ಉದಕಮಂಡಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ‘ಪ್ರಾಂತ ಪ್ರಚಾರಕ ಬೈಠಕ್’ ಇಂದು ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಉದಕಮಂಡಲ (ಊಟಿ)ದಲ್ಲಿ ಆರಂಭಗೊಂಡಿತು. ಪ್ರಾಂತ ಪ್ರಚಾರಕರ ಬೈಠಕ್ ಜುಲೈ 15, 2023 ರ ಸಂಜೆ 6 ಗಂಟೆಗೆಯವರೆಗೆ ನಡೆಯಲಿದೆ. ಈ ಬೈಠಕ್ ನಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಪ್ರಾಂತಗಳ ಪ್ರಾಂತ ಪ್ರಚಾರಕರು , ಕ್ಷೇತ್ರ ಪ್ರಚಾರಕರು, ಕಾರ್ಯವಿಭಾಗಗಳ ಅಖಿಲ ಭಾರತೀಯ ಪ್ರಮುಖರು, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರು, ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಉಪಸ್ಥಿತರಿರುವರು.
ಸಭೆಯಲ್ಲಿ ಮುಖ್ಯವಾಗಿ ಈ ವರ್ಷ ನಡೆದ ಸಂಘ ಶಿಕ್ಷಾ ವರ್ಗಗಳ ವರದಿ ಮತ್ತು ಸಮೀಕ್ಷೆ, ಸಂಘದ ಶತಾಬ್ದಿ ಕಾರ್ಯವಿಸ್ತಾರ ಯೋಜನೆಗಳಲ್ಲಿನ ಪ್ರಗತಿ, ಶಾಖಾಸ್ತರದಲ್ಲಿ ಸಾಮಾಜಿಕ ಕಾರ್ಯಗಳ ವಿವರಣೆ ಮತ್ತು ಪರಿವರ್ತನೆಯ ಅನುಭವಗಳ ವಿನಿಮಯ ನಡೆಯಲಿವೆ. ಸಭೆಯಲ್ಲಿ ಮುಂದಿನ ನಾಲ್ಕೈದು ತಿಂಗಳ ಕಾರ್ಯಕ್ರಮಗಳ ಯೋಜನೆ ಮತ್ತು ಪ್ರಸಕ್ತ ರಾಷ್ಟ್ರೀಯ ಸನ್ನಿವೇಶಗಳು , ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ.