ಬೆಂಗಳೂರು, ಜುಲೈ 31, 2023: ಯುವಜನತೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವರಾಜ್ಯ ಸಂಗ್ರಾಮದ ಅರಿವು-ಮಹತ್ವ ಮೂಡಿಸುವ, ದೇಶದ ಕುರಿತು ಶ್ರದ್ಧೆ, ಅಭಿಮಾನ, ಸಮರ್ಪಣಾ ಭಾವ, ಕರ್ತವ್ಯಪ್ರಜ್ಞೆ ಇತ್ಯಾದಿ ಮೌಲ್ಯಗಳನ್ನು ಪೋಷಿಸುವ ಪ್ರೇರಣಾದಾಯಿ ರಾಷ್ಟ್ರ ಮಟ್ಟದ ಯುವ ಅಭಿಯಾನ – ‘ನನ್ನ ಭಾರತ (MyBHARAT) ಯುವ ಅಭಿಯಾನ’. ಪ್ರತಿವರ್ಷ ಆಗಸ್ಟ್ 01 ರಿಂದ ಆಗಸ್ಟ್ 15ರ ತನಕ ನಡೆಯುತ್ತದೆ.
‘ನನ್ನ ಭಾರತ’ ಅಭಿಯಾನದಲ್ಲಿ ಸ್ವರಾಜ್ಯ ರಥ, ತಜ್ಞರಿಂದ ಉಪನ್ಯಾಸ ಸರಣಿ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ, ಕಾಲೇಜುಗಳಲ್ಲಿ ಉಪನ್ಯಾಸ, ವಾಕಥಾನ್, ರಾಜ್ಯ ಮಟ್ಟದ ವಿಚಾರ ಸಂಕಿರಣದ ಮೂಲಕ ಭಾರತದ ಮಹೋನ್ನತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲಾಗುತ್ತದೆ. ಈ ಯುವ ಅಭಿಯಾನದ ಹೆಚ್ಚಿನ ಕಾರ್ಯಕ್ರಮಗಳು ದಿಶಾ ಭಾರತ್ ಫೇಸ್ಬುಕ್ ಪೇಜ್ www.facebook.com/DishaBharat ಮೂಲಕ ಪ್ರಸಾರವಾಗಲಿದೆ.
ಸ್ವರಾಜ್ಯ ರಥ: ಸ್ವಾತಂತ್ರ್ಯ ಸಂಗ್ರಾಮದ ಅಜ್ಞಾತ ಬಲಿದಾನಿಗಳ, ನೇಪಥ್ಯದಲ್ಲಿ ಉಳಿದ ಹೋರಾಟಗಾರರ ಕುರಿತು ಹಾಗೂ ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂಬ ಆಶಯದೊಂದಿಗೆ ‘ಸ್ವರಾಜ್ಯ ರಥ’ವು ರಾಜ್ಯಾದ್ಯಂತ ಸಂಚರಿಸಲಿದೆ. ಬೆಂಗಳೂರಿನಿAದ ಅಗಸ್ಟ್ 01ರ ಬೆಳಗ್ಗೆ 8.00 ಗಂಟೆಗೆ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆಗೊಂಡು, ಬೆಳಗ್ಗೆ 8:30ಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಂದ ಹೊರಡಲಿರುವ ಸ್ವರಾಜ್ಯ ರಥವು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಲುಪಲಿದ್ದು ಸಾವಿರಾರು ಕಿ.ಮೀ ದೂರವನ್ನು ಕ್ರಮಿಸಿ ಆಗಸ್ಟ್ 15ರಂದು ಬೆಂಗಳೂರಿಗೆ ಮರಳಲಿದೆ.
ತಜ್ಞರ ಉಪನ್ಯಾಸ ಸರಣಿ: ‘ನನ್ನ ಭಾರತ’ ಅಭಿಯಾನದ ಭಾಗವಾಗಿ ಅಗಸ್ಟ್ 01 ರಿಂದ 15 ರ ತನಕ ಪ್ರತಿನಿತ್ಯ ಸಂಜೆ 7 ಕ್ಕೆ ಆನ್ಲೈನ್ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಷಯತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಆಗಸ್ಟ್ 1 ರಂದು ಮೊದಲ ಉಪನ್ಯಾಸ ಸರಣಿಯಲ್ಲಿ ‘Nalanda: A Legacy of Indian Knowledge Ethos’ ಎಂಬ ವಿಷಯದ ಕುರಿತು ನಳಂದ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಸುನೈನಾ ಸಿಂಗ್ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ದಿಶಾ ಭಾರತ್ ಫೇಸ್ಬುಕ್ ಪೇಜ್ www.facebook.com/DishaBharat ಮೂಲಕ ನೇರಪ್ರಸಾರವಾಗಲಿದೆ.
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: 76ನೇ ಸ್ವಾತ್ರಂತ್ಯೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ಅಮೃತಕಾಲದಲ್ಲಿ ಭಾರತ: ಯುವಜನತೆಯ ಪಾತ್ರ’ ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪದವಿ ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ವಹಸ್ತಾಕ್ಷರದಲ್ಲಿ 2500 ಶಬ್ದಮಿತಿಯಲ್ಲಿ ಬರೆದ ಪ್ರಬಂಧವನ್ನು ಆಗಸ್ಟ್ 15, 2023ರ ಒಳಗೆ ಕಳುಹಿಸಿಕೊಡಲು ಕೋರಲಾಗಿದೆ. ಪ್ರಬಂಧ ಕಳುಹಿಸಬೇಕಾದ ವಿಳಾಸ: ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’, Disha Bharat, 106, 2nd Floor, Vikrama Building, 5th main, Chamarajapete, Bengaluru 560018.
ವಾಕಥಾನ್: ಯುವಕರಲ್ಲಿ ಪ್ರೇರಣೆ, ಕ್ರಾಂತಿಕಾರಿಗಳ ಕುರಿತು ಆದರ್ಶ, ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ಉತ್ಸಾಹದಾಯಕ ಕಾಲ್ನಡಿಗೆ ಕಾರ್ಯಕ್ರಮ ‘ಸ್ವರಾಜ್ಯ ವಾಕಥಾನ್’ ಆಗಸ್ಟ್ 13ರಂದು ನಡೆಯಲಿದೆ. ಯುವಕ ಯುವತಿಯರು ಆಸಕ್ತಿಯಿಂದ ಈ ವಾಕಥಾನ್ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಆಗಸ್ಟ್ 13ರ ಮುಂಜಾನೆ 7:30ಕ್ಕೆ ಲಾಲ್ ಬಾಗ್ ಪಶ್ಚಿಮದ್ವಾರದ ಆವರಣದಿಂದ ಹೊರಟು ರಾಮಕೃಷ್ಣ ಆಶ್ರಮದ ವೃತ್ತವನ್ನು ತಲುಪಿ, ಹಿಂದಿರುಗಲಿದೆ.
ಕಾಲೇಜುಗಳಲ್ಲಿ ಉಪನ್ಯಾಸ: ವಿವಿಧ ಕಾಲೇಜುಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತದ ಸ್ವಾತಂತ್ರ್ಯೋತ್ಸವಕ್ಕೆ 76 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಗಾಗಿ ವಿಶೇಷ ಭಾಷಣ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
ರಾಜ್ಯಮಟ್ಟದ ವಿಚಾರ ಸಂಕಿರಣ: ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಶಿಕ್ಷಣ ವಲಯದ ವಿವಿಧ ಶ್ರೇಣಿಯ ಅಧ್ಯಾಪಕರಿಗೆ, ಸ್ನಾತಕೋತ್ತರ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ‘Lead India: Harnessing the power of youth towards Ethical Leadership’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆರ್.ವಿ.ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ನ ಸಹಭಾಗಿತ್ವದೊಂದಿಗೆ ಆಗಸ್ಟ್ 10 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬೆಂಗಳೂರಿನ ಜಯನಗರದ ಶಾಶ್ವತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಹರೀಶ್: 9113263342 ಲಾವಣ್ಯ
ಸರಣಿ ಉಪನ್ಯಾಸ ಕಾರ್ಯಕ್ರಮದ ವಿವರ
ಆಗಸ್ಟ್ 1, 2023
ಆಗಸ್ಟ್ 2, 2023
ಆಗಸ್ಟ್ 3, 2023
ಆಗಸ್ಟ್ 4, 2023
ಆಗಸ್ಟ್ 5, 2023
ಆಗಸ್ಟ್ 6, 2023
ಆಗಸ್ಟ್ 7, 2023
ಆಗಸ್ಟ್ 8, 2023
ಆಗಸ್ಟ್ 9, 2023
ಆಗಸ್ಟ್ 10, 2023
ಆಗಸ್ಟ್ 11, 2023
ಆಗಸ್ಟ್ 12, 2023
ಆಗಸ್ಟ್ 13, 2023
ಆಗಸ್ಟ್ 14, 2023
ಆಗಸ್ಟ್ 15, 2023