ಬಡತನದಿಂದಲೇ ಬದುಕು ಕಟ್ಟಿಕೊಂಡು ಬಡವರ ದೀನ ದಲಿತರ ಉದ್ದಾರ ಮಾಡಿದ ಶ್ರೇಷ್ಟ ವ್ಯಕ್ತಿ ಕುದ್ಮುಲ್ ರಂಗರಾವ್ ಅವರು, ಅವರು ಸಾಮಾಜಿಕ ಭಹಿಷ್ಕಾರವನ್ನು ಅನುಭವಿಸಿದಾಗ ಅವರು ಕುಗ್ಗಲಿಲ್ಲ ಸಮಾಜ ಅವರನ್ನು ಒಪ್ಪಿಕೊಂಡಾಗ ಅವರು ಹಿಗ್ಗಲಿಲ್ಲ ಅವರು ಮಾಗಿದ ಮನಸ್ಸಿನ ಸಾಧಕ, ಆದರೆ ಅವರಿಗೆ ಸಿಗಬೇಕಾದ ಗೌರವವನ್ನು ನಾವು ಇನ್ನಾದರೂ ನೀಡಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ಹೇಳಿದರು.
ಸಾಮರಸ್ಯ ವೇದಿಕೆ ಮಂಗಳೂರು ಅವರು ಸಂಘನಿಕೇತನದಲ್ಲಿ ಆಯೋಜಿಸಿದ್ದ ಕುದ್ಮುಲ್ ರಂಗರಾವ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಪಿ.ಎಲ್ ಧರ್ಮ ಅವರು ಮಾತನಾಡಿ ಕುದ್ಮುಲ್ ರಂಗರಾಯರಂತಹ ಅನೇಕರು ಇಂದಿಗೂ ಸಮಾಜಕ್ಕೆ ಅಂಟಿದ ಅಸ್ಪೃಶ್ಯತೆ ಎಂಬ ವಿಷವನ್ನು ಹೋಗಲಾಡಿಸಲು ಹೋರಾಡುತ್ತಿದ್ದಾರೆ. ನಾವೆಲ್ಲರೂ ಕುದ್ಮುಲ್ ರಂಗರಾವ್ ಅವರಂತಹ ಸಾಮಾಜಿಕ ಕ್ರಾಂತಿಯ ಹರಿಕಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಯಶವಂತ ಕುದ್ರೋಳಿ ಅವರು ಬರೆದ ಅಮೃತ ಬಿಂದು ಸ್ವಾಮಿ ಈಶ್ವರಾನಂದ ಕುದ್ಮುಲ್ ರಂಗರಾವ್ ಪುಸ್ತಕ ಬಿಡುಗಡೆ ಮಾಡಲಾಯಿತು.