ಬೆಂಗಳೂರು ಸೆಪ್ಟೆಂಬರ್ 21 : ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಡಾ|| ಎಸ್.ಆರ್. ರಾಮಸ್ವಾಮಿ ಅವರ “ಕವಳಿಗೆ”, ಪಾಲ್ ಬ್ರಂಟನ್ ಅವರ ಇಂಗ್ಲಿಷ್ ಕೃತಿಯ ಅನುವಾದ (ಕನ್ನಡಾನುವಾದ- ಗಿರಿಜಾ ಶಾಸ್ತ್ರಿ ) “ನಿಗೂಢ ಭಾರತದಲ್ಲೊಂದು ಹುಡುಕಾಟ” ಹಾಗೂ ಶಕುಂತಲಾ ಎನ್. ರಾವ್ ಕನ್ನಡಕ್ಕೆ ರೂಪಾಂತರಿಸಿರುವ “ಸಾನೇ ಗುರೂಜೀ ಹೇಳಿ ಕಥೆಗಳು” ಸೇರಿದಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ ಇಂದು (ಸೆಪ್ಟೆಂಬರ್ 21ರಂದು) ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನ ಕೇಶವ ಶಿಲ್ಪ ಸಭಾಂಗಣದಲ್ಲಿ ನಡೆಯಿತು.
ಪುಸ್ತಕಗಳನ್ನು ಶತಾವಧಾನಿ ಆರ್. ಗಣೇಶ್ ಅವರು ಲೋಕಾರ್ಪಣೆಗೊಳಿಸಿದರು. ಎನ್.ಎಂ.ಕೆ.ಆರ್.ವಿ. ಕಾಲೇಜಿನ ಸಂಸ್ಕೃತ ವಿಭಾಗಾಧ್ಯಕ್ಷ ಡಾ|| ಎಸ್ ರಂಗನಾಥ್ ಅವರು ಪುಸ್ತಕಗಳ ಪರಿಚಯ ನಡೆಸಿಕೊಟ್ಟರು.