ವಿಶ್ವ ಸಂವಾದ ಕೇಂದ್ರ, ಕರ್ನಾಟಕ

# 106, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು  – 560018

www.samvada.org

****************************************

VSK LOGO

ವಿಷಯ : ನಾರದ ಜಯಂತಿ ಪ್ರಯುಕ್ತ ಪತ್ರಕರ್ತರಿಗಾಗಿ ಮಾಧ್ಯಮ ಪುರಸ್ಕಾರ; ನಾಮನಿರ್ದೇಶನಕ್ಕೆ ಆಹ್ವಾನ

ಬೆಂಗಳೂರು: ರಾಜ್ಯದ ಮಾಧ್ಯಮ ಸಂವಹನ ಸಂಸ್ಥೆಗಳಲ್ಲೊಂದಾದ ‘ವಿಶ್ವ ಸಂವಾದ ಕೇಂದ್ರ, ಕರ್ನಾಟಕ’ವು ಮುಂಬರುವ ಜುಲೈ 5 ರಂದು ‘ನಾರದ ಜಯಂತಿ’ಯನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ 2014-2015ರ ಸಾಲಿನಲ್ಲಿ ನಾಡಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರಿರುವ ಪತ್ರಕರ್ತರಿಗಾಗಿ  ಮಾಧ್ಯಮ ಪುರಸ್ಕಾರವನ್ನು 2ವಿಭಾಗಗಳಲ್ಲಿ ಆಯೋಜಿಸಲಾಗಿದೆ.

1.    2014-2015ರ ಸಾಲಿನಲ್ಲಿ ಸಾಮಾಜಿಕ ಪ್ರಭಾವ ಬೀರಿದ ಅತ್ಯುತ್ತಮ ಅತ್ಯುತ್ತಮ ವರದಿ (ಒಬ್ಬರಿಗೆ)

೨.    ಸಾಮಾಜಿಕ ಜಾಲತಾಣ ಮಾಧ್ಯಮ ಅಥವಾ ನಾಗರಿಕ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ಪ್ರಭಾವ ಬೀರಿದ ಅತ್ಯುತ್ತಮ ವರದಿ/ಪೋಸ್ಟ್ (ಒಬ್ಬರಿಗೆ)

ನಾಡಿನ ಹೆಸರಾಂತ ಪತ್ರಿಕಾಕರ್ಮಿಗಳಾದ ತಿ.ತಾ. ಶರ್ಮ, ಬೆ.ಸು.ನಾ. ಮಲ್ಯರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿಯು ನಗದು ಹಣ, ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಕರ್ನಾಟಕದ ಪತ್ರಿಕೋದ್ಯಮದಲ್ಲಿ ಕಳೆದ ಒಂದು ವರ್ಷದಲ್ಲಿ ಮೇಲೆ ಉಲ್ಲೇಖಿಸಿದ 2 ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ಪತ್ರಕರ್ತರ ಹೆಸರನ್ನು ಸೂಚಿಸಲು ಈ ಮೂಲಕ ಕೋರಲಾಗಿದೆ. ಹಿರಿಯ-ಅನುಭವೀ ಪತ್ರಕರ್ತರ ಆಯ್ಕೆ ಸಮಿತಿಯೊಂದರ ಮೂಲಕ ಹೆಸರುಗಳನ್ನು ಅಂತಿಮಗೊಳಿಸಿ, ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಜೂನ್ 25, 2015 ರ ಮುಂಚಿತವಾಗಿ ಹೆಸರುಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ.

ಸಂಯೋಜಕರು,

ವಿಶ್ವ ಸಂವಾದ ಕೇಂದ್ರ, ಕರ್ನಾಟಕ

#106, 5ನೇ ಮುಖ್ಯರಸ್ತೆ,

ಚಾಮರಾಜಪೇಟೆ,

ಬೆಂಗಳೂರು  – 560018

ದೂ: 98806+21824

samvadk@gmail.com, rajeshpadmar@gmail.com

ಜುಲೈ 5, 2015 ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ವಂದನೆಗಳೊಂದಿಗೆ,

ರಾಜೇಶ್ ಪದ್ಮಾರ್ (9880621824)

ಸಂಯೋಜಕರು, ವಿಶ್ವ ಸಂವಾದ ಕೇಂದ್ರ, ಕರ್ನಾಟಕ

 

ದಿನಾಂಕ: ಜೂನ್ ೮, ೨೦೧೫

ಸ್ಥಳ: ಬೆಂಗಳೂರು

1 thought on “ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಪತ್ರಕರ್ತರಿಗಾಗಿ ‘ಮಾಧ್ಯಮ ಪುರಸ್ಕಾರ’; ನಾಮನಿರ್ದೇಶನಕ್ಕೆ ಆಹ್ವಾನ

Leave a Reply

Your email address will not be published.

This site uses Akismet to reduce spam. Learn how your comment data is processed.