ರ ಬೋಸ್‌ ಅವರು ಕೊಲ್ಕತ್ತಾದ ಸೇಂಟ್‌ ಕ್ಸೇವಿಯರ್ಸ್ ನಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿದರು. ಕೊಲ್ಕತ್ತಾ ಸೇಂಟ್‌ ಮೇರಿಯಸ್‌ನಲ್ಲಿ ಪದವಿ ಮುಗಿಸಿದ ನಂತರ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಕೊಂಡರು. ಅವರು ಮೈಕ್ರೋವೇವ್ ಸ್ಪೆಕ್ಟ್ರಮ್ನಲ್ಲಿ ರೇಡಿಯೋ ತರಂಗಗಳ ಸಂಶೋಧನೆಯಲ್ಲಿ ಪ್ರಗತಿ ಕಂಡರು. ಅವರು ರೆಡಿಯೋ ತರಂಗಗಳನ್ನು ಪತ್ತೆ ಹಚ್ಚಲು ಸೆಮಿಕಂಡಕ್ಟರ್‌ ಜಂಕ್ಷನ್‌ ಗಳನ್ನು ಬಳಸಿದ ಮೊದಲ ವ್ಯಕ್ತಿ.

ಜಗದೀಶ್‌ ಚಂದ್ರಬೋಸ್‌ ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು.ಆ ಕಾಲೇಜಿನಲ್ಲಿ ಮೊದಲಿಗೆ ಪ್ರಯೋಗಾಲಯದ ಸೌಲಭ್ಯ ಇರಲಿಲ್ಲ. ಹಲವು ವರ್ಷಗಳ ಪ್ರಯತ್ನದ ನಂತರ ಪ್ರಯೋಗಾಲಯವನ್ನು ಸ್ಥಾಪಿಸಲಾಯಿತು. ಅಲ್ಲಿ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ಅವರಿಗೆ ವಿದ್ಯುತ್ ತರಂಗ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಇಟಲಿಯ ಮಾರ್ಕೊನಿಯೂ ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ಟೆಲಿಗ್ರಾಫ್‌ ಸಂದೇಶಗಳನ್ನು ತಂತಿಯ ಸಹಾಯವಿಲ್ಲದೇ ಕಳಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು. ಈ ವಿಧಾನ ಕಂಡು ಹಿಡಿದ ಕೀರ್ತಿ ಭಾರತೀಯ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌ ಅವರಿಗೆ ಸಲ್ಲುತ್ತದೆ. ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸ ದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರು ಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದರು.


ಪ್ರಶಸ್ತಿ
ಜಗದೀಶ್‌ ಬೋಸ್‌ ಅವರಿಗೆ 1916ರಲ್ಲಿ ನೈಟ್‌ ಹುಡ್‌ ಪ್ರಶಸ್ತಿ ಬಂದಿದೆ. 1928ರಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ನೀಡಿ ಗೌರವಿಸಲಾಗಿದೆ. ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ 25, 2009ರಲ್ಲಿ ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.
ಜಗದೀಶ್‌ ಚಂದ್ರ ಬೋಸ್‌ ಅವರು ನವೆಂಬರ್ 23, 1937ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.