ಮೈಸೂರು, ಜೂನ್ 28, 2017. ವಿಶ್ವ ಸಂವಾದ ಕೇಂದ್ರದ ವತಿಯಿಂದ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ನಿಮಿತ್ತ ’ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಕಾಲೀನ ಪತ್ರಿಕೋದ್ಯಮ’ ಎಂಬ ವಿಷಯದ ಕುರಿತಾಗಿ ಸಂವಾದ ಕಾರ್ಯಕ್ರಮ ಮೈಸೂರಿನ ಮಾಧವಕೃಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪತ್ರಕರ್ತರು ’ಮೈಸೂರು ಮಿತ್ರ ’ ಮತ್ತು ಸ್ಟಾರ್ ಆಫ್ ಮೈಸೂರ್ ನ ಪ್ರಧಾನ ಸಂಪಾದಕರಾದ ಶ್ರೀ ಕೆ ಬಿ ಗಣಪತಿಯವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರು, ವಿಕ್ರಮ ಮತ್ತು ಹೊಸದಿಗಂತದ ನಿವೃತ್ತ ಸಂಪಾದಕರಾದ ಶ್ರೀ ದು ಗು ಲಕ್ಷ್ಮಣ್ ರವರು ವಿಷಯ ಮಂಡಿಸಿದರು. ಪ್ರಾಂತದ ಸಹ ಪ್ರಚಾರ ಪ್ರಮುಖ್ ಶ್ರೀ ಪ್ರದೀಪ್‌ರವರು ವಿಶ್ವ ಸಂವಾದ ಕೇಂದ್ರದ ಪರಿಚಯ ಮಾಡಿ ಕೊಟ್ಟರು. ನಂತರ ಶ್ರೀ ದು ಗು ಲಕ್ಷ್ಮಣರು ’ಪತ್ರಿಕಾ ದಿನಾಚರಣೆ ’ ವಾಸ್ತವವಾಗಿ ದೇವಋಷಿ ನಾರದ ಜಯಂತಿಯ ದಿನ (ವೈಶಾಖ ಮಾಸದ ಕೃಷ್ಣ ಪಕ್ಷದ ದ್ವಿತೀಯ) ಆಚರಿಸಬೇಕು. ಆದರೆ ಜೂಲೈ ಒಂದರಂದು ಮೊದಲ ಸಮಾಚಾರ ಪತ್ರಿಕೆ ಪ್ರಾರಂಭಿಸಿದಕ್ಕಾಗಿ ಹರ್ಮನ್ ಮೊಗ್ಲಿಂಗ್ ನೆನಪಿನಲ್ಲಿ ಆಚರಿಸುತ್ತೇವೆ. ಧರ್ಮಪ್ರಚಾರಕ್ಕಾಗಿಯೇ ಪತ್ರಿಕೆಯನ್ನು ಆರಂಭಿಸಿದವರು ಮೊಗ್ಲಿಂಗ್. ಹಾಗಾಗಿ ಈ ದಿನಕ್ಕಿಂತ ದೇವಋಷಿ ನಾರದ ಜಯಂತಿಯಂದೇ ಪತ್ರಿಕಾ ದಿನ ಆಚರಿಸಿದರೆ ಅರ್ಥಪೂರ್ಣ ಮತ್ತು ಇದನ್ನು ಹಿಂದೆ ಡಿವಿಜಿಯವರು ಒತ್ತಾಯಿಸಿದ್ದರು. ನಾರದರನ್ನು ಪ್ರಪ್ರಥಮ ಪತ್ರಕರ್ತರೆಂದು ಪ್ರಬಲವಾಗಿ ವಾದಿಸುವವರಲ್ಲಿ ಡಿವಿಜಿಯವರು ಅಗ್ರಮಾನ್ಯರು’ ಎಂದರು. ನಂತರ ಶ್ರೀ ಕೆ ಬಿ ಗಣಪತಿಯವರು ಮಾತನಾಡುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘವಿಲ್ಲದ ಭಾರತ ಊಹಿಸಲು ಅಸಾಧ್ಯ ಎಂದರು. ವೇದಿಕೆಯಲ್ಲಿ ಆರ್ ಎಸ ಎಸ ನ ಪ್ರಾಂತ ಸಂಘಚಾಲಕರಾದ ಮಾ .ವೆಂಕಟರಾಮ್ ಜಿ ಇದ್ದರು, ಹಾಗೆ ಸಮಾರಂಭಕ್ಕೆ ಸಂಘದ ಹಿರಿಯರು ಹಾಗು ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.