ಮಹಿಳಾ ಸಮನ್ವಯ, ದಕ್ಷಿಣ ಪ್ರಾಂತ, ಕರ್ನಾಟಕ
ಅಭ್ಯಾಸ ವರ್ಗದ ವರದಿ
ದಿನಾಂಕ 28-06-2015 ರ ಭಾನುವಾರದಂದು ಬೆಂಗಳೂರಿನ ಅಬಲಾಶ್ರಮದಲ್ಲಿ ಕರ್ನಾಟಕ , ದಕ್ಷಿಣ ಪ್ರಾಂತದ ಮಹಿಳಾ ಸಮನ್ವಯದ ಅಭ್ಯಾಸವರ್ಗವು ನಡೆಯಿತು. ವರ್ಗದ ಉದ್ಘಾಟನೆಯನ್ನು ಅಖಿ ಭಾರತ ಮಹಿಳಾ ಸಮನ್ವಯದ ಪ್ರಮುಖ ಸಂಚಾಲಿಕಾ ಮಾ.ಗೀತಾಗುಂಡೆ ಯವರು ನೆರವೇರಿಸಿದರು, ಇದೇ ಸಂದರ್ಭದಲ್ಲಿ ಸಮಿತಿಯ ದಕ್ಷಿಣ ಪ್ರಾಂತ ಅಧಿಕಾರಿಯಾದ ಮಾ.ಸುಧಾ ಮೂರ್ತಿ ಉಪಸ್ಥಿತರಿದ್ದರು.
ಪ್ರಾಸ್ತವಿಕವಾಗಿ ಮಾ.ಗೀತಾತಾಯಿ ಮಾತನಾಡುತ್ತ ಮಹಿಳೆ ಒಂದು ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರಿಂದ ಮುಖ್ಯ ನಿರ್ಣಯ ತೆಗೆದುಕೊಳ್ಳುವರೆಗೆ ಆಕೆಯ ಜವಾಬ್ದಾರಿಯಿರುತ್ತದೆಯೋ ಹಾಗೆ ಆಕೆ ಕೇವಲ ಮಹಿಳೆಯ ವಿಷಯದಲ್ಲಿ ಕೆಲಸ ಮಾಡದೇ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿಯೂ ಆಕೆಯ ಪಾತ್ರ ಮಹತ್ವ ಪಡೆಯುತ್ತದೆ, ಆ ನಿಟ್ಟಿನಲ್ಲಿಯೂ ಈಗ ಚಿಂತಿಸಬೇಕಿದೆ. ನಾವಿಂದು ಕಿಶೋರಿ ಅವಸ್ಥೆ ಮತ್ತು ಪ್ರಬುದ್ಧ ಮಹಿಳೆಯರ ಬಗ್ಗೆ ಎರಡು ಅವಧಿಯಲ್ಲಿ ಚರ್ಚಿಸಿ, ಅದನ್ನು ವಿಭಾಗ ಮಟ್ಟದಲ್ಲಿ ತೆಗೆದಕೊಂಡು ಹೋಗಬೇಕಿದೆ. ಮಹಿಳೆಗೆ ಮನೆಯ ಒಳಗಡೆ ಹಾಗೂ ಹೊರಗಡೆ ಇರುವ ಸಮಸ್ಯೆಗಳು, ಬಾಲಸಂಸ್ಕಾರವನ್ನು ಬಾಲಕಿಯರ ಜೊತೆಗೆ ಬಾಲಕರಿಗೂ ಈಗ ವಿಸ್ತರಿಸಬೇಕಾದ ಸಂದರ್ಭವನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಬುದ್ಧ ಮಹಿಳೆಯರ ಜಾಗೃತಿ ಶಿಬಿರದಲ್ಲಿ ವಿಶೇಷವಾಗಿ ಈ ಬಾರಿ ಏಕಾತ್ಮಮಾನವ ದರ್ಶನ ಮತ್ತು ಸಾಮಾಜಿಕ ಸಾಮರಸ್ಯ ಎರಡು ವಿಷಯಗಳನ್ನು ವಿಭಾಗಮಟ್ಟದಲ್ಲಿ ಚರ್ಚಿಸಬೇಕು. ಮಹಿಳೆಯ ಸಮಗ್ರ ಅಧ್ಯಯನವನ್ನು ಮಹಿಳಾ ಸಮನ್ವಯವು ಮಾಡಬೇಕಿದೆ ಎಂದರು.
ನಂತರದ ಅವಧಿಯಲ್ಲಿ ದಿಶಾದ ಭಗಿನಿ ರೇಖಾ ರಾಮಚಂದ್ರ ತೇಜೋಮಯ ಭಾರತದ ಬಗ್ಗೆ ವಿಶ್ಲೇಷಿಸಿದರು. ಭಾರತದ ಸಂಸ್ಕೃತಿಯನ್ನು ಎಷ್ಟು ದೇಶಗಳು ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿವೆ, ನಾವೆಷ್ಟರಮಟ್ಟಿಗೆ ಮರೆತಿದ್ದೇವೆ ಎಂಬುದರ ಬಗ್ಗೆ ಹೇಳಿ, ಜವಾಬ್ದಾರಿಗಳ ಬಗ್ಗೆಯೂ ವಿವರಿಸಿದರು. ಅಭ್ಯಾಸ ವರ್ಗಕ್ಕೆ ಬಂದ ಎಲ್ಲ ಭಗಿನಿಯರೂ ಪರಿಚಯ ಗೋಷ್ಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಮದ್ಯಾನದ ಅವಧಿಯಲ್ಲಿ ದಕ್ಷಿಣ ಪ್ರಾಂತದ ಐದು ವಿಭಾಗಗಳ ಮಹಿಳಾ ಸಮನ್ವಯ ಗುಂಪನ್ನು ರಚಿಸಲಾಯಿತು, ಈ ಬೈಠಕ್‌ನ್ನು ಶೋಭಾ.ಹೆಚ್.ಜಿ ನಡೆಸಿಕೊಟ್ಟರು. ನಂತರ ಹಿಂದು ಸೇವಾ ಪ್ರತಿಷ್ಟಾನದ ಭಗಿನಿ ಛಾಯಾ ಪ್ರಭು ಸಂಘಟನೆಗಳ ಜವಾಬ್ದಾರಿಗಳ ಬಗ್ಗೆ ಪ್ರತಿನಿಧಿಗಳ ಜೊತೆ ಚರ್ಚಿಸಿದರು.
ಸಮಾರೋಪ ಭಾಷಣದಲ್ಲಿ ಕರ್ನಾಟಕ , ದಕ್ಷಿಣ ಪ್ರಾಂತದ ಮಹಿಳಾ ಸಮನ್ವಯದ ಸಂಚಾಲಿಕಾ ಮಾ.ಅರುಣಾ ಠಕಾರ್ ಮಹಿಳಾ ಸಮನ್ವಯದ ಉದ್ದೇಶಗಳು ಕಾರ್ಯ ವಿಸ್ತಾರದ ಬಗ್ಗೆ ತಿಳಿಸುತ್ತಾ, ಇಡೀ ವರುಷ ಎಲ್ಲ ಸಂಘಟನೆಗಳು ಪ್ರಸ್ತಾವಿಕ ಎರಡು ವಿಷಯಗಳ ಬಗ್ಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಸಮಾರೋಪದಲ್ಲಿ ಮಾ.ಗೀತಾಗುಂಡೆ ಮತ್ತು ಸಮಿತಿಯ ದಕ್ಷಿಣ ದೇಶ ಅಧಿಕಾರಿ ಮಾ.ಸಾವಿತ್ರಿ ಸೋಮಯಾಜಿಯವರು ಉಪಸ್ಥಿತರಿದ್ದರು.
ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಉಪಾಧ್ಯಕ್ಷೆ ಮಾ.ಹೆಚ್.ಮಂಗಳಾಂಭರಾವ್ ಸ್ವಾಗತಿಸಿದರೆ, ಬಿಜೆಪಿಯ ಮಮತಾಉದಯ್ ಮತ್ತು ಸಮಿತಿಯ ಮಾಲಿನಿಭಾಸ್ಕರ್ ವರ್ಗವನ್ನು ನಿರ್ವಹಣೆ ಮಾಡಿದರು. ಅಭ್ಯಾಸ ವರ್ಗದಲ್ಲಿ ಸುಮಾರು ವಿವಿಧ 10 ಸಂಘಟನೆಗಳಿಂದ 50ಪ್ರತಿನಿಧಿಗಳು ಭಾಗವಹಿಸಿದ್ದರು.