ಭಾರತ ಸರ್ವತಂತ್ರ ಸ್ವತಂತ್ರವಾಗಿ ಏಳುವರೆ ದಶಕಗಳೇ ಕಳೆದಿವೆ. ಅದರ ಸಂಭ್ರಮವನ್ನು ಆಜಾದಿ ಕಾ
ಅಮೃತ್ ಮಹೋತ್ಸವ್ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ವಿಶ್ವದಾದ್ಯಂತ ಇರುವ ಭಾರತೀಯರು
ಅತ್ಯಂತ ಅಭಿಮಾನದಿಂದ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಭೌತಿಕ ಸ್ವಾತಂತ್ರ್ಯವನ್ನು ನಾವು
ಸ್ವಾತಂತ್ರ್ಯವೆಂದು ನಂಬುವ ಹಿಂದೂಗಳಿಗೆ, ತಮ್ಮ ಮಾನಸಿಕತೆ ಇಂದಿಗೂ ದಾಸ್ಯದಲ್ಲಿ ಇದೆ
ಎಂಬುದು ಅರಿವಾಗುವುದಾದರೂ ಯಾವಾಗ ? ಎಂಬ ಪ್ರಶ್ನೆ ಅತ್ಯಂತ ಬಲವಾಗಿ ನನ್ನಲ್ಲಿ ಮೊಳೆತದ್ದು
ಇದೇ ಕೆಲ ದಿನಗಳ ಹಿಂದೆ ನೂಪುರ್ ಶರ್ಮಾ ಎಂಬ ಹಿಂದೂ ಹೆಣ್ಣುಮಗಳ ಮೇಲೆ ನಡೆದ
ಸೈದ್ಧಾಂತಿಕ ಆಕ್ರಮಣದಿಂದ.
ಭಾರತದ ಅನೇಕ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಭಾರತೀಯತೆ,
ಹಿಂದುತ್ವ, ಸ್ವಸ್ಥ ಸಮಾಜ, ಸನಾತನಧರ್ಮ ಎಂಬಿತ್ಯಾದಿ ವಿಷಯಗಳ ಮೇಲೆ ಸಂವಾದ ಏರ್ಪಟ್ಟರೆ
ನೂಪುರ್ ಶರ್ಮಾರ ಹೆಸರು ಸದಾ ಅಗ್ರಪಂಕ್ತಿಯಲ್ಲೇ ಇರುತ್ತದೆ. ಕಾರಣ ಆಕೆ ಘಂಟಾಘೋಷವಾಗಿ
ಮಾತನಾಡುತ್ತಾಳೆಂದಲ್ಲ. ಬದಲಿಗೆ ಆಕೆ ನೀಡುವ ಮಾಹಿತಿಗಳು ಅದರ ಆಕರಗಳು ಸದಾ ಕರಾರುವಾಕ್ಕು
ಹಾಗೂ ವಸ್ತನಿಷ್ಟವಾಗಿರುತ್ತವೆ. ಜೊತೆಗೆ ಎದುರಾಳಿಗೆ ಅದು ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ.
ಕಳೆದ ಮೇ ೨೬ರಂದೂ ಕೂಡ ನಡೆದದ್ದು ಇದೇ. ಖಾಸಗಿ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಸಂವಾದ
ನಡೆಯುತ್ತಿರುವ ಸಂದರ್ಭದಲ್ಲಿ ಎದುರಾಳಿಯೋರ್ವ ಹಿಂದೂಗಳ ಶಿವಲಿಂಗ ಮನುಷ್ಯನ ಒಂದು
ಖಾಸಗಿ ಅಂಗ. ಅದನ್ನು ಹಿಂದೂಗಳು ಏಕೆ ಪೂಜಿಸಬೇಕು. ಅದೊಂದು ಕಾರಂಜಿ ಎಂದು ಕೇಳಿದ್ದೇ
ತಡ ಕೆಂಡಾಮಂಡಲವಾದ ನೂಪುರ್ ೬ ವರ್ಷದ ಹೆಣ್ಣುಮಗಳನ್ನು ಮದುವೆಯಾಗಿ ೯ ವರ್ಷದ ಹೆಣ್ಣು
ಮಗಳೊಡನೆ ಸಂಭೋಗ ನಡೆಸುತ್ತೇನೆ ಎನ್ನುವ ನಿಮ್ಮ ಪ್ರವಾದಿ ಮುಹಮ್ಮದರ ನೀತಿ ಎಂಥಹದ್ದು?
ಇದನ್ನು ನಾನು ಹೇಳುತ್ತಿರುವುದಲ್ಲ ಬದಲಾಗಿ ನೀವು ದಿನನಿತ್ಯ ಓದುವ ನಿಮ್ಮ ಪವಿತ್ರಗ್ರಂಥಗಳಲ್ಲಿಯೇ
ನಮೂದಾಗಿದೆ ಎಂದು ಪ್ರಶ್ನೆ ಎಸಗಿಯೇ ಬಿಟ್ಟರು. ಒಮ್ಮೆ ತಳಮಳಗೊಂಡ ಎದುರಾಳಿ ಇಂತಹ
ನಾಚಿಕೆಗೆಟ್ಟ ಹೆಣ್ಣಿನೊಂದಿಗೆ ನಾನು ಸಂವಾದ ನಡೆಸುವುದೇ ಇಲ್ಲ ಎಂದು ಛೀಮಾರಿ ಹಾಕಿದ.
ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯವಾಗುತ್ತದಂತೆ. ಸೋಷಿಯಲ್ ಮೀಡಿಯಾ ಕೂಡ
ಇದಕ್ಕೆ ಹೊರತಲ್ಲ. ಈ ಇಷ್ಟೇ ಪುಟ್ಟ ಸಂವಾದದ ತುಣುಕನ್ನು ಸಾವಿರ ಬಾರಿ ಬೇರೆ ಬೇರೆ ಕೋನಗಳಿಂದ
ಬೇರೆ ಬೇರೆ ಸೊಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಗಳಲ್ಲಿ ಸಂವಾದವನ್ನು ಏರ್ಪಡಿಸಿದ ಮೊಹಮ್ಮದ್ ಜುಬೇನ್ ಹಾಗೂ ಇತರೆ ಕಟ್ಟರ್ ಮುಸ್ಲಿಂವಾದಿಗಳು ಹರಿಬಿಟ್ಟರು. ಆಕೆ ಜ್ಞಾನದೊಂದಿಗೆ ಸೆಣಸಲಾಗದ
ಹೇಡಿಗಳು ಆಕೆಯ ಚಾರಿತ್ರ್ಯವಧೆಗೆ ತಿರುಗಿನಿಂತರು. ನಮ್ಮ ಪ್ರವಾದಿಯ ಬಗೆಗೆ ಕೆಟ್ಟದಾಗಿ ಹೇಳಿಕೆ ನೀಡಿದ
ನೂಪುರ್ ಶರ್ಮಾಳ ರುಂಡವನ್ನು ಚಂಡಾಡಬೇಕು, ಆಕೆಯ ಸಂಪೂರ್ಣ ಕುಟುಂಬವನ್ನು
ನಾಶಗೊಳಿಸಬೇಕು ಎಂಬ ಪತ್ರಿಕಾ ಹೇಳಿಕೆಗಳ ಜೊತೆಗೆ ಆಕೆಗೆ ಒಂದು ಲಕ್ಷಕ್ಕೂ ಹೆಚ್ಚು ಕೊಲೆ
ಬೆದರಿಕೆಗಳು ಮೇಲಿಂದ ಮೇಲೆ ಬರತೊಡಗಿದವು. ಪ್ರಪಂಚದಾದ್ಯಂತ ಮುಸ್ಲಿಂ ರಾಷ್ಟಗಳು ಹಾಗೂ
ಮುಸ್ಲಿಂ ಸಂಘಟನೆಗಳು ಒಕ್ಕೊರಲಿನಿಂದ ಆಕೆಯ ಹೇಳಿಕೆಯನ್ನು ಖಂಡಿಸಿ ಭಾರತದ ವಸ್ತುಗಳ ಮೇಲೆ
ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯ ಮಾಡಿದವು. ಆಕೆಯ ಪ್ರತಿಕೃತಿಯನ್ನು
ವಿಕೃತಗೊಳಿಸಿ ನಡುಬೀದಿಯಲ್ಲಿ ನೇತುಹಾಕಲಾಯಿತು. ಟ್ವಿಟರ್ ಅಭಿಯಾನಗಳು ಏರ್ಪಟ್ಟವು. ಆಕೆಯ
ಕ್ಷಮೆಯನ್ನು ಕೋರುವಂತೆ ಆಗ್ರಹಿಸಲಾಯಿತು. ಹತ್ತುದಿನಗಳಿಗೂ ಹೆಚ್ಚುಕಾಲ ಈ ರೌರವ ಯಾತನೆಯನ್ನು
ಸಹಿಸಿ ಕಡೆಗೆ ನೂಪುರ್ ಶರ್ಮಾ ಬಹಿರಂಗವಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯನ್ನು
ಯಾಚಿಸಿ ಬಿಟ್ಟರು. ಧಗಧಗನೆ ಉರಿಯುತ್ತಿದ್ದ ದ್ವೇಷದ ದಳ್ಳುರಿ ಶಮನವಾಗದೆ ಇದ್ದರೂ ಬಹಳಷ್ಟು
ಮಟ್ಟಿಗೆ ತಣ್ಣಗಾಯಿತು.
ಇಷ್ಟೆಲ್ಲ ಕ್ಲೀಷೆಗಳ ನಡುವೆ ಇಡೀ ಮುಸ್ಲಿಂ ಸಮುದಾಯ ತಾವೇ ಒಂದಾಗಿ ನೂಪುರ್‌ಳ ಧ್ವನಿ ಹತ್ತಿಕ್ಕುವಾಗ
ಹಿಂದೂಗಳಾಗಿ ನಾವು ಮಾಡಿದ್ದಾದರೂ ಏನನ್ನು? ಆಕೆಯ ಹೇಳಿಕೆ ವಿವಾದಾತ್ಮಕ ಹಾಗೂ
ಸಮುದಾಯದ-ಸಮಾಜದ ಆಂತರಿಕ ಶಾಂತಿಗೆ ಭಂಗ ತರುವಂಥದ್ದು ಎಂಬ ಸುಪ್ರೀಂಕೋರ್ಟ್ನ
ಹೇಳಿಕೆಯನ್ನು ಕೇಳಿಸಿಕೊಂಡು ಕೇವಲ ೨೦ ಶೇಕಡ ಮಂದಿ ಆಕೆಯನ್ನು ಟ್ವಿಟರ್ ಅಭಿಯಾನದಲ್ಲಿ
ಹಾಗೂ ಇತರೆ ಮೂಲಗಳಿಂದ ಬೆಂಬಲಿಸಿದರೇ ಹೊರತು ಇನ್ಯಾವುದೇ ಗಟ್ಟಿ ಚರ್ಚೆಗಳು ಏರ್ಪಡಲಿಲ್ಲ.
ತಂಡೋಪತಂಡವಾಗಿ ಬೆಂಬಲಕ್ಕೆ ನಿಲ್ಲುವ ಯಾವುದೇ ದೈತ್ಯಅಲೆಗಳು ಏಳಲೇ ಇಲ್ಲ. ಪರಿಣಾಮವಾಗಿ
ಹಿಂದೂ ಸಮಾಜದ ಪರವಾಗಿ ನಿಂತ ನೂಪುರ್ ಶರ್ಮಾ ತಮ್ಮ ಹೇಳಿಕೆಯನ್ನು ಹಿಂಪಡೆದು ತಮ್ಮದು
ಪ್ರಮಾದ ಎಂಬಂತೆ ತಲೆತಗ್ಗಿಸುವಂತಾಯ್ತು. ಈ ರೀತಿ ಹೇಳಿಕೆ ನೀಡಿದ್ದು ಕೇವಲ ನೂಪುರ್ ಶರ್ಮಾ
ಒಬ್ಬರೇ ಆಗಿದ್ದರೆ ಅದರ ಪ್ರಶ್ನೆ ಬೇರೆ ಇರುತ್ತಿತ್ತು. ಅವರೊಂದಿಗೆ ನವೀನ್ ಜಿಂದಾಲ್ ಕೂಡ ಇದೇ
ವಿವಾದಕ್ಕೆ ಎಣೆಯಾಗಿದ್ದರು. ಆದರೆ ಅವರ ಮೇಲೆ ಏಕೆ ಇಷ್ಟೆಲ್ಲಾ ಒತ್ತಡಗಳು ಉಂಟಾಗಲಿಲ್ಲ ?
ಹಿಂದೂ ಹೆಣ್ಣುಮಗಳಾಗಿ ನಮ್ಮ ಸಂಸ್ಕೃತಿಯ ಬಗೆಗೆ ಧ್ವನಿಯನ್ನು ಎತ್ತಿ ಸತ್ಯವನ್ನು ಬಿಚ್ಚಿಟ್ಟರೆ ಮಾತ್ರ
ಇಲ್ಲಸಲ್ಲದ ವಿವಾದಗಳು ಏಕೆ ಪುಂಖಾನುಪುಂಖವಾಗಿ ತೆರೆದುಕೊಳ್ಳುತ್ತವೆ ? ಈ ರೀತಿಯ ತಾತ್ಸಾರ ಯಾಕೆ?
ಆಕೆ ಒಬ್ಬ ಹಿಂದೂ ಹೆಣ್ಣು ಮಗಳಾಗಿದ್ದಕ್ಕೇನು ? ಎಂಬಿತ್ಯಾದಿ ಪ್ರಶ್ನೆಗಳು ಸೂಕ್ಷ್ಮ ಸಂವೇದನೆಯ
ಎಂಥವರಿಗೂ ಏಳುವುದು ಸಹಜ.
ಕ್ಷಮಯಾ ಧರಿತ್ರಿ, ಮಾತೃದೇವೋಭವ, ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ
ಎಂದೆಲ್ಲಾ ಹೆಣ್ಣನ್ನು ಗೌರವಿಸುವ ಸಮಾಜ ನಮ್ಮದು. ಆದರೆ ಭಾರತೀಯತೆಯ ಪುರಾತನ ಚೌಕಟ್ಟಿನಿಂದ
ಹೊರಬಂದು, ಈಗಿನ ಬದಲಾವಣೆಗೊಂಡ ಸಮಾಜಕ್ಕೆ ಅನುಗುಣವಾಗಿ ಬದಲಾಗುತ್ತಾ, ಸಮಾಜದ
ಸಂವೇದನೆಗೆ ಒಬ್ಬ ಹೆಣ್ಣು ಮಗಳು ಸ್ಪಂದಿಸಿದರೆ ಆಕೆಯ ನಿಲುವನ್ನು ಸಮರ್ಥಿಸುವ, ಆಕೆಯ ಪರವಾಗಿ
ಗಟ್ಟಿಯಾಗಿ ಧ್ವನಿಯನ್ನು ಎತ್ತುವ ಮನೋಭಾವ ನಮ್ಮಲ್ಲಿ ಇನ್ನೂ ಮೊಳೆತಿಲ್ಲ.
ಎಂ. ಎಫ್. ಹುಸೇನ್‌ರಂತಹ ಕೀಳು ಮಟ್ಟದ ಕಲಾವಿದ ನಮ್ಮ ಹಿಂದೂ ದೇವಾನು ದೇವತೆಯರನ್ನು ವಿಕೃತವಾಗಿ
ಚಿತ್ರಿಸಿದರೆ ‘ಅಯ್ಯೋ ಇದೆಂಥಾ ವಿಕೃತಿ?! ಎಂದು ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ
ಮರುಗುವಂಥವರೇ ಹೊರತು ಸಮಾಜದೆದುರಿಗೆ ಒಕ್ಕೊರಲಿನ ಬಹಿಷ್ಕಾರದ ಧ್ವನಿ ಎತ್ತುವವರಲ್ಲ.
ಬಾಲಿವುಡ್ ಹಾಡುಗಳಲ್ಲಿ ರಾಧ ಕೈಸೇನ ಜಲೇ, ರಾಧಾ ನಾಚೇಗಿ, ಮೆಯಾ ಪಿಯಾ ಘರ್ ಆಯಾ ಓ
ರಾಮ್‌ಜಿ ಎಂಬಿತ್ಯಾದಿ ಕ್ಷುಲ್ಲಕ ಹಾಡುಗಳನ್ನು ಮಧುರವಾದ ಸಂಗೀತದೊಂದಿಗೆ ಪೋಣಿಸಿಕೊಟ್ಟಾಗ
ಸಂಗೀತದ ಮಧುರತೆಗೆ ಮರುಳಾಗುತ್ತೇವೆಯೇ ವಿನಃ ಸಾಹಿತ್ಯದ ಗೋಜಲಿಗೂ ಹೋಗುವುದಿಲ್ಲ. ಸ್ಟಾಂಡ್
ಅಪ್ ಕಾಮೆಡಿಗಳಲ್ಲಿ ನಮ್ಮ ರಾಮ ಸೀತೆಯರಿಗೆ ಮಾಡುವ ಅವಮಾನಗಳನ್ನು ಹಾಸ್ಯ ಎಂದು
ಹಗುರವಾಗಿ ತೆಗೆದುಕೊಳ್ಳುವಷ್ಟು ಸಹಿಷ್ಣುಗಳು ನಾವು. ನಮ್ಮ ಶ್ರದ್ಧೆಯ ಪಾರ್ವತಿ ದೇವಿಯನ್ನು ಪಾರೋ
ಎಂತಲೂ ಶ್ರೀಕೃಷ್ಣನನ್ನು ಕಿಸ್ನ ಎಂತಲೂ ಸಂಬೋಧಿಸಿದರೆ ನಮ್ಮ ಸಂಸ್ಕೃತಿಯ ಮೇಲೆ ಆಗುತ್ತಿರುವ
ದಾಳಿಯ ಬಗ್ಗೆ ನಮಗೆ ಅರಿವಾಗುವುದೇ ಇಲ್ಲ. ಮಸೀದಿಯ ಒಳಗೆ ಶಿವಲಿಂಗ ದೊರೆತರೆ ದೇವಸ್ಥಾನದ
ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಮಾತನ್ನು ವಿಜ್ರಂಭಿಸುತ್ತೇವೆ ಬಿಟ್ಟರೆ ಅದರ ವಿರುದ್ಧ
ಧ್ವನಿಯೆತ್ತುವ, ಜನರ ಹುಟ್ಟಡಗಿಸುವ ಯಾವ ಕ್ರಮವನ್ನು ಜರುಗಿಸುವುದಿಲ್ಲ. ಶಿವಲಿಂಗಕ್ಕೆ ಕಾಂಡೋಮ್
ಹಾಕಿ ‘ನೋಡಿ ನಿಮ್ಮ ಶಿವನನ್ನು ನಾವು ರಕ್ಷಿಸಿದ್ದೇವೆ’ ಎಂದು ಹಾಸ್ಯಗೈಯ್ಯುವಾಗ ಮತ್ತಿನ್ನೆಂದೂ ಈ
ಕೃತ್ಯಕ್ಕೆ ಕೈಹಾಕಬಾರದ ಹಾಗೆ ತಕ್ಕ ಶಾಸ್ತಿ ನಾವು ಅವರಿಗೆ ಮಾಡುವುದೇ ಇಲ್ಲ. ಇಂಥಹ ತೀಕ್ಷ್ಣ
ಸಂದರ್ಭದಲ್ಲಿ ಏಕಿಂಥ ನೀರವ ಮೌನ ಎಂಬ ಪ್ರಶ್ನೆ ಮನಸ್ಸಿನಾಳದಲ್ಲಿ ಸದಾ ಗಿಜಿಗುಟ್ಟುತ್ತಿರುತ್ತದೆ.
ರಾಜಸ್ಥಾನದ ರಾಣಿ ಪದ್ಮಾವತಿ ತನ್ನ ಸಂಸ್ಥಾನದ ಮೇಲೆ ಮುಸ್ಲಿಮರ ದಾಳಿಯಾಗುತ್ತಿರುವಾಗ ತನ್ನ
ಸಮಾಜದ ಹೆಣ್ಣುಮಕ್ಕಳ ಮಾನ ರಕ್ಷಣೆಗಾಗಿ ತನ್ನ ದಾಸಿಯರ ಸಮೇತವಾಗಿ ಅಗ್ನಿ ಪ್ರವೇಶವನ್ನು
ಮಾಡಿದ ದಯನೀಯ ಘಟನೆಯನ್ನು ಇಂದಿಗೂ ನಾವು ಕೊಂಡಾಡುತ್ತೇವೆ. ಕಾರಣ ಆಗಿನ ಸಮಾಜ ಆ
ಹೆಣ್ಣುಮಗಳ ದಿಟ್ಟ ಹೆಜ್ಜೆಗೆ ಗೌರವಯುತವಾಗಿ ಬೆಂಬಲಕ್ಕೆ ನಿಂತದ್ದು. ಮೊಹಮ್ಮದ್ ಘಜ್ನಿಯ ನಿರಂತರ
ದಾಳಿಯ ಸಮಯದಲ್ಲಿ ಹಿಂದೂ ಹೆಣ್ಣು ಮಕ್ಕಳು ತಮ್ಮ ಆಭರಣಗಳನ್ನು ಮಾರಿ ಯುದ್ಧಕ್ಕೆ ಹಾಗೂ
ತಮ್ಮ ಹಿಂದೂ ಸಮಾಜದ ರಕ್ಷಣೆಗೆ ನೆರವಾಗಿದ್ದವರು. ಬಡವರ್ಗದ ಹೆಂಗಳೆಯರು ದೀನರಂತೆ ದುಡಿದು
ಯುದ್ಧಭೂಮಿಯಲ್ಲಿ ಸೆಣೆಸುತ್ತಿರುವ ಸೈನಿಕರಿಗೆ ತಮ್ಮಿಂದಾಗುವ ಅಳಿಲು ಸೇವೆಯಾದರೂ ಸರಿಯೇ
ಅದನ್ನು ಮಾಡಿಯೇ ತೀರೋಣ ಎಂಬ ಮನೋಧರ್ಮವನ್ನು ಬೆಳೆಸಿಕೊಂಡಿದ್ದವರು. ಆಗಿನ
ಕಾಲದಲ್ಲಿಯೇ ಹೆಣ್ಣು ಮಕ್ಕಳ ನಡೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ, ಇಂತಹ ವಿಶಾಲ
ಮನೋಭಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ಸಮಾಜ ಇಂದು ಕುಂದುತ್ತಿರುವುದಾದರೂ ಏತಕ್ಕೆ?
ಅಂದು ನೂಪುರ್ ಶರ್ಮಾ ನೀಡಿದ ಹೇಳಿಕೆಗೆ ಭಾರತದ ಮುಸಲ್ಮಾನರು ಹಾಗೂ ಮುಸಲ್ಮಾನ
ಸಂಘಟನೆಗಳು ಒಕ್ಕೊರಲಿನಿಂದ ಧ್ವನಿಯನ್ನು ಎತ್ತಿದರು. ಕತಾರ್, ಕುವೈತ್, ಇರಾನ್ ರಾಷ್ಟ್ರಗಳೂ
ತ್ವರಿತವಾಗಿ ಎಚ್ಚೆತ್ತುಕೊಂಡವು. ಟೆಟರಿಸ್ಟ್ ಅಸೋಸಿಯೇಷನ್‌ಗಳೂ ನೂಪುರ್ ಶರ್ಮಾರಿಗೆ ಮಾನಭಂಗ
ಹಾಗೂ ಜೀವ ಬೆದರಿಕೆಯನ್ನಿತ್ತವು. ಅವರ ಪ್ರಕಾರ ಭಾರತದಲ್ಲಿದ್ದುಕೊಂಡು ಅವರ ಕುಕೃತ್ಯಗಳ ವಿರುದ್ಧ
ಧ್ವನಿಯೆತ್ತಿದರೆ ನಾವು ಹಿಂದೂ ಆತಂಕವಾದಿಗಳು. ಯುಪಿ, ದೆಹಲಿ, ಗುಜರಾತ್, ಬಾಂಬೆಯಂತಹ
ನಗರಗಳನ್ನು ಬೆಂಕಿಯಲ್ಲಿ ಆಹುತಿ ಮಾಡುತ್ತೇವೆ ಎಂಬ ಹೇಳಿಕೆಗಳು ಅವರವು. ಹಿಂದೂಗಳು
ಉಸಿರೆತ್ತಿದರೂ ಕೂಡ ಅವರನ್ನು ರಾಷ್ಟ್ರೀಯವಾದಿಗಳು ಎಂಬ ಹಣೆಪಟ್ಟಿಯೊಂದಿಗೆ ವಿಜೃಂಭಿಸಲಾಗುತ್ತದೆ.
ಇಂತಹ ಸಂಧರ್ಭದಲ್ಲಿ ಹಿಂದೂಗಳ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲವೆ ?
ಶಿವಲಿಂಗವನ್ನು
ಮನುಷ್ಯನ ಖಾಸಗಿ ಅಂಗ ಎಂದು ಹಾಸ್ಯ ಮಾಡಲಾಗುತ್ತದೆ. ಶಿವಲಿಂಗವನ್ನು ಕಾರಂಜಿ ಎಂದು
ಕರೆಯುತ್ತಾರೆ. ೧೫ ನಿಮಿಷ ನಿಮ್ಮ ಸೈನ್ಯವನ್ನು ಸಡಿಲಿಸಿ ತೋರಿಸಿ ನಿಮ್ಮ ಹಿಂದೂ ಸಮಾಜವನ್ನು
ನಿರ್ಣಾಮ ಮಾಡಿಬಿಡುತ್ತೇವೆ ಎಂಬಿತ್ಯಾದಿ ಅವರ ಸವಾಲುಗಳು ಸಮಾಜದ ಶಾಂತಿಭಂಗ
ಮಾಡುವುದಿಲ್ಲವೇ ? ಪ್ರತೀ ದಿನ ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟ ಕೆಟ್ಟ ಪ್ರತಿಕ್ರಿಯೆಗಳಿಂದ ನಮ್ಮ
ಹೆಣ್ಣು ಮಕ್ಕಳನ್ನು ಅವಹೇಳನ ಗೈದಾಗ ನಮಗೆ ಅವಮಾನವಾಗುವುದಿಲ್ಲವೇ ? ಆಗ ಏಕೆ ಯಾವ
ಪಾರ್ಟಿಗಳೂ ಧ್ವನಿ ಎತ್ತುವುದಿಲ್ಲ ? ಸೋಷಿಯಲ್ ಮೀಡಿಯಾ ಇಲಾಖೆಗಳು, ಮಹಿಳಾ ಪರ
ಸಂಘಟನೆಗಳು, ಐಟಿ ಸೆಲ್‌ಗಳು ಏಕೆ ಶಾಂತವಾಗಿರುತ್ತವೆ. ಏಕೆಂದರೆ ಹಿಂದೂಗಳು ಇನ್ನೂ
ಜಾಗೃತರಾಗಿಯೇ ಇಲ್ಲ. ಇನ್ನು ಘಟನೆಯ ಅರ್ಧಾಂಶವನ್ನಷ್ಟೇ ಅರಿತವರಿಗೆ ಈ ಧರ್ಮ ಸೂಕ್ಷ್ಮ ಗಳು
ಯಾವುದೇ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ.
ಎಂದು ನಾವು ನಮ್ಮ ಧರ್ಮ ಹಾಗೂ ಭಗವಂತನಿಗಾಗಿ ಸೆಟೆದು ನಿಲ್ಲುವ ಮನೋಭಾವವನ್ನು
ಬೆಳೆಸಿಕೊಳ್ಳುತ್ತೇವೆಯೋ ಅಂದು ನಮ್ಮ ಸುದ್ದಿಗೆ ಬರುವ ಧೈರ್ಯವನ್ನು ಯಾರೂ ತೋರುವುದಿಲ್ಲ.
ಭಾರತವನ್ನೇ ಆಶ್ರಯತಾಣವನ್ನಾಗಿಸಿಕೊಂಡು, ಇಲ್ಲಿನ ನೆಲ ಜಲ ಭೂಮಿಯನ್ನು ಅನುಭವಿಸುತ್ತಿರುವ
ಗೊತ್ತುಗುರಿ ಇಲ್ಲದ ಉದ್ರಿಕ್ತ ಮುಸಲ್ಮಾನರು ಇಂದು ಭಾರತದ ಪರವಾಗಿ ಇರುವುದನ್ನು ಬಿಟ್ಟು ಅರಬ್
ಸಂಘಟನೆಗಳ ಜೊತೆ ಕೈಜೋಡಿಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದಂತೆ
“ಮುಸಲ್ಮಾನರ ಭ್ರಾತೃತ್ವ ಮಾನವೀಯ ಭ್ರಾತೃತ್ವವಲ್ಲ ಬದಲಾಗಿ ಮುಸಲ್ಮಾನರು ಮುಸಲ್ಮಾನರಿಗೋಸ್ಕರ
ಹೊಂದಿರುವ ಭ್ರಾತೃತ್ವ. ನೈಜ ಮುಸಲ್ಮಾನನಿಗೆ ಭಾರತವನ್ನು ತನ್ನ ಮಾತೃಭೂಮಿಯಾಗಿ ಸ್ವೀಕರಿಸಲು
ಇಸ್ಲಾಂ ಎಂದಿಗೂ ಅನುಮತಿಸುವುದಿಲ್ಲ” ಎಂಬುದು ನೂರರಷ್ಟು ಸತ್ಯ ಎಂದು ಇಲ್ಲಿ ಸಾಬೀತಾಗುತ್ತದೆ.
ಆದರೆ ಮುಸಲ್ಮಾನರ ವಿಷಯ ಬಂದಾಗ ನಾಸ್ತಿಕರೂ ಕೂಡ ಮುಸಲ್ಮಾನರ ಹೇಳಿಕೆಗಳನ್ನು ಸಮರ್ಥಿಸಲು
ಮುಂದಾಗುತ್ತಾರೆ. ಆದರೆ ಅವರ ಹಿಂದೂ ಪತ್ನಿಯರು ಎಂದಿನಂತೆ ಮೌನವಹಿಸುತ್ತಾರೆ. ಇಂತಹ
ಸಂದರ್ಭಗಳೇ ಇವರ ಭಾರತದ ಬಗೆಗಿನ ನಿಷ್ಠೆಯನ್ನು ಗೋಚರವಾಗುವಂತೆ ಮಾಡುತ್ತವೆ.
ಒಂದಿಷ್ಟು ಗೌಪ್ಯವಾದರೂ ಎಲ್ಲರಿಗೂ ಗೋಚರಿಸುವ ವಿಚಾರವಿಲ್ಲಿದೆ. ಈ ತರಹದ ಸಂದರ್ಭದಲ್ಲಿ ಒಂದು
ತಂಡ ನಮ್ಮ ಮಾಧ್ಯಮಗಳನ್ನು ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದೆ. ಇವೇ ಇಸ್ಲಾಂಮಿನ ಕ್ಷುಲ್ಲಕ
ಮಾಹಿತಿಗಳನ್ನು ವಿಡಿಯೋ ಅಥವಾ ಪೋಸ್ಟರ್‌ಗಳ ಮೂಲಕ ಹೊರಹಾಕುತ್ತವೆ. ಈ ತಂಡಗಳೇ
ಆಕ್ರಮಣಕಾರಿ ಇಸ್ಲಾಂ, ಇಸ್ಲಾಮೋಫೋಬಿಯಾ, ನರಮೇಧ ಮುಂತಾದ ಬಗೆಗೆ ಪೋಸ್ಟ್ಗಳನ್ನು
ಹರಿದಾಡಿಸುವಲ್ಲಿ ನಿರತವಾಗಿರುತ್ತವೆ. ಉದಾರವಾದಿಗಳು ಹಾಗೂ ನಾಸ್ತಿಕರೆನ್ನುವ ಮತ್ತೊಂದು ತಂಡ
ಆಧುನಿಕತೆ ಎಂಬ ಪ್ರವೃತ್ತಿಯನ್ನು ಅನುಸರಿಸುತ್ತಾ ಬಾಲಿವುಡ್‌ನೊಂದಿಗೆ ಕೈಜೋಡಿಸುತ್ತದೆ. ಆದರೆ
ಇಂತಹ ವಿಷಯಗಳು ಭುಗಿಲೆದ್ದಾಗ ಮಾನವ ಹಕ್ಕು ಹಾಗೂ ಕೇಸರಿ ಆತಂಕವಾದಿಗಳು ಎಂಬ
ಹಣೆಪಟ್ಟಿಯನ್ನು ಹಿಂದೂಗಳಿಗೆ ಹಚ್ಚುವಲ್ಲಿ ನಿರತವಾಗುತ್ತದೆ. ಮೂರನೇ ತಂಡ ಅಂತರಾಷ್ಟ್ರೀಯ
ಮಟ್ಟದಲ್ಲಿ ಭಾರತದ ಮಾನಹಾನಿಗಾಗಿ ಹೊಂಚುಹಾಕುತ್ತಿರುತ್ತದೆ. ಪ್ರಭಾವಿ ವಿದೇಶಿ ವ್ಯಕ್ತಿಗಳ ಮೂಲಕ
ಭಾರತದ ವಿರುದ್ಧ ಹೇಳಿಕೆ ನೀಡಿಸುವ ಸಂಚುಹಾಕುತ್ತಿರುತ್ತದೆ. ಇವರ ಜೊತೆಗೆ ಯಾವುದೋ ಮುಸ್ಲಿಂ
ಆತಂಕವಾದಿಯನ್ನೇ ತೊಂದರೆಗೆ ಒಳಪಟ್ಟವನು ಎಂದು ಬಿಂಬಿಸುತ್ತಿರುತ್ತದೆ. ನಾಲ್ಕನೇ ತಂಡ ಕಲ್ಲುಗಳನ್ನು
ಸಂಗ್ರಹಿಸಿ ಯಾವುದೇ ಹೇಳಿಕೆ ಬರಲಿ ; ಬೇಕಾದರೆ ಅದು ಸುಳ್ಳು ಸುದ್ದಿಯೇ ಆಗಿರಲಿ ತಕ್ಷಣ
ಕಾರ್ಯನಿರತವಾಗುತ್ತದೆ. ಇವರುಗಳು ಯಾವ ಕ್ಷಣದಲ್ಲಾದರೂ ದಂಗೆ ಎಬ್ಬಿಸಲು ಸಿದ್ದರಿರುತ್ತಾರೆ.
ಇಷ್ಟೆಲ್ಲದರ ಮಧ್ಯೆ ಕುರಾನಿನಲ್ಲಿರುವ ಸಾಲುಗಳನ್ನು ಹೇಳಿದರೂ ಸಾಕು ನಾವುಗಳು ‘ಹಿಂದೂ
ಆತಂಕವಾದಿಗಳಾಗಿ’ ಬಿಂಬಿತರಾಗುತ್ತೇವೆ.
ಒಬ್ಬ ಮನುಷ್ಯನ ಅಥವಾ ಸಮಾಜದ ನೈಜ ಮೌಲ್ಯ ಅರಿವಾಗುವುದೇ ವಿಪತ್ತಿನ ಸಂದರ್ಭದಲ್ಲಿ.
ಆಕ್ಷಣದಲ್ಲಿ ಆ ವ್ಯಕ್ತಿಯ ಪ್ರತಿಕ್ರಿಯೆ ಹಾಗೂ ನಿರ್ವಹಣೆಯ ರೀತಿಯೂ ಕೂಡ ಅದರ ಭಾಗವಾಗಿರುತ್ತದೆ.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಯಾರೂ ನಮ್ಮನ್ನು ಬನ್ನಿ ಜಾಗೃತರಾಗಿ – ಕೈಜೋಡಿಸಿ
ಎಂದು ಎಚ್ಚರಿಸುವುದಿಲ್ಲ. ನಮ್ಮ ಜಾಗೃತ ಹಿಂದೂಗಳು ಮತ್ತಷ್ಟು ಜಾಗೃತರಾಗಬೇಕಿರುವುದು ನೂಪುರ್
ಶರ್ಮಾರಂತಹ ದಿಟ್ಟ ಹೆಣ್ಣುಮಗಳು ಸತ್ಯವನ್ನು ನುಡಿದಾಗ ಮುಸ್ಲಿಮರು ತೋರಿದ ದಂಗೆಗೆ. ನಾವೇನು
ರಕ್ತಪಾತಗೈಯಬೇಕಾಗಿಲ್ಲ. ಅವರ ಕುದಿಯುತ್ತಿರುವ ಅಹಂಕಾರದ ನೆತ್ತರನ್ನು ನಮ್ಮ ದಿಟ್ಟ ಉತ್ತರಗಳಿಂದ
ಶಮನಗೈದರೆ ಸಾಕು ಅವರು ತಾವಾಗಿಯೇ ದಮನಗೊಳ್ಳುತ್ತಾರೆ.
ಸಹನಾ ಚೇತನ್, ಮಹಿಳಾ ಪರ ಚಿಂತಕರು,ಭರತನಾಟ್ಯ ಕಲಾವಿದರು