ಸಿನಿಮಾ ಎಲ್ಲರ ಚಿತ್ತವನ್ನು ಆಕರ್ಷಿಸುವಂತಹ ಅದ್ಭುತ ಜಗತ್ತು. ಜನಮಾನಸಕ್ಕೆ ಮನರಂಜನೆಯ ಜೊತೆಗೆ ಮನೋವಿಕಾಸಕ್ಕಾಗಿಯೂ ಶ್ರಮಿಸುತ್ತಿರು ಕ್ಷೇತ್ರ. ತನ್ನದೇ ಆದ ವೈಶ್ವಿಕ ಭಾಷೆಯನ್ನು ತನ್ನ ಕಾರ್ಯನಿರ್ವಹಣಾ ಪರಿಯ ಮೂಲಕ ಕಟ್ಟಿಕೊಂಡಿರುವ ಜಗತ್ತು ಸಿನೆಮಾದಾದ್ದರೂ, ಬಹುತೇಕ ಜಗತ್ತಿನ ಎಲ್ಲಾ ಪ್ರಮುಖ ಭಾಷೆಯ ಸಿನೆಮಾಗಳಿಗೂ ಅದರದ್ದೇ ಆದ ವೀಕ್ಷಕರ ಗುಂಪು ದೊಡ್ಡದೇ ಇದೆ. ಹೀಗಾಗಿ ಸಿನಿಪ್ರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಿಸಲಾಗುತ್ತಿದೆ.

ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವಂತಹ ಪ್ರೇಕ್ಷಕರಿಗೆ ವರ್ಷದಲ್ಲಿ ಒಂದು ದಿನ ಕಡಿಮೆ ದರದಲ್ಲಿ ಟಿಕೆಟ್‌ ಕಲ್ಪಿಸುವ ವ್ಯವಸ್ಥೆಯ ಮೂಲಕ ಹೆಚ್ಚಿನ ಜನರನ್ನು ಸಿನೆಮಾ ನೋಡಲು ಬರುವಂತೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ದಿನವನ್ನು ಶುರು ಮಾಡಿದರು. ಈ ವರ್ಷ ಸೆಪ್ಟೆಂಬರ್‌ 20ರಂದು ರಾಷ್ಟ್ರೀಯ ಸಿನಿಮಾ ದಿನವೆಂದು ಆಚರಿಸಲಾಗುತ್ತಿದೆ. ಭಾರತದ ಬಹುತೇಕ ಮಲ್ಟಿಪ್ಲೆಕ್ಸ್‌ ಗಳಲ್ಲಿ 99 ರೂ.ಗೆ ಚಲನಚಿತ್ರ ಟಿಕೆಟ್ ಗಳು ಲಭ್ಯವಿರುತ್ತವೆ. ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ಸಾಮಾನ್ಯ ದರದಲ್ಲಿ ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಇದು ಉತ್ತಮ ಅವಕಾಶವನ್ನು ಕಲ್ಪಿಸಿದೆ.


ಇತಿಹಾಸ
ಕೋವಿಡ್‌ ನಂತರ ಮತ್ತೆ ಚಿತ್ರಮಂದಿರ ಹೌಸ್‌ ಫುಲ್‌ ಮಾಡುವ ಸಲುವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ ಆಫ್‌ ಇಂಡಿಯಾ(ಎಂಎಐ) ರಾಷ್ಟ್ರೀಯ ಸಿನಿಮಾ ದಿನವನ್ನಾಗಿ ಸ್ಥಾಪಿಸಿತು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಿದ್ದ ಸಿನಿಮಾ ಮಾಲೀಕರು ಮತ್ತೆ ಜನರನ್ನು ಒಗ್ಗೂಡಿಸುವ ಸಲುವಾಗಿ ಈ ದಿನವನ್ನ ಮೀಸಲಿಟ್ಟರು.


ರಾಷ್ಟ್ರೀಯ ಸಿನಿಮಾ ದಿನದಂದು ಚಲನಚಿತ್ರ ಟಿಕೆಟ್ ಗಳನ್ನು ಗಣನೀಯ ರಿಯಾಯಿತಿಯಲ್ಲಿ ನೀಡಲಾಗುತ್ತದೆ. ಇದು ಚಲನಚಿತ್ರ ಪ್ರೇಕ್ಷಕರನ್ನು ಚಲನಚಿತ್ರೋದ್ಯಮವನ್ನು ಪುನರುಜ್ಜೀವನಗೊಳಿಸುವಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ. ರಾಷ್ಟ್ರೀಯ ಸಿನಿಮಾ ದಿನವನ್ನು ಮೊದಲು 2022ರಲ್ಲಿ ಆಚರಿಸಲಾಯಿತು. ಇದನ್ನು ಆರಂಭದಲ್ಲಿ ಸೆಪ್ಟೆಂಬರ್‌ 16ಕ್ಕೆ ಯೋಜಿಸಲಾಗಿತ್ತು. ಆದರೆ ನಂತರ ಸೆಪ್ಟೆಂಬರ್‌ 23ಕ್ಕೆ ಮುಂದೂಡಲಾಯಿತು.ಈ ವಿಶೇಷ ದಿನದಂದು ಚಲನಚಿತ್ರ ಉತ್ಸಾಹಿಗಳು ಚಿತ್ರಮಂದಿರಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಚಲನಚಿತ್ರಗಳನ್ನು ಆನಂದಿಸಬಹುದು.


ಕಳೆದ ವರ್ಷ ಸೆಪ್ಟೆಂಬರ್ 23 ರಂದು 65 ಲಕ್ಷಕ್ಕೂ ಹೆಚ್ಚು ಚಲನಚಿತ್ರ ವೀಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿ, ಚಿತ್ರಮಂದಿರಗಳನ್ನು ಯಶಸ್ವಿಯಾಗಿ ಪುನರಾರಂಭಿಸಿದ ಸಂಭ್ರಮವನ್ನು ಆಚರಿಸಿದರು. ದೇಶದಾದ್ಯಂತ ಬರೋಬ್ಬರಿ 4,000 ಸ್ಕ್ರೀನ್‌ಗಳಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ನೋಡಬಹುದು ಎಂದು ಎಂಎಐ ಘೋಷಣೆ ಮಾಡಿದೆ.


ಅದರಂತೆ ಸೆಪ್ಟೆಂಬರ್‌ 20ರಂದು ಪಿವಿಆರ್, ಸಿನಿಪೊಲೀಸ್, ಐನಾಕ್ಸ್, ಮಿರಾಜ್‌, ಸಿಟಿ ಪ್ರೈಡ್‌, ಏಷಿಯನ್‌, ಮುಕ್ತಾ ಎಟು, ಮೂವಿ ಟೈಮ್‌, ವೇವ್‌, ಮೂವಿಮ್ಯಾಕ್ಸ್‌, ಡಿಲೈಟ್‌ ಸೇರಿದಂತೆ 4,000ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಈ ಸಿನಿಪ್ರೇಕ್ಷಕರಿಗೆ ಈ ಕೊಡುಗೆ ನೀಡಲಾಗಿದೆ.


ಮಹತ್ವ
• ರಾಷ್ಟ್ರೀಯ ಸಿನಿಮಾ ದಿನವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಒಂದು ದಿನದ ಸಿನಿಮೀಯ ಆಚರಣೆಗಾಗಿ ಒಟ್ಟುಗೂಡಿಸುವ ವಿಶೇಷ ವೇದಿಕೆಯಾಗಿದೆ
• ಈ ದಿನವು ಭಾರತದ ಚಲನಚಿತ್ರಗಳಲ್ಲಿ ಪ್ರತಿಬಿಂಬಿತವಾದ ಭಾರತದ ಅನನ್ಯ ಸಾಂಸ್ಕೃತಿಕ ಗುರುತು ಮತ್ತು ಪರಂಪರೆಯನ್ನು ಆಚರಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
• ರಾಷ್ಟ್ರದ ಇತಿಹಾಸ, ಸಂಪ್ರದಾಯಗಳು ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಸಿನೆಮಾದ ಮೂಲಕ ತಿಳಿಸಲು ಈ ದಿನ ಸೂಕ್ತ ದಿನವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.