ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಖಿಲ ಭಾರತೀಯ ಸಮನ್ವಯ ಬೈಠಕ್ ಗೆ ಚಾಲನೆ ನೀಡಿದರು.
ಸಹಸರಕಾರ್ಯವಾಹರಾದ ಡಾ.ಕೃಷ್ಣಗೋಪಾಲ್, ಡಾ.ಮನಮೋಹನ್ ವೈದ್ಯ, ಅರುಣ್ ಕುಮಾರ್, ಮುಕುಂದ, ರಾಮದತ್ತ ಚಕ್ರಧರ್ ಬೈಠಕ್ ನಲ್ಲಿ ಉಪಸ್ಥಿತರಿದ್ದಾರೆ. ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಭಯ್ಯಾಜಿ ಜೋಶಿ, ಸುನಿಲ್ ಸೋನಿ, ವಿ.ಭಾಗಯ್ಯ, ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಕ್ಕ, ಪ್ರಮುಖ್ ಕಾರ್ಯವಾಹಿಕಾ ಅನ್ನದಾನಂ ಸೀತಕ್ಕ, ಮಹಿಳಾ ಸಮನ್ವಯದಿಂದ ಚಂದಾತಾಯಿ, ಸ್ತ್ರೀ ಶಕ್ತಿಯಿಂದ ಶೈಲಜಾ, ರಾಷ್ಟ್ರೀಯ ಸೇವಾ ಭಾರತಿಯ ರೇಣು ಪಾಠಕ್, ವನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷ ರಾಮಚಂದ್ರ ಖರಾಡಿ, ವಿಶ್ವ ಹಿಂದೂ ಪರಿಷತ್ ನ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ರಾಜ ಶರಣ ಶಾಹಿ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಭಾರತೀಯ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ದಿನೇಶ್ ಕುಲಕರ್ಣಿ, ವಿದ್ಯಾಭಾರತಿ ಅಧ್ಯಕ್ಷ ರಾಮಕೃಷ್ಣ ರಾವ್, ಪೂರ್ವ ಸೈನಿಕ ಸೇವಾ ಪರಿಷದ್ ನ ಅಧ್ಯಕ್ಷ ಲೆಫ್ಟಿನೆಂಟ್ ಜೆನರಲ್ (ನಿವೃತ್ತ) ವಿಷ್ಣುಕಾಂತ ಚತುರ್ವೇದಿ, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಹಿರಣ್ಮಯ್ ಪಾಂಡ್ಯ, ಸಂಸ್ಕೃತ ಭಾರತಿಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಮತ್ತಿತರರು ಬೈಠಕ್ ನಲ್ಲಿ ಉಪಸ್ಥಿತರಿದ್ದಾರೆ.
ಮೂರು ದಿನಗಳ ಸಮನ್ವಯ ಬೈಠಕ್ ನಲ್ಲಿ ಪ್ರಚಲಿತದಲ್ಲಿರುವ ರಾಷ್ಟ್ರೀಯ ಮತ್ತು ಸಾಮಾಜಿಕ ಸನ್ನಿವೇಷಗಳು, ಶಿಕ್ಷಣ, ಸೇವೆ, ಆರ್ಥಿಕತೆ ಮತ್ತು ರಾಷ್ಟ್ರೀಯ ಸುರಕ್ಷೆಯ ಕುರಿತು ಚರ್ಚಿಸಲಾಗುತ್ತದೆ. ಪರಿಸರ ಸ್ನೇಹಿ ಜೀವನಶೈಲಿ, ಜೀವನಮೌಲ್ಯಾಧಾರಿತ ಕುಟುಂಬ ವ್ಯವಸ್ಥೆ, ಸಾಮರಸ್ಯಕ್ಕಾಗಿ ಪ್ರಾಧಾನ್ಯತೆ, ಸ್ವದೇಶಿ ನಡವಳಿಕೆ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಕುರಿತಾಗಿ ಬೈಠಕ್ ನಲ್ಲಿ ಚರ್ಚಿಸಲಾಗುತ್ತದೆ. ಸಂಸ್ಥೆಗಳ ವಿಸ್ತರಣೆ ಮತ್ತು ವಿಶೇಷ ಪ್ರಯತ್ನಗಳ ಕುರಿತು ಪ್ರಸ್ತಾಪವಾಗಲಿದೆ. ಈ ಮೂರು ದಿನಗಳ ಸಮನ್ವಯ ಬೈಠಕ್ ಸೆ.16 ರಂದು ಮುಕ್ತಾಯವಾಗಲಿದೆ.