ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಹೊರಟಿರುವ ಕರ್ನಾಟಕ ಸರಕಾರದ ನಿರ್ಧಾರವನ್ನು ವಿಶ್ವ ಹಿಂದು ಪರಿಷದ್ ವಿರೋಧಿಸಿದೆ. ಈ ಕುರಿತ ಪತ್ರಿಕಾ ಹೇಳಿಕೆ ಇಲ್ಲಿದೆ:
ವಿಶ್ವ ಹಿಂದು ಪರಿಷದ್ – ಕರ್ನಾಟಕ
೯೧, ಧರ್ಮಶ್ರೀ , ಶಂಕರಪುರ, ಬೆಂಗಳೂರು – ೫೬೦ ೦೦೪
__________________________________________________________
ದೂರವಾಣಿ : ೦೮೦-೨೨೪೨೪೯೧೮
ದಿನಾಂಕ : ೦೭.೧೦.೨೦೧೬
ಹಿಂದು ಧಾರ್ಮಿಕ ಶ್ರದ್ಧೆಯ ಪ್ರಮುಖ ಭಾಗವಾದ ಮಠಗಳು ಸಹಜವಾಗಿ ಎಲ್ಲಾ ಹಿಂದುಗಳ ಮತ್ತು ನಿರ್ದಿಷ್ಟವಾಗಿ, ಅಲ್ಲಿಗೆ ನಡೆದುಕೊಳ್ಳುವ ಭಕ್ತರ ಸ್ವತ್ತುಗಳಾಗಿವೆ. ಅಲ್ಲಿಯ ಕಾರ್ಯಕಲಾಪಗಳಲ್ಲಿ ಸರ್ಕಾರವು ಹಸ್ತಕ್ಷೇಪವನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಹಾಗೂ ಮಠಕ್ಕೆ ನಡೆದುಕೊಳ್ಳುವ ಭಕ್ತರ ಮತ್ತು ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗುತ್ತದೆ.
ಅನೇಕ ನೆಪಗಳನ್ನು, ಕಾರಣಗಳನ್ನು ಒಡ್ಡಿ ಸರ್ಕಾರವು ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿ ಅಡ್ಡಿಯುಂಟು ಮಾಡುವ ದಿಕ್ಕಿನಲ್ಲಿ ಯೋಚಿಸುತ್ತಿರುವುದು ಖಂಡನೀಯವಾದುದು.
ಶ್ರೀಮಠವು ನಡೆಸುತ್ತಿರುವ ಸಮಾಜಮುಖೀ ಚಟುಚಟಿಕೆಗಳು ಅನುಕರಣೀಯವೂ, ಅವಶ್ಯಕವೂ ಎಂದು ಸಿದ್ಧವಾದ ಕಾರ್ಯಕ್ರಮಗಳಾಗಿವೆ. ನಶಿಸಿ ಹೋಗುತ್ತಿರುವ ದೇಸಿ ಗೋತಳಿಗಳ ರಕ್ಷಣೆಯ ನಿರ್ಧಾರವಂತೂ ದೇಶದಲ್ಲೇ ವಿಶಿಷ್ಟವಾದ ಆಂದೋಲನವಾಗಿದೆ
ಜಾತ್ಯಾತೀತ ಸರ್ಕಾರವು ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕರಿಯನ್ನು ನೇಮಿಸಲು ಹೊರಟಿರುವುದು ಅನಾವಶ್ಯಕವೂ, ಆಕ್ಷೇಪಣೀಯವೂ ಆಗಿದೆ. ರಾಜ್ಯ ಸರ್ಕಾರದ ಈ ಏಕಪಕ್ಷೀಯ ನಡೆಯನ್ನು ವಿಶ್ವ ಹಿಂದು ಪರಿಷತ್ತು ತೀವ್ರವಾಗಿ ವಿರೋಧಿಸುತ್ತದೆ.
(ಟಿ. ಎ. ಪಿ. ಶೆಣೈ)
ಪ್ರಾಂತ ಕಾರ್ಯದರ್ಶಿ