ಇಂದು ಜಯಂತಿ
ರಾಣಿ ದುರ್ಗಾವತಿ ಗೊಂಡ್ವಾನಾದ ರಾಜಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು. ಮೊಘಲ್ ಸಾಮ್ರಾಜ್ಯದ ವಿರುದ್ಧ ಗೊಂಡ್ವಾನಾವನ್ನು ರಕ್ಷಿಸಿದಂತಹ ವೀರವನೀತೆ. ರಾಣಿ ದುರ್ಗಾವತಿ ಅವರು ಶತ್ರುಗಳ ವಿರುದ್ಧ ಧೈರ್ಯದಿಂದ ಹೋರಾಡಿದವಳು. ಇಂದು ಅವರ ಜಯಂತಿ.


ಪರಿಚಯ
ರಾಣಿ ದುರ್ಗಾವತಿ ಅವರು ಅಕ್ಟೋಬರ್‌ 5, 1524ರಂದು ಕಲಿನ್ ಜರ್ ಕೋಟೆಯಲ್ಲಿ ಜನಿಸಿದರು. 1542ರಲ್ಲಿ ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ಹಿರಿಯ ಮಗ ದಲ್ಪತ್ ಷಾ ಅವರನ್ನು ವಿವಾಹವಾದರು. ನಂತರ ರಾಣಿ ದುರ್ಗಾವತಿ ಅವರ ಜೀವನ ಮಹತ್ತರದ ಬದಲಾವಣೆ ಕಂಡಿತು. 1550ರಲ್ಲಿ ದಲ್ಪತ್ ಷಾ ಯುದ್ಧದಲ್ಲಿ ಮರಣಹೊಂದಿದರು. ಉತ್ತರಾಧಿಕಾರಪಟ್ಟವನ್ನು ವಹಿಸಿಕೊಳ್ಳಲು ಮಗ ವೀರ ನಾರಾಯಣ ಇನ್ನೂ ಚಿಕ್ಕವನಾದ ಕಾರಣಕ್ಕಾಗಿ ರಾಣಿ ದುರ್ಗಾವತಿಯು ರಾಜಪ್ರತಿನಿಧಿಯಾಗಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ತೆಗೆದುಕೊಳ್ಳಲು ಸಿಂಹಾಸಾನವನ್ನು ಏರಿದರು. ದಿವಾನ್‌ ಅಧರ್ ಕಾಯಸ್ಥ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ಒಗ್ಗಟ್ಟನ್ನು ಕಾಪಾಡಿದರು. ಮಾತ್ರವಲ್ಲದೆ ವ್ಯಾಪಾರವನ್ನು ಉತ್ತೇಜಿಸಿದರು. ರಾಣಿ ದುರ್ಗಾವತಿ ತನ್ನ ರಾಜಧಾನಿಯನ್ನು ಸಿಂಗಾರ್‌ ಗಢ ಕೋಟೆಯಿಂದ ಚೌರಗಢ ಕೋಟೆಗೆ ಸ್ಥಳಾಂತರಿಸಿದರು. ನಂತರ ಗೊಂಡ್ವಾನ ಸಾಮ್ರಾಜ್ಯವು ಕಮಾಂಡರ್ ಅಸಫ್ ಖಾನ್ ನೇತೃತ್ವದ ಮೊಘಲ್ ಪಡೆಗಳ ಆಕ್ರಮಣವನ್ನು ಎದುರಿಸಿತು. ರಾಣಿ ದುರ್ಗಾವತಿಯು ಮೊಘಲ್ ಸೇನೆ  ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಯುದ್ಧದಲ್ಲಿ ಧೈರ್ಯವನ್ನು ಪ್ರದರ್ಶಿಸಿದರು. ಹೀಗೆ ರಾಜಕೀಯ ಬದಲಾವಣೆಯನ್ನು ತಂದರು.


ಮೊಘಲ್ ಆಕ್ರಮಣ
1562ರಲ್ಲಿ ಅಕ್ಬರ್‌ ಮಾಲ್ವಾ ದೊರೆಯಾದ ಬಾಜ್‌ ಬಹದ್ಧೂರ್‌ ಅನ್ನು ಸೋಲಿಸಿ ಮಾಲ್ವಾ ಪ್ರದೇಶವನ್ನು ವಶಕ್ಕೆ ಪಡೆದುಕೊಂಡನು. ನಂತರ ಅದನ್ನ ವಶಕ್ಕೆ ಪಡೆದು ಮೊಘಲ್‌ ಪ್ರಭುತ್ವವನ್ನಾಗಿ ಮಾಡಿದನು. ಇದರ ಪರಿಣಾಮವಾಗಿ ರಾಣಿ ದುರ್ಗಾವತಿಯ ರಾಜ್ಯ, ಮೊಘಲ್‌ ಸಾಮ್ರಾಜ್ಯದ ಗಡಿಯಾಯಿತು. ರಾಣಿಯ ಸಮಕಾಲೀನ ಮೊಘಲ್‌ ಜನರಲ್‌ ಖ್ವಾಜಾ ಅಬ್ದುಲ್‌ ಮಜಿದ್‌ ಅಸಫ್‌ ಖಾನ್‌ ರೇವಾಹ್‌ ದ ಪ್ರಸಿದ್ಧ ರಾಜನಾದ ರಾಮಚಂದ್ರ ಸಿಂಗ್‌ ಅವರನ್ನು ಸೋಲಿಸಿದನು. ಏಕೆಂದರೆ ಗೊಂಡ್ವಾನ ಸಂಪತ್ತನ್ನು ಪಡೆದುಕೊಳ್ಳಬೇಕೆಂಬ ಹಂಬಲ ಅಸಫ್‌ ಖಾನ್‌ ಗೆ ಇತ್ತು. ಹೀಗಾಗಿ ಅವರು ಮೊಘಲ್‌ ದೊರೆಯಾದ ಅಕ್ಬರ್‌ ನಿಂದ ಅಪ್ಪಣೆ ಪಡೆದ ನಂತರ ರಾಣಿಯ ಸಾಮ್ರಾಜ್ಯವನ್ನು ಆಕ್ರಮಣ ಮಾಡಿದನು.


1564ರಲ್ಲಿ ದಾಮೋಹ್ ಯುದ್ಧದ ಸಮಯದಲ್ಲಿ ರಾಣಿ ದುರ್ಗಾವತಿ ಮಹಾನ್ ಶೌರ್ಯ ಮತ್ತು ಬುದ್ಧಿವಂತ ಮಿಲಿಟರಿ ತಂತ್ರಗಳನ್ನು ಪ್ರದರ್ಶಿಸಿದಳು. ಈ ಸಂದರ್ಭದಲ್ಲಿ ರೇವಾಹ್ ರಾಜ, ಮಹಾರಾಜ ರಾಮಚಂದ್ರ ಸಿಂಗ್ ಅವರನ್ನು ಸೋಲಿಸಿದ ನಂತರ ಅಸಫ್ ಖಾನ್ ಗರ್ಹಾ-ಕಟಾಂಗದ ಮೇಲೆ ಮತ್ತೆ ದಾಳಿ ಮಾಡಿದನು. ತನ್ನ ರಾಜ್ಯವನ್ನು ರಕ್ಷಿಸಲು ರಾಣಿ ದುರ್ಗಾವತಿಯು ಎತ್ತರದ ಪರ್ವತದ ಎರಡೂ ಬದಿಗಳಲ್ಲಿ ಗೌರ್ ಮತ್ತು ನರ್ಮದಾ ನದಿಗಳಿಂದ ಸುತ್ತುವರಿದ ನರರೈ ಕಣಿವೆಯಲ್ಲಿ ಬೀಡುಬಿಟ್ಟಳು. ನಂತರ ಶತ್ರುಗಳ ವಿರುದ್ಧ ಧೈರ್ಯದಿಂದ ಹೋರಾಡಿದಳು. ಜೊತೆಗೆ ಆಕೆಯ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗಿಯಾದನು. ದುರದೃಷ್ಟವಶಾತ್, ವೀರ ನಾರಾಯಣನು ಯುದ್ಧದ ಸಮಯದಲ್ಲಿ ಗಾಯಗೊಂಡನು. ರಾಣಿ ದರ್ಗಾವತಿ ಛಲ ಬಿಡದೆ ಹೋರಾಡಿದಳು. ಆದರೆ ಎದುರಾಳಿಗಳು ಬಿಟ್ಟ ಬಾಣದಿಂದ ರಾಣಿ ದುರ್ಗಾವತಿ ಗಾಯಗೊಂಡು ಸೋಲುವ ಆತಂಕ ಕಾಡಿತು.

ಜೂನ್‌ 24, 1564 ರಂದು ತನ್ನ ಕಠಾರಿ ತೆಗೆದುಕೊಂಡು ಆತ್ಮಾರ್ಪಣೆ ಮಾಡಿದರು‌.

Leave a Reply

Your email address will not be published.

This site uses Akismet to reduce spam. Learn how your comment data is processed.