ಜಾಗೃತ ಮಹಿಳಾ ವೇದಿಕೆ
ಸುಕೃಪ, ನಂ. ೩೬೨೮, ೪ನೇ ಅಡ್ಡರಸ್ತೆ, ಗಾಯತ್ರಿ ನಗರ, ಬೆಂಗಳೂರು – ೨೧
ಪತ್ರಿಕಾ ಪ್ರಕಟಣೆ
ಜೂನ್ 9, 2016
ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಶ್ರೀಮತಿ ಅನುಪಮಾ ಶೆಣೈ, ಡಿವೈಎಸ್‌ಪಿ, ಕೂಡ್ಲಿಗಿ, ಇವರ ರಾಜಿನಾಮೆಯಿಂದ ರಾಜ್ಯ ಒಬ್ಬ ಉತ್ತಮ ಪೊಲೀಸ್ ಅಧಿಕಾರಿಯನ್ನು ಕಳೆದುಕೊಳ್ಲಬೇಕಾದ ಪರಿಸ್ಥಿತಿಯಿದ್ದು, ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರಾಜಿನಾಮೆ ಹಿಂತೆಗೆದಕೊಳ್ಳುವಂತೆ ಮನವೊಲಿಸಬೇಕು ಹಾಗೂ ಆಕೆ ಕೆಲಸಕ್ಕೆ ಹಾಜರಾದ ಮೇಲೆ ಅವರ ಸ್ವತಂತ್ರ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಸಿಕೊಡುವುದಲ್ಲದೇ ಆಕೆಗೆ ಜೀವ ರಕ್ಷಣೆಯ ಜೊತೆಗೆ ಎಲ್ಲ ರೀತಿಯ ಸೂಕ್ತ ರಕ್ಷನೆ ನೀಡಿ ಆಕೆ ನಿರ್ಭಯವಾಗಿ ಕೆಲಸ ಮಾಡುವಂತೆ ಅವಕಾಶ ಮಾಡಿಕೊಡಬೇಕು ಎಂದು ಜಾಗೃತ ಮಹಿಳಾ ವೇದಿಕೆಯಿಂದ ನಿರ್ಣಯ ಕೈಗೊಳ್ಳಲಾಯಿತು.
ಅವರ ಈ ರೀತಿಯ ರಾಜಿನಾಮೆಯ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ನಡೆಸಿ ರಾಜ್ಯದ ಜನತೆಗೆ ಬಹಿರಂಗಪಡಿಸಿ, ತಪಿತಸ್ಥರಿಗೆ ಶಿಕ್ಷ ವಿಧಿಸಬೇಕು.
ಅರುಣಾ ಠಕಾರ್
ಜಾಗೃತ ಮಹಿಳಾ ವೇದಿಕೆ
೯೮೪೫೫೬೫೨೮೬
(ಜಾಗೃತ ಮಹಿಳಾ ವೇದಿಕೆ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಮಿತಿಯ ಸಹಸಂಸ್ಥೆ)