ಮೈಸೂರು ಫೆಬ್ರವರಿ 10, 2025: ಮೈಸೂರಿನಲ್ಲಿ ಸೋಮವಾರ ರಾತ್ರಿ ನಡೆದ ಘಟನೆ ಸಂವಿಧಾನಬದ್ಧ ವ್ಯವಸ್ಥೆಗೆ ಸವಾಲೆಸೆದಿದೆ. ಯಾವನೋ ಒಬ್ಬ ವ್ಯಕ್ತಿ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ‘ದಿಲ್ಲಿ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ಸ್ಥಿತಿ ಏನಾಗಿದೆ’ ಅನ್ನುವ ಮಾಹಿತಿಯನ್ನು ಪೋಸ್ಟ್ ಮಾಡಿದ ಎನ್ನುವ ಕಾರಣಕ್ಕೆ ಮೈಸೂರಿನಲ್ಲಿ ಸಾವಿರಾರು ಮಂದಿ ಏಕಾಏಕಿ ಜಮಾಯಿಸಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
ಪೋಸ್ಟ್ ಮಾಡಿದ್ದ ಆ ವ್ಯಕ್ತಿಯನ್ನು ಸಂಜೆ ವೇಳೆಗೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗಲೇ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮತಾಂಧರು ಠಾಣೆಯ ಮುಂದೆ ಜಮಾಯಿಸಿದ್ದಾರೆ. ನಂತರ ಪೊಲೀಸ್ ಸ್ಟೇಷನ್, ಪೋಲಿಸ್ ವಾಹನ ಮತ್ತು ಪೊಲೀಸರ ಮೇಲೆಯೇ ಕಲ್ಲುತೂರಾಟವನ್ನು ಮಾಡಿದ್ದಾರೆ. ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಸಂವಿಧಾನದತ್ತ ಪೊಲೀಸ್ ವ್ಯವಸ್ಥೆಗೇ ಸವಾಲೆಸೆದಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನವನ್ನು ಈ ಮತಾಂಧರು ಒಪ್ಪುವುದೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ನಿಟ್ಟಿನಿಲ್ಲಿ ದೇಶದ ಸಂವಿಧಾನ ಆಧಾರಿತ ವ್ಯವಸ್ಥೆಯನ್ನೊಪ್ಪದ ಸಂವಿಧಾನ ವಿರೋಧಿಗಳು ಯಾರು? ಎಂಬುದರ ಕುರಿತು ಸಾರ್ವಜನಿಕ ವಲಯ ಎಚ್ಚೆತ್ತುಕೊಳ್ಳಬೇಕಾಗಿದೆ.
‘ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಕಾನೂನಿನಲ್ಲಿ ಶಿಕ್ಷಿಸುವ ವ್ಯವಸ್ಥೆ ಇಂದು ನಮ್ಮ ದೇಶದಲ್ಲಿ ಇದೆ. ಆದರೆ ಈ ಮತಾಂಧರು ಇದು ಯಾವುದನ್ನು ನಂಬುವುದಿಲ್ಲ. ಸಂವಿಧಾನಕ್ಕೆ ಕಿಂಚಿತ್ತೂ ಗೌರವವನ್ನು ಈ ಮತಾಂಧರು ನೀಡುತ್ತಿಲ್ಲ ಎಂಬುದು ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಘಟನೆಗಳು ಸಾಬೀತುಪಡಿಸಿವೆ. ಇದು ಮತ್ತೊಂದು ಉದಾಹರಣೆ. ಅವರು ನಂಬುವುದು ಷರಿಯಾ ಕಾನೂನನ್ನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.’ ಎಂಬುದಾಗಿ ಹಿರಿಯ ನಾಗರಿಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://www.facebook.com/share/r/12F2oycQ8gw/?mibextid=wwXIfr