ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯ ಅದ್ಭುತವಾಗಿದ್ದು, ಸಮಿತಿಯ ಕಾರ್ಯಚಟುವಟಿಕೆಗಳ ಮಾಹಿತಿ ಹೆಚ್ಚು ಜನರಿಗೆ ತಲುಪಬೇಕು ಎಂದು ನಿವೃತ್ತ ಏರ್ ಮಾರ್ಷಲ್ ಸೂರ್ಯಕಾಂತ್ ಚಾಪೇಕರ್ ಹೇಳಿದರು.

ನಾಗಪುರದ ಅಹಲ್ಯಾ ಮಂದಿರದಲ್ಲಿ ಹತ್ತನೇ ವರ್ಷದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮವನ್ನು ಮಹಿಳೆಯರು ಮಾತ್ರ ಕಲ್ಪಿಸಿಕೊಳ್ಳಬಲ್ಲರು ಹಾಗೂ ಇಂತಹ ಕಾರ್ಯಕ್ರಮದಿಂದ ಸೈನಿಕರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಭಾರತೀಯ ಮಹಿಳೆಯರು ದೇಶದ ಸೇನೆಯ ಸ್ಥೈರ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಮುಖ ಸಂಚಾಲಿಕಾ ವಂದನೀಯ ವಿ. ಶಾಂತಾಕುಮಾರಿ ಅವರು ಉಪಸ್ಥಿತರಿದ್ದರು.