ಇಂದು ಜಯಂತಿ
ರಾಮಾನುಜಾಚಾರ್ಯರು ರಾಷ್ಟ್ರಕಂಡ ಪ್ರಭಾವಿ ತತ್ವಜ್ಞಾನಿ, ದಾರ್ಶನಿಕರು, ಸಮಾಜ ಸುಧಾರಕರು. ಇವರು ಅಸ್ಪೃಶ್ಯತೆ ಕುರಿತು ಹೋರಾಡಿದ ಮಹಾನ್‌ ಸಂತ. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವುದರ ಜೊತೆಗೆ ಸಮಾಜದಲ್ಲಿ ಸಮಾನತೆಯನ್ನು ಸಾರಿದರು. ಇಂದು ಇವರ ಜಯಂತಿ.


ಪರಿಚಯ
ಶ್ರೀ ರಾಮಾನುಜಾಚಾರ್ಯರು ಸಾಮಾನ್ಯ ಶಕ ವರ್ಷ 1017 ರಲ್ಲಿ ತಮಿಳುನಾಡಿನ ಪೆರಂಬುದೂರಿನಲ್ಲಿ ಜನಿಸಿದರು. ಇವರ ತಂದೆ ಕೇಶವ ಸೋಮಯಾಜಿ ಮತ್ತು ತಾಯಿ ಕಾಂತಿಮತಿ. ತಮ್ಮ ತಂದೆಯ ಮರಣದ  ನಂತರ ಕುಟುಂಬ ಸಮೇತ ಕಾಂಚಿಪುರಂಗೆ ಬಂದು ನೆಲೆಸಿದರು. ಅಲ್ಲಿ ಅವರು ಯಾದವ ಪ್ರಕಾಶರೆಂಬ ಪ್ರಸಿದ್ಧ ವಿದ್ವಾಂಸರ ಬಳಿ ಶಿಷ್ಯರಾದರು. ಯಾದವ ಪ್ರಕಾಶರು ಅದ್ವೆತ್ರೖತ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ರಾಮಾನುಜರು ವಿಶಿಷ್ಟಾದ್ವೈತದ ಮುಖ್ಯ ಪ್ರತಿಪಾದಕರಾದರು. ಅದರ ಸಲುವಾಗಿ ಇಡೀ ದೇಶವನ್ನು ಪರಿಭ್ರಮಿಸಿದರು.


ರಾಮಾನುಜಾಚಾರ್ಯರು ಕಂಚಿಯಲ್ಲಿ ವರದರಾಜ ಎಂಬ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದರು. ಅವರು ಉಪನಿಷತ್‌ ಸಿದ್ದಾಂತಗಳಲ್ಲಿ ಬೋಧನೆ ಮಾಡಲು ಪ್ರಾರಂಭಿಸಿದರು. 20 ವರ್ಷಗಳ ನಂತರ ಅವರು ಪುನಃ ಶ್ರೀರಂಗಂಗೆ ಮರಳಿದರು. ಮತ್ತೆ ಅಲ್ಲಿ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರಿದರು. ತಮ್ಮ ಸಿದ್ಧಾಂತವನ್ನು ಪ್ರಸಾರ ಮಾಡಲು ಅವರು 74 ಕೇಂದ್ರಗಳನ್ನು ಸ್ಥಾಪಿಸಿದರು.


ಕರ್ನಾಟಕದೊಂದಿಗೆ ಒಡನಾಟ
ರಾಮಾನುಜಾಚಾರ್ಯರು ಸುಮಾರು 12 ವರ್ಷಗಳ ಕಾಲ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿದ್ದರು. ಅಲ್ಲಿ ಅವರು ತಮ್ಮ ವಿಶಿಷ್ಟಾದ್ವೈತವನ್ನು ಪ್ರಚಾರ ಮಾಡಿದರು. ಅವರು ಬೋಧಿಸಿದ ವಿಶಿಷ್ಟಾದ್ವೈತ ಸಿದ್ಧಾಂತವು ಇಂದಿಗೂ ಭಾರತದ ಜನಪ್ರಿಯ ಆಧ್ಯಾತ್ಮೀಕ ಮಾರ್ಗವಾಗಿ ಪರಿಗಣಿಸಲಾಗಿದೆ.


ರಾಮಾನುಜಾಚಾರ್ಯರ ಕೃತಿಗಳು
ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದರು. ವೇದಾರ್ಥಸಂಗ್ರಹ, ವೇದಾಂತದೀಪ, ವೇದಾಂತಸಾರ ಹೀಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಬ್ರಹ್ಮ–ಸೂತ್ರಗಳಿಗೆ ಶ್ರೀ ಭಾಷ್ಯ, ಜ್ಞಾನ ಸಾರ ಮತ್ತು ಪ್ರಮೇಯ ಸಾರವನ್ನು ರಚಿಸಿದರು. ಅವರು ವೇದಾಂತ ಸಂಗ್ರಹಂ ಬರೆದರು.


ರಾಮಾನುಜಾಚಾರ್ಯರು 1137 ರಂದು ಶ್ರೀರಂಗಂನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.