ಬೆಂಗಳೂರು: ಭಾರತ ಕಳೆದ 10 ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಪ್ರತಿಯೊಬ್ಬ ಭಾರತೀಯನಿಗೆ ಬ್ಯಾಂಕ್ ಖಾತೆ ವ್ಯವಸ್ಥೆ, ಮುದ್ರಾ ಲೋನ್, ಮೇಕ್ ಇನ್ ಇಂಡಿಯಾ ಸ್ಕೀಮ್, ಆಧಾರ್ ಕಾರ್ಡ್ ವ್ಯವಸ್ಥೆ ಹೀಗೆ ಹತ್ತು ಹಲವು ವಿಚಾರಗಳು ಭಾರತವನ್ನು ವಿಶ್ವದಲ್ಲಿ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಮುಂಚೂಣಿಗೆ ಬರುವಂತೆ ಮಾಡಿವೆ ಎಂದು ಕೊಲ್ಕತ್ತಾದ ಚಿಂತಕ, ವಿಶ್ಲೇಷಕ ರಿಷಿ ಬಾಗ್ರಿ ಹೇಳಿದರು.

ದಿಶಾಭಾರತದ ‘ನನ್ನ ಭಾರತ’ ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾದ ಆನ್‌ಲೈನ್ ಉಪನ್ಯಾಸ ಸರಣಿಯ ನಾಲ್ಕನೇ ದಿನ ‘New India: Atmanirbhar Bharat’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಅತ್ಯುತ್ತಮ ಅಂತರ್ಜಾಲ ವ್ಯವಸ್ಥೆ, LPG ಅನಿಲ ಸರಬರಾಜು, ವಸತಿ ನಿರ್ಮಾಣ, ಸ್ವಚ್ಚ ಭಾರತದ ಕಲ್ಪನೆಯ ಅಡಿಯಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ, ವಿದ್ಯುತ್ ಸರಬರಾಜು, ನಲ್ಲಿ ನೀರಿನ ವ್ಯವಸ್ಥೆಯನ್ನು, ಆರೋಗ್ಯದ ದೃಷ್ಟಿಯಲ್ಲಿ ಆಯುಷ್ಮಾನ್ ಕಾರ್ಡ್ ಮೂಲಕ ವೈದ್ಯಕೀಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ಕೈಗೆಟುಕುವಷ್ಟು ವ್ಯವಸ್ಥೆ ಸರಳವಾಗಿದೆ. ಸಾರಿಗೆ ಕ್ಷೇತ್ರದಲ್ಲಿ ಫಾಸ್ಟ್ ಟ್ಯಾಗ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸಮಯ, ಹಣ, ಪೆಟ್ರೋಲ್ ಡೀಸೆಲ್ ಉಳಿತಾಯಕ್ಕೆ ಸಹಕಾರಿಯಾಗಿದೆ ಎಂದರು.

ಅಭಿವೃದ್ದಿಯ ನಿಟ್ಟಿನಲ್ಲಿ ದೇಶದಲ್ಲಿ ಅನೇಕ ವಿದ್ಯಾಸಂಸ್ಥೆ, ಮೆಡಿಕಲ್ ಕಾಲೇಜು, ಹಾಗೆ ಇನ್ನಿತರ ವೃತ್ತಿಪರ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಿದೆ. ಕ್ರೀಡೆ, ಪ್ರವಾಸೋಧ್ಯಮ, ಸಾರಿಗೆ ವ್ಯವಸ್ಥೆಯಲ್ಲಿ ಮುಂದಿರುವ ಭಾರತ, ಡಿಜಿಟಲ್ ಟ್ರಾನ್ಸ್ಯಾಕ್ಷನ್ ನಲ್ಲಿಯೂ ಮುಂಚೂಣಿಯಲ್ಲಿದೆ. ಗಡಿ ಭದ್ರತೆಯ ಜೊತೆಗೆ ಆಂತರಿಕ ಭದ್ರತೆಯನ್ನು ನೀಡುತ್ತಿದ್ದು ಕಾಶ್ಮೀರದಲ್ಲಿ ಒಳ ನುಸುಳುವಿಕೆಯ ಸಂಖ್ಯೆ ಕಡಿಮೆಯಾಗಿದೆ ಎಂದು ನುಡಿದರು.

ಪ್ರಸ್ತುತ ಪ್ರತಿ ಮನೆಯಲ್ಲೂ ಮೊಬೈಲ್ ಗಳಿವೆ. ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಪ್ರಾರಂಭವಾಗಿದ್ದು, ಉದ್ಯೋಗ್ಯವನ್ನು ಕಲ್ಪಿಸಿಕೊಟ್ಟಿದೆ. ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಮಹತ್ತರ ಬೆಳವಣಿಗೆಯನ್ನು ಕಂಡಿದ್ದು, ವಿಮಾನ ನಿಲ್ದಾಣದ ಸಂಖ್ಯೆ ಹೆಚ್ಚಳವಾಗಿದೆ, ವಾಣಿಜ್ಯ ವಿಮಾನದ ಸಂಖ್ಯೆಯೂ ಹೆಚ್ಚಳವಾಗಿದೆ. ಸ್ವಾವಲಂಬಿಯಾಗಿ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿರುವ ಭಾರತ ಕಷ್ಟದಲ್ಲಿರುವ ಅನೇಕ ರಾಷ್ಟ್ರಗಳಿಗೆ ಸಹಾಯವನ್ನು ಮಾಡುವ ಮಟ್ಟಕ್ಕೆ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published.

This site uses Akismet to reduce spam. Learn how your comment data is processed.