13 ಆಕ್ಟೊಬರ್, ರಾಣೇಬೆನ್ನೂರು:
ಆರೆಸ್ಸೆಸ್ ನ ಸಹಸರಕಾರ್ಯವಾಹರಾದ ಮಾನ್ಯ ಮುಕುಂದ ಜಿ ‘ಪರಿವರ್ತನ’ ವೇದಿಕೆ, ರಾಣೇಬೆನ್ನೂರು ಆಯೋಜಿಸಿದ್ದ ‘ಜ್ಞಾನಂ ವಿಜ್ಞಾನಸಹಿತಮ್’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 350ಕ್ಕು ಹೆಚ್ಚು ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು. ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ ಬಿ ನಾಯಕ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಮುಖ್ಯಸ್ಥರಾದ ಡಾ. ವೀರಭದ್ರಪ್ಪ, ವಿದ್ಯಾ ಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಜಿ ಆರ್ ಜಗದೀಶ್ ಅವರು ಉಪಸ್ಥಿತರಿದ್ದರು.
ಭಾರತೀಯ ಅರ್ಥನೀತಿ ಮತ್ತು ರಾಜನೀತಿ, ಆಯುರ್ವೇದ ಮತ್ತು ಯೋಗ , ಕಲೆ ಸಂಗೀತ, ನೃತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ವಚನ ದಾಸ ಜನಪದ ಸಾಹಿತ್ಯ, ವೇದ ಉಪನಿಷತ್ತು, ಭಗವದ್ಗೀತೆ ವಿಷಯಗಳ ಬಗ್ಗೆ ಭಾರತೀಯ ಜ್ಞಾನ ಪರಂಪರೆಯ ಯಶೋಗಾಥೆಯ ಬಗ್ಗೆ ಪುಸ್ತಕವನ್ನು ಹೆಣೆಯಲಾಗಿದೆ.
ಮಾರ್ಚ್ ೨೯, ೩೦ ರಂದು ನಡೆದ ಭಾರತೀಯ ಜ್ಞಾನ ಪರಂಪರೆಯ ವಿಚಾರ ಸಂಕಿರಣದ ಪುಸ್ತಕ ರೂಪ ಇದಾಗಿದೆ. ಬ್ಯಾಡಗಿಯ ಮರ್ಚಂಟ್ ಕಾಲೇಜಿನ ಉಪನ್ಯಾಸಕರಾದ ಡಾ. ಎಸ್ ಜಿ ವೈದ್ಯ ಅವರು ಪುಸ್ತಕದ ಪ್ರಧಾನ ಸಂಪಾದಕರು.
ಪುಸ್ತಕಗಳಿಗಾಗಿ ಪರಿವರ್ತನದ ಸಂಯೋಜಕರಾದ ಡಾ. ನಾರಾಯಣ ಪವಾರರನ್ನು 9844616071 ರಲ್ಲಿ ಸಂಪರ್ಕಿಸಬಹುದಾಗಿದೆ.