ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು ಕ್ಷಾತ್ರಗಳು ಮೇಳೈಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ. ಎನ್ ವೆಂಕಟಾಚಲಯ್ಯ ಅವರು ಹೇಳಿದ್ದಾರೆ.

14352169_1216477681709116_6778186897656802470_o

ಅವರು ಬೆಂಗಳೂರಿನ ಆರ್.ವಿ. ಟೀಚರ‍್ಸ್ ಕಾಲೇಜು ಸಭಾಂಗಣದಲ್ಲಿ ಸೆಪ್ಟೆಂಬರ್ ೧೮ರಂದು ನಡೆದ ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳ ಲೋಕಾರ್ಪಣ ಸಮಾರಂಭದಲ್ಲಿ ಅಧ್ಯಕ್ಷತೆ ಹಾಗೂ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಲೋಕಾರ್ಪಣೆಗೊಂಡ ಪುಸ್ತಕಗಳು ಎಸ್.ಆರ್. ರಾಮಸ್ವಾಮಿ ಅವರ ನವೋತ್ಥಾನದ ಅಧ್ವರ್ಯುಗಳು ಮತ್ತು ರಾಯ್ ಮ್ಯಾಕ್ಸ್‌ಹ್ಯಾಮ್ ಅವರ ಆಂಗ್ಲಮೂಲದ ಕೃತಿಯ ಕನ್ನಡ ಸಂಗ್ರಹಾನುವಾದ (ಎಸ್.ಆರ್. ನರೇಂದ್ರಕುಮಾರ್) ’ಭಾರತದಲ್ಲೊಂದುಸುಂಕದ ಬೇಲಿ’.

ನ್ಯಾ| ವೆಂಕಟಾಚಲಯ್ಯ ಅವರು ಮುಂದುವರಿದು, ಒಂದು ಕಾನೂನಿನ ಹೆಸರೇ ’ಕೇಂದ್ರ ಅಬಕಾರಿ ಮತ್ತು ಉಪ್ಪಿನ ತೆರಿಗೆ’ (ಅeಟಿಣಡಿಚಿಟ exಛಿise ಚಿಟಿಜ sಚಿಟಣ ಣಚಿx) ಎಂಬುದಾಗಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಉಪ್ಪಿನ ತೆರಿಗೆ ಅಷ್ಟೊಂದುಮುಖ್ಯವಾಗಿತ್ತು. ಉಪ್ಪಿನ ತೆರಿಗೆ ವಸೂಲಿಗಾಗಿ ಬ್ರಿಟಿಷರು ಭಾರತದಲ್ಲಿ ಅಷ್ಟೊಂದು ದೊಡ್ಡ ಬೇಲಿ ನಿರ್ಮಿಸಿದ್ದರೆನ್ನುವುದು ಇಂದು ಬಿಡುಗಡೆಗೊಂಡ ಈ ಪುಸ್ತಕಗಳಿಂದ ತಿಳಿಯಿತು ಎಂದರು. ಬಿಹಾರದ ಚಂಪಾರಣ್‌ನಲ್ಲಿ ಬೆಳೆದ ನೀಲಿಯಲ್ಲಿಖರೀದಿಸುವಲ್ಲೂ ಬ್ರಿಟಿಷರು ಸ್ಥಳೀಯ ಜನರನ್ನು ಅದೇ ರೀತಿ ಶೋಷಿಸುತ್ತಿದ್ದರು. ಮಾರುವುದಕ್ಕೆ ನಡುರಾತ್ರಿಯ ಹೊತ್ತಿನಲ್ಲಿ ಹೆಣ್ಣುಮಕ್ಕಳು ಬರಬೇಕೆಂದು ಕರೆಸಿಕೊಂಡು ಅವರೋದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಆ ಶೋಷಣೆ ಯಾವ ರೀತಿಇತ್ತೆಂದರೆ ಅದನ್ನು ಆಧರಿಸಿದ ’ನೀಲದರ್ಪಣ್’ ನಾಟಕವನ್ನು ನೋಡುತ್ತಿದ್ದ ಈಶ್ವರಚಂದ್ರ ವಿದ್ಯಾಸಾಗರರು ವೇದಿಕೆಗೆ ಹೋಗಿ ಬ್ರಿಟಿಷ್ ಪಾತ್ರಧಾರಿಗೆ ಚಪ್ಪಲಿಯಿಂದ ಹೊಡೆದಿದ್ದರು ಎಂದವರು ಹೇಳಿದರು.

ಪ್ರಸ್ತುತ ಸನ್ನಿವೇಶದಲ್ಲಿ ’ನವೋತ್ಥಾನದ ಅಧ್ವರ್ಯುಗಳು’ ಪುಸ್ತಕವು ನೀಡಬಹುದಾದ ಸ್ಫೂರ್ತಿಯ ಅಗತ್ಯ ಇನ್ನೂ ಹೆಚ್ಚಿದೆ. ತಂತ್ರಜ್ಞಾನವು ಜಗತ್ತನ್ನು ಒಡೆಯುತ್ತಿದೆ. ವಿಜ್ಞಾನ-ತಂತ್ರಜ್ಞಾನಗಳು ತರುತ್ತಿರುವ ವ್ಯಾಪಕ ಬದಲಾವಣೆಯೇ ಅದಕ್ಕೆ ಕಾರಣ.ಮನುಷ್ಯನ ಜೀವಕೋಶದಲ್ಲೆ ಬದಲಾವಣೆಯನ್ನು ತರಾಗುತ್ತಿದ್ದು, ಅದರಂತೆ ಮಾಡಿದರೆ ಮನುಷ್ಯ ೪೦೦ ವರ್ಷ ಬದುಕಬಹುದು. ಆದರೆ ಅದರಿಂದ ಏನೇನು ಸಮಸ್ಯೆಗಳು ಹುಟ್ಟಬಹುದು ಎಂಬ ಸವಾಲು ನಮ್ಮ ಮುಂದಿದೆ. ಐಸಿಸ್‌ನಂತಹ ಕಾರ್ಯದಸಮಸ್ಯೆಗಳನ್ನು ಮತಧರ್ಮಗಳು ಎದುರಿಸಲಾರವು. ಅದಕ್ಕೆ ಕ್ಷಾತ್ರಬೇಕು ಎಂದು ನ್ಯಾ| ವೆಂಕಟಾಚಲಯ್ಯ ತಿಳಿಸಿದರು.

rashtrotthana-sahitya_book-releasing-programme-1 rashtrotthana-sahitya_book-releasing-programme-2

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಶತಾವಧಾನಿ ಡಾ|| ಆರ್. ಗಣೇಶ್ ಅವರು ಮಾತನಾಡಿ, ಹಿಂದೆ ನಮ್ಮಲ್ಲಿ ಸಾಂಸ್ಕೃತಿಕ ಚೌಕಟ್ಟು ಒಂದೇ ಇರುತ್ತಿತ್ತು. ಮಾತು ಮತ್ತು ಕೃತಿಯಲ್ಲಿ ಬಿರುಕು ಇಲ್ಲದವರದ್ದೇ ವೈಜ್ಞಾನಿಕ ಮನಸ್ಸು ಎಂದು ತಿಳಿಯಲಾಗಿತ್ತು.ಈಗ ಸಂಶೋಧನೆ ಮತ್ತು ವೈಜ್ಞಾನಿಕ ಮನಸ್ಸುಗಳು ಪ್ರತ್ಯೇಕವಾಗಿವೆ. ಮಾತು-ಕೃತಿಗಳ ನಡುವೆ ಬಿರುಕು ಇರುವವರೇ ತತ್ತ್ವಜ್ಞಾನಿ (ಫಿಲಾಸಫರ್) ಎನಿಸುತ್ತಿದ್ದಾರೆ. ಅದೇ ನಮ್ಮ ಬುದ್ಧಜೀವಿಗಳ ಸ್ಥಿತಿಯಾಗಿದೆ. ಹಿಂದೆ ಆಚಾರಕ್ಕೆ ತುಂಬ ಬೆಲೆ ಇತ್ತು.ಇಂದಿನ ಬುದ್ಧಿಜೀವಿಗಳ ಬಗ್ಗೆ ಸಮಾಜದಲ್ಲಿ ಸಹಾನುಭೂತಿ ಇಲ್ಲ. ಈ ಪುಸ್ತಕದಲ್ಲಿರುವ ಅಧ್ವರ್ಯುಗಳು ಆ ರೀತಿ ಬದುಕಿದರು ಎಂದವರು ವಿವರಿಸಿದರು.

ವಿವೇಕಾನಂದರ ಎದುರಾಗಿ ರವೀಂದ್ರನಾಥ ಠಾಕೂರರನ್ನು ನಿಲ್ಲಿಸುವ ಸಲುವಾಗಿ ಒಬ್ಬರು ರಾಷ್ಟ್ರೀಯತೆಗೆ ಪರವಾಗಿದ್ದರೆ ಇನ್ನೊಬ್ಬರು (ಠಾಕೂರ್) ವೈಶ್ವೀಕತೆಗೆ ಪರವಾಗಿದ್ದರು ಎನ್ನುವ ವಾದವನ್ನು ಇಂದು ಮುಂದಿಡಲಾಗುತ್ತಿದೆ. ಆದರೆ ನಿಜವೆಂದರೆಠಾಕೂರರ ವೈಶ್ವಿಕತೆ ರಾಷ್ಟ್ರೀಯತೆಯಲ್ಲಿ ಬೇರುಬಿಟ್ಟಂತದ್ದು. ರಾಷ್ಟ್ರೀಯತೆ ಆಕ್ರಮಣಕಾರಿಯಾದರೆ ವೈಶ್ವಿಕತೆ ಹಾಗಲ್ಲವೆನ್ನುವ ಬುದ್ಧಿಜೀವಿಗಳು ಕ್ರೈಸ್ತ, ಇಸ್ಲಾಂಗಳು ವೈಶ್ವಿಕ; ಹಿಂದೂ ಧರ್ಮ ರಾಷ್ಟ್ರೀಯವೆಂದು ಹೇಳುತ್ತಾರೆ. ವಾಸ್ತವವಾಗಿ ಕ್ರೈಸ್ತ,ಇಸ್ಲಾಂಗಳು ಇತರರ ಮೇಲೆ ದಾಳಿ ನಡೆಸಿದರೆ ನಮ್ಮ ರಾಷ್ಟ್ರೀಯತೆ ಯಾರ ಮೇಲೂ ದಾಳಿ ಮಾಡಲಿಲ್ಲ ಎಂದು ಡಾ|| ಗಣೇಶ್ ಹೇಳಿದರು.

ಧರ್ಮ, ಅರ್ಥಗಳು ಕಾಮವನ್ನು ಪೋಷಿಸಬೇಕು. ಕಾಮವೆಂದರೆ ನ್ಯಾಯಸಮ್ಮತವಾದ ಸುಖ. ಅಂತಹ ಸುಖಪಟ್ಟವನು ಇತರರ ಸುಖಕ್ಕೆ ತೊಂದರೆ ಕೊಡುವುದಿಲ್ಲ. ಸವಿಷಯವಾದ ಸುಖವು ಕಾಮವಾದರೆ ನಿರ್ಮಿಷಯ ಸುಖವೇ ಮೋಕ್ಷ. ಕಾಮವುಮೋಕ್ಷದ ಪೂರ್ವಸಿದ್ದತೆ. ಸಂತೋಷದ ಉತ್ಕೃಷ್ಟರೂಪವು ಕಲೆ-ಸಾಹಿತ್ಯಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ ಎಂದ ಡಾ|| ಗಣೇಶ್, ಗಾಂಧೀಜಿಯವರ ರಾಷ್ಟ್ರೀಯತೆ ಶುಷ್ಕವೆನಿಸಿ ಠಾಕೂರರು ತಮ್ಮ  ಸೌಂಧರ್ಯಪ್ರಜ್ಞೆಗೆ ಅನುಗುಣವಾಗಿ ವೈಶ್ವಿಕತೆಯತ್ತಚಲಿಸಿರಬಹುದೆ ಎನ್ನುವ ಪ್ರಶ್ನೆಯನ್ನೆತ್ತಿದರು. ಪುಸ್ತಕದ ಎಲ್ಲ ಅಧ್ವರ್ಯುಗಳಿಗೂ ಭಾರತವೇ ಸ್ಫೂರ್ತಿ. ನಿರಕ್ಷರಿಯಂತಿದ್ದ ರಾಮಕೃಷ್ಣ ಪರಮಹಂಸರು ಜಟಿಲ ವಿಷಯಗಳನ್ನೂ ಕೂಡಾ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಬಲ್ಲವರಾಗಿದ್ದರುಎಂದ ಡಾ| ಗಣೇಶ್ ಅವರು, ಗಾಂಧಿಜೀಯವರ ಕೆಲಸ ನೈತಿಕತೆಯಲ್ಲೇ ನಿಂತು ಆಧ್ಯಾತ್ಮಿಕವಾಗಿ ಮಾಗಲಿಲ್ಲ ಎಂದು ಅಭಿಪ್ರಾಯಪಟ್ಟರು.

ಎರಡೂ ಪುಸ್ತಕಗಳನ್ನು ಪರಿಚಯಿಸಿದ ಪ್ರಾಧ್ಯಾಪಕ, ವಿಮರ್ಶಕ ಡಾ|| ಅಜಕ್ಕಳ ಗಿರೀಶ್ ಭಟ್ಟ ಅವರು ಸ್ವಾತಂತ್ರ್ಯ ಬಂದು ೮ ದಶಕಗಳಾದರೂ ದಾಸ್ಯದ ಮಾನಸಿಕತೆಯಿಂದ ನಾವಿನ್ನೂ ಹೊರಬಂದಿಲ್ಲ. ಹಲವರಲ್ಲಿ ಪಾಶ್ಚಾತ್ಯ ವಿಚಾರಗಳ ಮೂಲಕವೇಬಿಡುಗಡೆ ಹೊಂದಬೇಕೆಂಬ ಭಾವನೆಯಿದೆ. ಆ ಹಿನ್ನೆಲೆಯಲ್ಲಿ ಪ್ರಸ್ತುತ ಪುಸ್ತಕಗಳು ಸಕಾಲಿಕ ಎಂದರು. ಭಾರತದ ಬಗೆಗಿನ ಅಧ್ಯಯನದಲ್ಲಿ ಆಸಕ್ತಿ ಹೊಂದಿದ ರಾಯ್ ಮ್ಯಾಕ್ಸ್ ಹ್ಯಾಂ ಬಂಗಾಳ ಪ್ರಾಂತದಿಂದ ಉಪ್ಪಿನ ಸುಂಕವನ್ನು ಕಟ್ಟುನಿಟ್ಟಾಗಿ ವಸೂಲುಮಾಡುವ ಬಗ್ಗೆ ಪಶ್ಚಿಮದಿಂದ ಪೂರ್ವದ ತನಕ ನಿರ್ಮಿಸಿದ ಸುಮಾರು ೨೫೦೦ ಮೈಲುದ್ದದ ಬೇಲಿಯ ಬಗ್ಗೆ ಅಧ್ಯಯನ ಮಾಡಿ ಬರೆದ ಪುಸ್ತಕ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ ಎಂದರು. ಆ ಬೇಲಿಗೆ ೧೨,೦೦೦ ಜನ ಕಾವಲುಗಾರರಿದ್ದರು.೧೮೭೯ರಲ್ಲಿ ಎಲ್ಲ ಕಡೆ ಸಮಾನ ತೆರಿಗೆ ಬಂದಾಗ ಆ ಬೇಲಿಯ ಮಹತ್ವ ಕಡಿಮೆಯಾಯಿತು. ಬಂಗಾಳದ ಭಾಗದಲ್ಲಿ ತೆರಿಗೆಯಿಂದಾಗಿ ಜನ ಉಪ್ಪಿಗೆ ವರ್ಷದ ಎರಡು ತಿಂಗಳ ಆದಾಯವನ್ನು ವ್ಯಯಿಸಬೇಕಾಗುತ್ತಿತ್ತು. ಬೇಲಿ ಮಾತ್ರವಲ್ಲ ಇಡೀ ಭಾರತದಅಂದಿನ ಆರ್ಥಿಕ ಸ್ಥಿತಿಯನ್ನು ಈ ಪುಸ್ತಕ ಸೂಚಿಸುತ್ತದೆ ಎಂದು ಡಾ| ಅಜಕ್ಕಳ ತಿಳಿಸಿದರು.

ದೇಶದ ಅಸ್ಮಿತೆಯ ಅರಿವಿನ ಅಗತ್ಯವಿದ್ದಾಗ ಅದಕ್ಕಾಗಿ ಶ್ರಮಿಸಿದ ಎಂಟು ಮಂದಿಯ ಬಗ್ಗೆ ರಾಮಸ್ವಾಮಿಯವರ ನವೋತ್ಥಾನದ ಅಧ್ವರ್ಯುಗಳು ಪುಸ್ತಕದಲ್ಲಿ ವಿವರಗಳಿವೆ; (ರಾಜಾರಾಂ ಮೋಹನ ರಾಯ್ ರಿಂದ ಶ್ರೀ ಅರವಿಂದರ ವರೆಗೆ) ಸಮಾನಅಂಶಗಳನ್ನು ಗುರುತಿಸುತ್ತಾ ಈ ನಾಯಕರ ಉದ್ದೇಶ, ಕಾರ್ಯಶೈಲಿ ಮತ್ತು ಪರಿಣಾಮಗಳಲ್ಲಿ ಏಕರೂಪತೆಯಿದೆ. ಇವರಲ್ಲಿ ಐವರು ಬಂಗಾಳದವರು. ಹೆಚ್ಚಿನವರು ಇಂಗ್ಲಿಷ್ ಜ್ಞಾನದ ಮೂಲಕ ಬ್ರಿಟಿಷರನ್ನು ಎದುರಿಸಿದರು. ಎಲ್ಲರೂ ಒಂದೇ ಭಾವ,ಪ್ರಾಯೋಗಿಕ ವೇದಾಂತ ಅವರದಾಗಿತ್ತು. ಇತರರ ಬಗೆಗೆ ಅನುಕಂಪ (mercy) ಅಲ್ಲ; ನಾವೂ ಅವರಂತೆ ಎಂಬ ಭಾವ ಮುಂತಾಗಿ ಅವರು ವಿವರಿಸಿದರು. ಆದರೆ ಇಂದು ಕಣ್ಣೆದುರೇ ಇತಿಹಾಸವನ್ನು ತಿರುಚಲಾಗುತ್ತಿದೆ. ರಾಷ್ಟ್ರೀಯತೆಯ ಟೀಕೆ,ದ್ವಿರಾಷ್ಟ್ರ ಸಿದ್ಧಾಂತವನ್ನು ಸಾವರ್ಕರ್ ಮಂಡಿಸಿದರು ಮುಂತಾಗಿ ತಪ್ಪುವಾದಗಳನ್ನು ತರುತ್ತಿದ್ದಾರೆ ಎಂದು ಡಾ|| ಗಿರೀಶ್ ಭಟ್ ಆಕ್ಷೇಪಿಸಿ ಪ್ರಸ್ತುತ ಪುಸ್ತಕಗಳು ಬೌದ್ಧಿಕ ಕ್ಷಾತ್ರಕ್ಕೆ ಪ್ರೇರಣೆ ನೀಡುವಂತಿವೆ ಎಂದರು.

ಪುಸ್ತಕದ ಲೇಖಕ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ ಅವರು ಮಾತನಾಡಿ ಎನ್‌ಸಿಆರ್‌ಟಿ ತರುವ ಇತಿಹಾಸ ಪಾಠ್ಯಪುಸ್ತಕಗಳಲ್ಲಿ ಬಹಳಷ್ಟು ದೋಷಗಳಿಂದ ತುಂಬಿದೆ. ಈ ಪುಸ್ತಕಗಳಿಂದ ನಮ್ಮ ಜನರಲ್ಲಿತಿಳುವಳಿಕೆ ಕಡಮೆಯಾಗುತ್ತಿದೆ ಎಂದರು.

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಸ್ವಾಗತಿಸಿದರು. ಲೇಖಕ ಎಸ್.ಎಸ್. ನರೇಂದ್ರಕುಮಾರ್ ಉಪಸ್ಥಿತರಿದ್ದರು. ಜಿ.ಆರ್. ಸಂತೋಷ್ ನಿರೂಪಿಸಿ ವಂದಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.