ಮಥುರಾ, ಅ. 25: ಎರಡು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಪ್ರಾರಂಭವಾಗಿದೆ. ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಬೈಠಕ್‌ ನಲ್ಲಿ ಇತ್ತೀಚೆಗೆ ನಿಧನರಾದ ಜೈಪುರದ ರಾಘವಾಚಾರ್ಯ ಮಹಾರಾಜ್ , ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಶ್ರೀ ಬುದ್ಧದೇವ್ ಭಟ್ಟಾಚಾರ್ಯ, ಈನಾಡು ಮತ್ತು ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್, ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ, ಮಾಜಿ ವಿದೇಶಾಂಗ ಸಚಿವ ಕೆ.ನಟವರ್ ಸಿಂಗ್, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಶ್ರೀ ಸುಶೀಲ್ ಮೋದಿ, ಅಡ್ಮಿರಲ್ (ಸೆನಿ) ರಾಮದಾಸ್ ಮತ್ತು ಇತರ ಪ್ರಮುಖರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ 2024ರ ಮಾರ್ಚ್ ನಂತರ ಅಗಲಿದ ಪ್ರಮುಖರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಹಿರಿಯ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್, ಸಾಹಿತಿ ಕಮಲಾ ಹಂಪನಾ, ಹಿರಿಯ ನಟ-ನಿರ್ಮಾಪಕ ದ್ವಾರಕೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಬಿ. ಭಾನುಪ್ರಕಾಶ್, ಹಿರಿಯ ಪತ್ರಕರ್ತ ವಸಂತ ನಾಡಿಗೇರ್,  ಭರತನಾಟ್ಯ ಕಲಾವಿದೆ ಹಂಸಾ ಮೋಯ್ಲಿ, ಕಲಾವಿದೆ ಅಪರ್ಣಾ ವಸ್ತರೆ, ಹಿರಿಯ ರಾಜಕಾರಣಿ  ಕೆ‌ ಎಚ್ ಶ್ರೀನಿವಾಸ, ಇತಿಹಾಸತಜ್ಞ ಡಾ. ಎಚ್ ಎಸ್ ಗೋಪಾಲರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.


ಈ ಹಿಂದೆ ಮಾರ್ಚ್‌ ನಲ್ಲಿ ಅಖಿಲ ಭಾರತೀಯ ಬೈಠಕ್ ನಡೆದಿತ್ತು. ಸಭೆಯಲ್ಲಿ ನಿಯೋಜಿತ ವಾರ್ಷಿಕ ಯೋಜನೆಯ ಕುರಿತು ಹಾಗೂ ಸಂಘಕಾರ್ಯ ವಿಸ್ತಾರದ ಕುರಿತು ಮಾಹಿತಿ ನೀಡಲಾಗುವುದು.ಅಖಿಲ ಭಾರತ ಸಹ ಪ್ರಚಾರ ಪ್ರಮುಖ್ ನರೇಂದ್ರ ಕುಮಾರ್ ತಿಳಿಸಿದ್ದಾರೆ.

ಬೈಠಕ್ ನಲ್ಲಿ ವಿಜಯದಶಮಿಯ ಶುಭ ಸಂದರ್ಭದಲ್ಲಿ ಪೂಜ್ಯ ಸರಸಂಘಚಾಲಕರು ಮಂಡಿಸಿದ ಅಭಿಪ್ರಾಯಗಳು ಮತ್ತು ಅವರ ಭಾಷಣದಲ್ಲಿ ಉಲ್ಲೇಖಿಸಲಾದ ಪ್ರಮುಖ ವಿಷಯಗಳ ಅನುಸರಣೆ ಹಾಗೂ ದೇಶದ ಪ್ರಸ್ತುತ ವ್ಯವಹಾರಗಳ ಯೋಜನೆಗಳ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ. ಇದಲ್ಲದೆ ನಿಗದಿಪಡಿಸಿದ ವಾರ್ಷಿಕ ಯೋಜನೆಯ ಪರಿಶೀಲನೆ ಮತ್ತು ಸಂಘದ ಕೆಲಸದ ವಿಸ್ತರಣೆಯ ವಿವರಗಳನ್ನು ಸಹ ತೆಗೆದುಕೊಳ್ಳಲಾಗುವುದು.


ಸಂಘದ ಶತಮಾನೋತ್ಸವ ವರ್ಷದಲ್ಲಿ ಕೆಲಸದ ವಿಸ್ತರಣೆಯ ಯೋಜನೆ ಸೇರಿದಂತೆ ಇಲ್ಲಿಯವರೆಗೆ ಮಾಡಿದ ಕೆಲಸಗಳನ್ನು ಬೈಠಕ್‌ ನಲ್ಲಿ ಚರ್ಚಿಸಲಾಗುವುದು. ಸಮಾಜದಲ್ಲಿ ಪಂಚ ಪರಿವರ್ತನೆ ಅನುಷ್ಠಾನದ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.


ಸಂಘದ ಎಲ್ಲಾ 11 ಕ್ಷೇತ್ರಗಳ ಮತ್ತು 46 ಪ್ರಾಂತಗಳ ಸಂಘಚಾಲಕರು, ಸಹ ಸಂಘಚಾಲಕರು, ಕಾರ್ಯವಾಹರುಗಲು ಮತ್ತು ಪ್ರಚಾರಕರು ಸೇರಿದಂತೆ ಒಟ್ಟು 393 ಕಾರ್ಯಕರ್ತರು ಬೈಠಕ್‌ ನಲ್ಲಿ ಭಾಗವಹಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೇರಳ ಮತ್ತು ಈಶಾನ್ಯದ ಅರುಣಾಚಲ, ಮಣಿಪುರ, ತ್ರಿಪುರಾ ಇತ್ಯಾದಿಗಳ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆ. ಬೈಠಕ್‌ ನಲ್ಲಿ ಮುಂದಿನ ಮಾರ್ಚ್ 2025 ರವರೆಗೆ ವಿವರವಾದ ಯೋಜನೆಯನ್ನು ಸಹ ಚರ್ಚಿಸಲಾಗುವುದು ಎಂದರು.


ಬೈಠಕ್‌ ನಲ್ಲಿ ಸಹಸರಕಾರ್ಯವಾಹರುಗಳಾದ ಡಾ. ಕೃಷ್ಣ ಗೋಪಾಲ್ , ಮುಕುಂದ ಸಿ ಆರ್ , ಅರುಣ್ ಕುಮಾರ್, ರಾಮದತ್ ಚಕ್ರಧರ್ , ಅಲೋಕ್ ಕುಮಾರ್, ಅತುಲ್ ಲಿಮಯೆ ಮತ್ತು ಅಖಿಲ ಭಾರತೀಯ ಇತರ ಕಾರ್ಯಕರ್ತರು ಬೈಠಕ್‌ ನಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.