
ತೀರ್ಥಹಳ್ಳಿ: ಕೃಷಿ ಪ್ರಯೋಗ ಪರಿವಾರದ ವತಿಯಿಂದ ತೊರೆಬೈಲುವಿನಲ್ಲಿ ಅ.7, 8 ರಂದು ಕೃಷಿ ಬರಹಗಾರರಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಕಾರ್ಯಾಗಾರವನ್ನು ಉದ್ಘಾಟಿಸಿ, ಬರವಣಿಗೆಯ ಕೌಶಲ್ಯ ಕುರಿತು ವಿವರಿಸಿದರು.

ಹಿಂದುಸ್ಥಾನ್ ಟೈಮ್ಸ್ ಕನ್ನಡ ವೆಬ್ ಸೈಟ್ ಸಂಪಾದಕ ಘನಶ್ಯಾಮ, ಕೃಷಿಕ ವಸಂತ ಕಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಪ್ರಾಂತ ಸಂಘಟಕ ನಾರಾಯಣ ಶೇವಿರೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಸಂದರ್ಶನ, ಕ್ಷೇತ್ರಕ್ಕೆ ಹೋಗಿ ರೈತರ ಭೇಟಿ, ಮಾತುಕತೆ, ಬರವಣಿಗೆ, ವಿಡಿಯೋ ರೆಕಾರ್ಡಿಂಗ್ ಇತ್ಯಾದಿ ಕುರಿತು ಪ್ರಾತ್ಯಕ್ಷಿಕೆ ಪ್ರಯೋಗ ನಡೆಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜು, ಉಜಿರೆ ಎಸ್.ಡಿ. ಎಂ.ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಆಸಕ್ತ ಹವ್ಯಾಸಿ ಲೇಖಕರು ಪಾಲ್ಗೊಂಡಿದ್ದರು. ಕೃಷಿ ಪ್ರಯೋಗ ಪರಿವಾರದ ಅರುಣ್ ಕುಮಾರ್, ಶ್ರೀವತ್ಸ ಉಪಸ್ಥಿತರಿದ್ದರು.