Dharawad May 11, 2015: RSS Karnataka Uttar Prant’s annual 20-day cadre training camp First year Sangh Shiksha Varg concluded at the premises of Rashtrotthana Vidyakendra near Garag in Dharawad on Monday evening.
Began on April 21, 2015, in this Varg, a total of 260 Swayamsevaks were participating. In special Sangh Shiksha Varg, a total of 45 Swayamsevaks are participating.
Industrialist Deepak Dhadoti, presided over the valedictory ceremony, RSS Pranth Sah Karyavah Sridhar Nadiger adressed the valedictory gathering.
ಧಾರವಾಡ: ಜಗತ್ತಿಗೆ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳು, ಬದುಕು ರೀತಿಯನ್ನು ಹೇಳಿಕೊಟ್ಟ ಭಾರತೀಯರು ಇದೀಗ ಆಂಗ್ಲವ್ಯಾಮೋಹಕ್ಕೆ ಒಳಗಾಗಿದ್ದಾರೆ. ಪಶ್ಚಿಮದ ಅಂಧಾನುಕರಣೆ ಸೋಗಿನಲ್ಲಿ ಭಾರತ ಇಂದು ತನ್ನ ವೈಭವ ಕಳದುಕೊಂಡಿದೆ. ಇಂಥ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತದ ಸಹಕಾರ್ಯವಾಹ ಶ್ರೀಧರ ನಾಡಿಗೇರ್ ಹೇಳಿದರು.
ತಾಲೂಕಿನ ಗರಗ ರಾಷ್ಟ್ರೋತ್ಥಾನ ಶಾಲೆಯಲ್ಲಿ ಸೋಮವಾರ ನಡೆದ ಶಿಕ್ಷಾ ವರ್ಗ ಶಿಬಿರದ ಸಮಾರೋಪ ಸಮಾಂಭದಲ್ಲಿ ಮಾತನಾಡಿದ ಅವರು, ಹಿಂದುತ್ವಕ್ಕೆ ಇದೀಗ ಮಾಧ್ಯಮಗಳು ಸೇರಿದಂತೆ ಜಗತ್ತಿನ ಕೆಲ ದೇಶಗಳು ಕೋಮುವಾದಿ ಪಟ್ಟಕಟ್ಟಿ ಅಪಪ್ರಚಾರ ಮಾಡುತ್ತಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
ಅನ್ಯಮತೀಯರು ಮತಾಂತರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಜಗತ್ತನ್ನು ಸಾಮ್ರಾಜ್ಯ ಸಾಹಿಗಳ ಕೈಕೆಳಗೆ ತರಲು ಯತ್ನಿಸುವವರು ಕ್ರೈಸ್ತರು. ಜಗತ್ತಿನಲ್ಲಿ ಹರಡಿದ್ದ ಬಲಾಢ್ಯ ಭಾರತ ಎಂದೂ ಇತರರ ಮೇಲೆ ಆಕ್ರಮಣ ಮಾಡಿಲ್ಲ. ಇಂದು ಹಿಂಸೆಯಿಂದ ನಲುಗಿರುವ ಜಗತ್ತು ಶಾಂತಿಯಡೆಗೆ ಮರಳಬೇಕಾದರೆ ಹಿಂದುತ್ವದ ಚಿಂತನೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ದೇಶದ ಇತಿಹಾಸಿಕ ಪುಟಗಳ ಮೇಲೊಮ್ಮೆ ಕಣ್ಣಾಡಿಸಿದರೇ, ಭಾರತವನ್ನು ಕಟ್ಟಿದವರು ಹಿಂದುಗಳು. ಇಡೀ ಜಗತ್ತಿನಲ್ಲಿ ಏಕತೆ ಸಾಧಿಸಿದ ಏಕೈಕ ದೇಶ ಭಾರತ. ಜಗತ್ತಿನ ಸರ್ವರನ್ನು ಸ್ವಾಗತಿಸುವ ಮೂಲಕ ಶ್ರೇಷ್ಠ ಎಂಬುದನ್ನು ಮತ್ತು ಹಿಂದುವಾಗಿ ಬದುಕುವವನು ಎಂದೂ ಕೋಮುವಾದಿಯಾಗಲಾರ ಎಂಬುದನ್ನು ಜಗತ್ತಿಗೆ ಸಾರಬೇಕಿದೆ ಎಂದು ಹೇಳಿದರು.
ಹಿಂದುತ್ವಕ್ಕೆ ಕೋಮುವಾದಿ ಪಟ್ಟಕಟ್ಟಿದ ಕೆಲ ಮತ ಹಾಗೂ ಸಂಘಟನೆಗಳು ಇಂದು ಸಂಘದ ಕಾರ್ಯವನ್ನು ಮೆಚ್ಚಿಕೊಂಡಿವೆ. ದೇಶಾದ್ಯಂತ ಇಂದು ೫೦ ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ಆರ್ಎಸ್ಎಸ್ ಸಂಘಟನೆ ಮೂಲಕ ರಾಷ್ಟ್ರಕಟ್ಟುವ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಸ್ವಾಲಂಭನೆ, ಗ್ರಾಮ ವಿಕಾಸ ಇತ್ಯಾದಿ ಕ್ಷೇತ್ರಗಳಲ್ಲಿ ಒಂದು ಲಕ್ಷದ ೫೦ ಸಾವಿರಕ್ಕೂ ಹೆಚ್ಚು ಸೇವಾ ಚಟುವಟಿಕಗಳನ್ನು ನಡೆಸುತ್ತಿದೆ. ಇದರಿಂದ ದೇಶವು ಪುನಃ ತನ್ನ ವೈಭವ ಕಾಣುವ ದಿನಗಳು ಸಮೀಪಿಸುತ್ತಿವೆ. ಇದಕ್ಕಾಗಿ ಸಜ್ಜನ ಶಕ್ತಿಗಳು ಒಗ್ಗೂಡಿಕೊಂಡು ದೇಶದ ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆ, ಮೌಲ್ಯಗಳ ಉಳಿವಿಗೆ ಶ್ರಮಿಸಬೇಕಿದೆ ಎಂದರು.
ಮುಖ್ಯಅತಿಥಿಗಳಾದ ದೀಪಕ್ ಧಡೂತಿ ಮಾತನಾಡಿ, ಒಂದಾನೊಂದು ಕಾಲದಲ್ಲಿ ಅಮೇರಿಕ ಸೇರಿದಂತೆ ಜಗತ್ತಿನ ಇತರ ದೇಶಗಳು ಭಾರತಕ್ಕೆ ತಂತ್ರಜ್ಞಾನ ಕೊಡುವುದನ್ನು ವಿರೋಧಿಸಿದ್ದವು. ಇದೀಗ ಭಾರತವೇ ಸ್ವತಂತ್ರ ತಂತ್ರಜ್ಞಾನದ ಮೂಲಕ ಯಶಸ್ವಿ ಮಂಗಳಯಾನ ಕಾರ್ಯ ಸಾಧಿಸಿದೆ. ಇದರಿಂದ ಜಗತ್ತಿನ ದೇಶಗಳು ಭಾರತವನ್ನು ಬೆರಗು ಕಣ್ಣಿನಿಂದ ನೋಡುವಂತಾಗಿದೆ ಎಂದರು.
ದೇಶಾಭಿಮಾನ ಇಟ್ಟುಕೊಂಡು ಅಧ್ಯಯನ ಮಾಡಿದರೇ, ಏನನ್ನಾದರೂ ಸಾಧಿಸಲು ಸಾಧ್ಯ. ಕನ್ನಡದಲ್ಲಿ ಓದುವುದು ಹೆಮ್ಮೆಯ ವಿಷಯವೇ. ಮಾತೃಭಾಷೆ ಬಗ್ಗೆ ಅಭಿಮಾನ ಇರಬೇಕು. ಮನಸ್ಸಿನಲ್ಲಿ ಸಾಧಿಸುವ ಛಲ ಇದ್ದರೆ ಮಾತ್ರ ಎಂತಹ ಕಾರ್ಯಗಳು ಫಲಪ್ರದವಾಗುತ್ತವೆ. ಪ್ರತಿಯೊಬ್ಬರು ಇಚ್ಛಶಕ್ತಿಯ ಮೂಲಕವೇ ದೇಶ ಹಾಗೂ ಭಾಷೆಯನ್ನು ಕಟ್ಟುವ ಕೆಲಸದಲ್ಲಿ ಸನ್ನದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
ದೇಶಕ್ಕಾಗಿ ಗಡಿಯಲ್ಲಿ ಪ್ರಾಣ ಅರ್ಪಿಸುವುದೇ ದೇಶ ಸೇವೆಯಲ್ಲ. ಸಮಾಜದ ಬದುಕಿನೊಳಗಿದ್ದ ಪ್ರತಿಯೊಂದು ಕ್ಷಣ ದೇಶದ ಬಗ್ಗೆ ಚಿಂತನೆ ನಡೆಸಬೇಕು. ನಾಡೊಂದೆ, ನಾವೊಂದೆ ಎನ್ನುವ ಮನೋಧರ್ಮ ಎಲ್ಲರಲ್ಲಿಯೂ ಬೆಳೆಯಬೇಕು. ತಿನ್ನುವ ಅನ್ನ ಹಾಗೂ ಮಾಡುವ ವಿಚಾರಕ್ಕೆ ಬೆಲೆ ಬರಬೇಕಾದರೆ, ಸಮಾಜ ತಪ್ಪು ಹಾದಿಯಲ್ಲಿ ನಡೆದಾಗ ಸಂಘದ ಕಾರ್ಯಕರ್ತರು ತಿದ್ದುವಂತ ಕೆಲಸ ಮಾಡಬೇಕು ಎಂದು ಹೇಳಿದರು.
ಶಿಬಿರದ ಸಾಮರಸ್ಯ ದಿನದಂದು ಪೂಜ್ಯ ಶ್ರೀ ಮಾದರ ಚನ್ನಯ್ಯ, ಪೂಜ್ಯ ಶ್ರೀ ಚಿದ್ರೂಪಾನಂದ ಸ್ವಾಮಿಜಿ, ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ ಭೇಟಿನೀಡಿ ಆಶೀರ್ವಚನ ನೀಡಿದರು. ಶಿಬಿರದಲ್ಲಿ ಒಟ್ಟು 305 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಶಿಕ್ಷಾರ್ಥಿಗಳಿಂದ ಸೂರ್ಯ ನಮಸ್ಕಾರ, ಆಸನಗಳು, ನಿಯುದ್ಧ ಉಪವಿಷ್ಟಾ ವ್ಯಾಯಾಮ ಇತ್ಯಾದಿ ಶಾರೀರಿಕ ಪ್ರದರ್ಶಕಗಳು ನಡೆದವು.
ವರ್ಗಾಧಿಕಾರಿ ಡಾ. ಮಹಾದೇವ ದಳಪತಿ ಸ್ವಾಗತಿಸಿದರು. ದುರ್ಗಣ್ಣ ವಂದಿಸಿದರು.
———-