ದೇಶದ ಬೆನ್ನೆಲುಬು ಆಗಿರುವ ರೈತರನ್ನು ಗೌರವಿಸಲು ಮತ್ತು ಗುರುತಿಸುವ ಸಲುವಾಗಿ ವಿಶ್ವಾದ್ಯಂತ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಅಷ್ಟೆ ಅಲ್ಲದೆ ರೈತರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಗುರುತಿಸಿ ಪುರಸ್ಕಾರ ನೀಡಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ.


ರಾಷ್ಟ್ರೀಯ ದಿನ ಇತಿಹಾಸ
ರೈತ ನಾಯಕ, ಚೌಧರಿ ಚರಣ್ ಸಿಂಗ್, ಜುಲೈ 28, 1979 ರಿಂದ ಜನವರಿ 14, 1980 ರವರೆಗೆ ಅಲ್ಪಾವಧಿಗೆ ಭಾರತದ ಪ್ರಧಾನಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ರೈತರ ಕಲ್ಯಾಣಕ್ಕಾಗಿ ತಂದ ಯೋಜನೆಗಳು ಇಂದಿಗೂ ಜನಪ್ರಿಯವಾದವು.
ರೈತರು ಮತ್ತು ಅವರ ಸಮಸ್ಯೆಗಳ ಕುರಿತು ಅವರ ಪುಸ್ತಕಗಳು ದೇಶಾದ್ಯಂತ ರೈತರ ಜೀವನವನ್ನು ಸುಧಾರಿಸಲು ವಿವಿಧ ಪರಿಹಾರಗಳನ್ನು ಪ್ರಸ್ತುತಪಡಿಸಿದವು. 2001 ರಲ್ಲಿ, ಚರಣ್ ಸಿಂಗ್ ಅವರ ಜನ್ಮದಿನದ ಗೌರವಾರ್ಥವಾಗಿ ಸರ್ಕಾರವು ಕಿಸಾನ್ ದಿವಸ್ ಅನ್ನು ಘೋಷಿಸಿತು.ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೀಡಿದ ಪ್ರಸಿದ್ಧ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್”, ಅನ್ನು ಚೌಧರಿ ಚರಣ್ ಸಿಂಗ್ ಅನುಸರಿಸಿದರು.


ಚೌಧರಿ ಚರಣ್ ಸಿಂಗ್ ಪರಿಚಯ
ಚೌಧರಿ ಚರಣ್ ಸಿಂಗ್ ಅವರು ಡಿಸೆಂಬರ್ 23, 1902ರಲ್ಲಿ ಮೀರತ್ ನ ನೂರ್ಪುರ್ ನಲ್ಲಿ ಜನಿಸಿದರು. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವಿತೀಯ ನಾಯಕ ಎನಿಸಿಕೊಂಡಿದ್ದರು. 1959ರ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು, ನೆಹರೂರವರನ್ನು ಸಾರ್ವಜನಿಕವಾಗಿಯೇ ಅವರ ಸಾಮೂಹಿಕ ಮತ್ತು ಸಾಮಾಜಿಕ ನೀತಿಗಳನ್ನು ವಿರೋಧಿಸಿದ್ದರು. ಇನ್ನು ಸರಳ ಜೀವನದಲ್ಲಿ ನಂಬಿಕೆಯಿಟ್ಟಿದ್ದ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.


ಚೌಧರಿ ಚರಣ್ ಸಿಂಗ್ ವಿಶೇಷತೆಗಳು
ಚೌಧರಿ ಚರಣ್ ಸಿಂಗ್ ಸ್ಮಾರಕವನ್ನು ʼಕಿಸಾನ್ ಘಾಟ್ ʼಎಂದು ಕರೆಯಲಾಗುತ್ತದೆ. ಲಕ್ನೊದ ಅಮೌಸಿ ವಿಮಾನ ನಿಲ್ದಾಣವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಮೀರತ್ ವಿಶ್ವವಿದ್ಯಾಲಯವನ್ನು ಸಹ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ ಎಂದು ಮರು ನಾಮಕರಣ ಮಾಡಲಾಗಿದೆ. ಚೌಧರಿ ಚರಣ್‌ ಸಿಂಗ್‌ ಅವರಿಗೆ ಫೆಬ್ರವರಿ 9, 2024 ರಂದು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರೈತ ದಿನಾಚರಣೆಯ ಉದ್ದೇಶ
ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ನಿರ್ವಹಣೆಯನ್ನು ನೋಡಿಕೊಳ್ಳುವ ಮತ್ತು ಅವರ ಹಕ್ಕುಗಳನ್ನು ನಾವು ರಕ್ಷಿಸಿದರೆ ಪ್ರತಿಯಾಗಿ ನಮ್ಮ ಸಮಾಜದ ಒಂದು ಭಾಗವಿದೆ ಎಂಬುದು ಬಹಳ ಸಂತೋಷದ ಸಂಗತಿಯಾಗಿದೆ.
ಇನ್ನು ವಾಸ್ತವವಾಗಿ, ಕೃಷಿಗೆ ಅಗತ್ಯವಾದ ಹೂಡಿಕೆಗಳು, ಸಲಕರಣೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ರೈತರಿಗೆ ಶಿಕ್ಷಣ ನೀಡುವುದು ಸಹ ಅಗತ್ಯವಾಗಿದೆ. ಸರ್ಕಾರವು ಕಾಲಕಾಲಕ್ಕೆ ರೈತರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಮತ್ತು ಅವರಿಗೆ ಪ್ರಯೋಜನಗಳನ್ನು ನೀಡಲು ಅನೇಕ ಕೃಷಿ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತದೆ. ನೀವು ಅದನ್ನು ಮಾಡಲು ಸಾಧ್ಯವಾದರೆ, ನೀವು ಅವರ ಜೀವನ ಮಟ್ಟವನ್ನು ಹೆಚ್ಚಿಸಬಹುದು, ನಂತರ ಇದಕ್ಕಿಂತ ಉತ್ತಮವಾಗಿ ಏನೂ ಸಾಧ್ಯವಿಲ್ಲ. ಅದಕ್ಕಾಗಿಯೇ ರೈತ ದಿನಾಚರಣೆಯನ್ನು ಆಚರಿಸುವುದು ಅವಶ್ಯಕ.

Leave a Reply

Your email address will not be published.

This site uses Akismet to reduce spam. Learn how your comment data is processed.