ಯುಗಾದಿ ಉತ್ಸವ ಸಮಾಜದ ಉತ್ಸವವೂ ಹೌದು. ಸಂಘದ ಉತ್ಸವವೂ ಹೌದು. ಸಂಘದ ಸಂಸ್ಥಾಪಕರಾದ ಪ.ಪೂ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ಜನ್ಮದಿನವೂ ಹೌದು.
ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಇಂದು ವಿಡಿಯೋ ಮೂಲಕ ತಮ್ಮ ಯುಗಾದಿ ಸಂದೇಶವನ್ನು ಹಂಚಿಕೊಳ್ಳುತ್ತಾ, ಕೊರೊನಾ ವೈಶ್ವಿಕ ಸಂಕಟದಲ್ಲಿ ಭಾರತವೂ ಸಂಕಷ್ಟವನ್ನು ಎದುರಿಸುತ್ತಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಲಾಕ್ ಡೌನ್ ಅನ್ನು ಸಂಪೂರ್ಣ ಬೆಂಬಲಿಸುತ್ತಾ, ಕರೊನಾ ವೈರಸ್ ನಿಂದ ಸೋಂಕಿತರಾಗದೆ ದೂರ ಉಳಿಯಲು ಸಾಮಾಜಿಕ ಅಂತರವೇ ಮದ್ದಾಗಿರುವುದರಿಂದ, ಮನೆಯಲ್ಲಿಯೇ ಇದ್ದುಕೊಂಡು ಸಂಘ ಕಾರ್ಯದಲ್ಲಿ, ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಯುಗಾದಿ ಉತ್ಸವವು ಸಂಘದ ಪಾರಿಭಾಷಿಕದಲ್ಲಿ ಸಂಕಲ್ಪ ದಿವಸ ಎಂದು ಕರೆಯಲ್ಪಡುತ್ತದೆ ಹಾಗೂ ನೆಲದ ಕಾನೂನನ್ನು ಪಾಲಿಸುತ್ತಾ, ಸ್ವಾರ್ಥವನ್ನು ದೂರವಿಟ್ಟು ಸಮಾಜದ ಹಿತಕ್ಕಾಗಿ ಭಾಗವಹಿಸುವ ಸಂಘದ ನಿತ್ಯ ಬೋಧನೆಯನ್ನು ಈಗ ಪಾಲಿಸುವ ಅಗತ್ಯತೆ ಇರುವುದರಿಂದ ಸ್ವಯಂಸೇವಕರು ಹೊಸ ರೀತಿಗಳನ್ನು ಅನುಸರಿಸುತ್ತಾ ಸಂಘಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು. ಅಂತೆಯೇ ದೇಶವನ್ನು ಕೊರೊನಾ ಮುಕ್ತವಾಗಿಸುವ ಸಂಕಲ್ಪ ತೋಡೋಣ ಎಂದರು.
ಸರಸಂಘಚಾಲಕರ ಭಾಷಣದ ಪೂರ್ಣ ವಿಡಿಯೋ ಈ ಲಿಂಕ್ ನಲ್ಲಿ ನೋಡಬಹುದಾಗಿದೆ.
1 thought on “ನೆಲದ ಕಾನೂನನ್ನು ಪಾಲಿಸುತ್ತಾ, ಸ್ವಾರ್ಥವನ್ನು ದೂರವಿಟ್ಟು ಸಮಾಜದ ಹಿತಕ್ಕಾಗಿ, ನಿತ್ಯದಂತೆ ಭಾಗವಹಿಸಿ ಕೊರೊನಾ ಮುಕ್ತವಾಗಿಸೋಣ : ಡಾ. ಮೋಹನ್ ಭಾಗವತ್”