
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ವಿದ್ಯಾಪೀಠ ನಗರದ ವತಿಯಿಂದ ರಥಸಪ್ತಮಿ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ ಅರುಣ ಪ್ರಶ್ನಃ ಪಾರಾಯಣ ಮತ್ತು ಸಾಮೂಹಿಕ ಸೂರ್ಯ ನಮಸ್ಕಾರವನ್ನು ಚಿಣ್ಣರ ಲೋಕ( ದೇವಗಿರಿ ಶಾಖಾ ಸಂಘಸ್ಥಾನ) ದಲ್ಲಿ ಏರ್ಪಡಿಸಲಾಗಿತ್ತು,



ಬೆಳಿಗ್ಗೆ 5:30ಕ್ಕೆ ಗಣಪತಿ ಪ್ರಾರ್ಥನೆ, ಅರುಣ ಪ್ರಶ್ನ ಪಾರಾಯಣ ಹಾಗೂ ಯೋಗ ವ್ಯಾಯಾಮದೊಂದಿಗೆ ಪ್ರಾರಂಭವಾಗಿ ನಂತರ ತರುಣರು,ಮಾತೆಯರು, ಬಾಲಕರು ಸೇರಿ ಸುಮಾರು 150 ಸ್ವಯಂಸೇವಕರು ತಲಾ 216 ಸೂರ್ಯ ನಮಸ್ಕಾರವನ್ನು (ವಯೋ ಅನುಸಾರ ಕೆಲವರು 108 ಸೂರ್ಯ ನಮಸ್ಕಾರಗಳನ್ನು) ಮಾಡಿ ನಂತರ ಶವಾಸನದೊಂದಿಗೆ ಯೋಗಾಸನವನ್ನು ಮುಗಿಸಲಾಯಿತು, ತದನಂತರ ನಗರದ ಮಾನ್ಯ ಸಂಘ ಚಾಲಕರಾದ ಡಾ||ನಾಗರಾಜ್ ಶೆಣೈ ಅವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಡಾ||ಓಂಕಾರ ರವರು (ಯೋಗ ಗುರುಗಳು ಹಾಗೂ ಸಮಾಜಸೇವಕರು) ರಥಸಪ್ತಮಿ ಹಾಗೂ ಯೋಗಾಸನದ ಮಹತ್ವವನ್ನು ತಿಳಿಸಿಕೊಟ್ಟರು ನಂತರ ಸಂಘದ ಪ್ರಾರ್ಥನೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು….
ಎಲ್ಲಾ ಸ್ವಯಂಸೇವಕರು ಮಾತೆಯರು ಉತ್ಸಾಹದಿಂದ ಸೂರ್ಯ ನಮಸ್ಕಾರದಲ್ಲಿ ಸಂಪೂರ್ಣ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು