Bengaluru May 21: RSS Karnataka state unit today donated Rs 25 lakhs to Rashtriya Sewa Bharati, which is the RSS national Sewa unit, presently heading RSS initiatives of the post-earthquake relief works in Nepal.
RSS Karnataka state unit had requested the public to donate fund for Nepal earthquake relief works through its ‘RSS Sanchalita Samtrasta Parihara Nidhi’ in Karnataka. In the first phase, Rs 25 lakh was collected, was donated to Rashtriya Sewa Bharati. RSS Sah-sarakaryavah Dattatreya Hosabale had visited earthquake affected areas in Nepal and headed the primary relief works by RSS team there.
RSS Karnataka has thanked the help of Citizens for their timely help during such an unprecedented natural calamity.
ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ
# 74, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004
080-26610081 www.samvada.org
ಪ್ರಕಟಣೆಯ ಕೃಪೆಗಾಗಿ 21.05.2015
ನೇಪಾಳದಲ್ಲಿ ಉಂಟಾದ ಭೀಕರ ಭೂಕಂಪದ ತರುವಾಯ ಅಲ್ಲಿನ ಸಂತ್ರಸ್ತರಿಗೆ ನೆರವಾಗಲು ಆರೆಸ್ಸೆಸ್ ಸಾರ್ವಜನಿಕ ಮನವಿ ಮಾಡಿತ್ತು. ‘ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ-ಕರ್ನಾಟಕ’ದ ಮೂಲಕ ಮೊದಲ ಹಂತದಲ್ಲಿ ಸಂಗ್ರಹಿಸಲಾದ 25 ಲಕ್ಷ ರೂ.ಗಳನ್ನು ಆರೆಸ್ಸೆಸ್ಸಿನ ಸೇವಾ ಘಟಕವಾಗಿರುವ ‘ರಾಷ್ಟ್ರೀಯ ಸೇವಾ ಭಾರತಿ’ಯ ಘಟಕಕ್ಕೆ ನೀಡಲಾಗಿದೆ. ರಾಷ್ಟ್ರೀಯ ಸೇವಾ ಭಾರತಿಯು ಈಗಾಗಲೇ ನೇಪಾಳದಲ್ಲಿ ಸಂತ್ರಸ್ತ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಸಂಘದ ಕರ್ನಾಟಕ ಘಟಕದ ವತಿಯಿಂದ ನೀಡಲಾದ ಈ ನಿಧಿಯು ನೇಪಾಳದಲ್ಲಿನ ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಸ್ತೆ-ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಸದ್ಬಳಕೆಯಾಗಲಿದೆ.
ಭೀಕರ ಭೂಕಂಪದ ತರುವಾಯ ನೇಪಾಳದ ಬಂಧುಗಳ ಬದುಕು ಮತ್ತೊಮ್ಮೆ ದುಸ್ತರವಾಗಿದೆ. ಅಲ್ಲಿನ ಸಂತ್ರಸ್ತರಿಗೆ ಇದೀಗ ಮಾನವೀಯ ನೆರವು ಅವಶ್ಯವಿದ್ದು ಸಮಾಜ ಬಾಂಧವರೆಲ್ಲರೂ ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಿಕೊಡುವಲ್ಲಿ ಸಹಕರಿಸಬೇಕಿದೆ. ಆರ್ಥಿಕ ಧನಸಹಾಯವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸಬೇಕು ಹಾಗೂ ನೇಪಾಳದ ಜನತೆಗೆದುರಾಗಿರುವ ಈ ಹಠಾತ್ ಸಂಕಷ್ಟವನ್ನು ನಿವಾರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕಳಕಳಿಯ ವಿಜ್ಞಾಪನೆಗಳು.
ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ ‘RSS Sanchalita Santrasta Parihaara Nidhi’ ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ.
ಕೇಶವ ಕೃಪಾ ಆರೆಸ್ಸೆಸ್ ಕಛೇರಿ, #74, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು-560004, ದೂರವಾಣಿ:080-26610081
FOR ONLINE TRANSFER: “RSS Sanchalita Santrasta Parihaara Nidhi” SB Account Number: 0789101009327, IFSC Code: CNRB0000789 Canara Bank, Kempegouda Nagar Branch, Bangalore-560018
ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ
ವಿ ನಾಗರಾಜ್
ಕ್ಷೇತ್ರೀಯ ಸಂಘಚಾಲಕರು, ಆರೆಸ್ಸೆಸ್
ನೀವು ಇಂಟರ್ನೆಟ್ ಮೂಲಕ ಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ ಆ ಕುರಿತು 9448284625, 9448847866 ಅಥವಾ karnatakarss@gmail.com ಗೆ ಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.
**************************************