Bayaru, Kasaragod June 30: Rashtreeya Swayamsevak Sangh’s Bayaru unit, a village of Manjeshwar Taluk in Kasaragod district has campaigned for Uttarakhand flood relief fund on Sunday, in which hundreds of Swayamsevaks, well wishers contributed their part in a programme held here. RSS Mangalore Vibhag Seva Pramukh Subraya Nandodi addressed the gathering. A sum of 37,000 was collected and donated to ‘RSS Sanchalita Samtrasta Parihara Nidhi’, an initiative of RSS Karnataka. Earlier in the programme, images and Videos of Kedarnath before and after the flood, relief activities by Indian Army and RSS Swayamsevaks was shown through multi-media facilities to make aware of the realities from ground zero.
ಬಾಯಾರು(ಮಂಜೇಶ್ವರ ತಾಲೂಕು) June 30 : ಉತ್ತರಾಖಂಡ ಪ್ರವಾಹದಿಂದ ಮಡಿದವರಿಗೆ ಶ್ರದ್ಧಾಂಜಲಿ ಹಾಗೂ ಪರಿಹಾರ ನಿಧಿ ಸಮರ್ಪಣಾ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ
ನಡೆಯಿತು. ಬಾಯಾರು ಶ್ರೀ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ನಡೆದ ಈ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಉಪಸ್ಥಿತರಿದ್ದರು. ಅವರು ಮಾತನಾಡಿ ದೇಶದ ಯಾವುದೇ ಭಾಗದಲ್ಲಿ ಯಾವುದೇ ದುರಂತ ನಡೆದಾಗ ಸ್ಪಂದಿಸುವುದು ಉತ್ತಮ ಪ್ರಜೆಯ ಕರ್ತವ್ಯ.ಪ್ರವಾಹ ಪೀಡಿತರ ರಕ್ಷಣಾ ಕಾರ್ಯದಲ್ಲಿ ಭಾರತೀಯ ಸೇನೆಯ ಯೋಧರು ಹಾಗೂ ನಮ್ಮ ಸ್ವಯಂಸೇವಕ ಬಂಧುಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ,ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ ಹಾಗೂ ನಿರಾಶ್ರಿತರ ಸೇವೆಗಾಗಿ ಕಟಿಬದ್ಧರಾಗಿದ್ದಾರೆ ಎಂದರು . ಉತ್ತರಾಖಂಡದ ಪ್ರವಾಹದಲ್ಲಿ ಮಡಿದವರು ಇನ್ನಿಲ್ಲ, ಆದರೆ ಉಳಿದವರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು.ಅವರಿಗಾಗಿ ನಮ್ಮ ಕರವನ್ನು ಜೋಡಿಸೋಣ ಎಂದರು.
ಪ್ರವಾಹಕ್ಕೆ ಮೊದಲಿನ ಸಂದರ್ಭಗಳ ಚಿತ್ರ, ಪ್ರವಾಹ ನಂತರದ ಸ್ಥಿತಿ , ಸೇನೆಯ ರಕ್ಷಣಾ ಕಾರ್ಯ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ರಕ್ಷಣಾ ಕಾರ್ಯಗಳನ್ನು ಪ್ರದರ್ಶಿಸಲಾಯಿತು. ನಂತರ ಮೃತರಾದ ಎಲ್ಲ ಬಂಧುಗಳಿಗೆ ಹಾಗೂ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುಮಾರು 100 ಮಂದಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 37000 ನಿಧಿ ಸಂಗ್ರಹ ಮಾಡಲಾಯಿತು. ಉತ್ತರದಲ್ಲಿರುವ ಕೇದಾರನಾಥನಿಗಾಗಿ ಶ್ರೀ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ನಡೆದ ಶ್ರದ್ಧಾಂಜಲಿ ಹಾಗೂ ಪರಿಹಾರ ನಿಧಿ ಸಮರ್ಪಣಾ ಕಾರ್ಯಕ್ರಮ ಭಾವಪೂರ್ಣವಾಗಿ ಮುಕ್ತಾಯಗೊಂಡಿತು.