ಗಣತಂತ್ರ ದಿನವಾದ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ಭಾಗವತ್‌ರವರು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದು,ಇಂದು ಅಗರ್‌ತಲಾದ ತ್ರಿಪುರಾದ ಸೇವಾಧಾಮದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು “ಭಾರತವು ಸಂಪೂರ್ಣ ಸೃಷ್ಟಿಯನ್ನೂ ಒಳಗೊಂಡಂತೆ ಎಲ್ಲರನ್ನೂ ಒಂದು ಆತ್ಮೀಯ ಭಾವದಿಂದ ಕಾಣುತ್ತಾ, ತನ್ನ ಸ್ವಾರ್ಥವನ್ನು ಬದಿಗಿರಿಸಿ,ಎಲ್ಲರ ಹಿತವನ್ನು ಬಯಸುತ್ತಾ, ಜೀವನವನ್ನು ನಡೆಸುವ ಮೂಲಕ ವಿಶ್ವದ ಮಾರ್ಗದರ್ಶನ ಮಾಡಲಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನ ಗಣರಾಜ್ಯ ದಿನದಂದು ನಮ್ಮ ಆಚರಣೆಗಳು ಅದೆಷ್ಟು ಧಾರ್ಮಿಕವಾಗಬೇಕೆಂದರೆ ಅದರ ಆಧಾರದ ಮೇಲೆ ಪ್ರಜಾಪ್ರಭುತ್ವದ ಹಾದಿಗೆ ದಾರಿತೋರುವ ನಿಟ್ಟಿನಲ್ಲಿರಬೇಕು ಎಂಬುದು ನಮ್ಮ ಸಂಕಲ್ಪವಾಗಬೇಕಿದೆ.
ಸಂಪೂರ್ಣ ಭಾರತವನ್ನು ಹೀಗೇ ಗಣರಾಜ್ಯವನ್ನಾಗಿ ಮಾಡುವ ನಮ್ಮ ಕನಸು ನಮ್ಮ ಈ ಆಚರಣೆಗಳಿಂದಲೇ ಸಾಕಾರಗೊಳ್ಳಲು ಸಾಧ್ಯವಿದೆ.ಆದುದರಿಂದಲೇ ಈ ಆಚರಣೆಗಳ ಸಂಕಲ್ಪವನ್ನು ತೊಡಲು ಈ ದಿನ ನಾವು ಮುಂದಾಗಬೇಕು.”ಎಂದಿದ್ದಾರೆ.