ಸೋನಿಯಾ ಕೃಪಾಪೋಷಿತ ಮಸೂದೆ ಧಿಕ್ಕರಿಸಿ : ಸತ್ಯಜಿತ್
Mulki near Mangalore: Nov 15: ಮೂಲ್ಕಿ; ಕೇಂದ್ರ ಸರ್ಕಾರವು ತನ್ನ ಓಟ್ ಬ್ಯಾಂಕಿಗಾಗಿ ಸೋನಿಯಾ ಗಾಂಧಿ ಕೃಪಾಪೋಷಿತ ಸಮಿತಿಯು ಮಂಡಿಸಿದ ಹಿಂದೂ ವಿರೋಧಿ ಮಸೂದೆಯನ್ನು ಬಹು ಸಂಖ್ಯಾತ ಹಿಂದೂ ಸಮಾಜದ ಪ್ರತಿಯೊಬ್ಬ ನಾಗರಿಕನು ಧಿಕ್ಕರಿಸಬೇಕು ಇಲ್ಲದಿದ್ದಲ್ಲಿ ಯಾವುದೇ ದೌರ್ಜನ್ಯ, ಗಲಭೆ ನಡೆದರೂ ಅಮಾಯಕ ಹಿಂದೂಗಳನ್ನು ಬಲಿ ಪಡೆಯುವುದು ನಿಶ್ಚಿತ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು.
ಮೂಲ್ಕಿಯಲ್ಲಿ ಮಂಗಳವಾರ ಹಿಂದೂ ಹಿತರಕ್ಷಣಾ ಸಮಿತಿ ಆಯೋಜಿಸಿದ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜವನ್ನು ಒಡೆದು ಆಳುವ ಮೂಲಕ ಇಟಲಿ ದೇಶದ ಮಾತೃ ಪ್ರೇಮದ ಸಂಕೇತವಾಗಿ ಈ ಮಸೂದೆಯನ್ನು ರಚಿಸಿದ್ದು ಇದರಿಂದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂದೂಗಳಿಗೆ ಒಂದು ಕಾನೂನು, ಅಲ್ಪ ಸಂಖ್ಯಾತರಿಗೆ ಮತ್ತೊಂದು ಕಾನೂನು ರಚಿಸಿರುವ ಉದ್ದೇಶ ಸ್ಪಷ್ಟವಾಗಬೇಕು, ಹಿಂದೆ ಗಜನಿ ಮಹಮ್ಮದ್ನಿಂದ ದೇಶವನ್ನು ಕೊಳ್ಳೆ ಹೊಡೆಯಲಾಯಿತು. ಆಮೇಲೆ ಬ್ರಿಟಿಷರಿಂದ ಲೂಟಿ ನಡೆಯಿತು. ಈಗ ದೇಶದ ಭ್ರಷ್ಟ ರಾಜಕೀಯ ವ್ಯಕ್ತಿಗಳಿಂದ ವಿಭಜನೆ ಆಗುತ್ತಿದೆ. ಒಡೆದು ಆಳುವ ನೀತಿಯನ್ನು ವಿರೋಧಿಸಲು ಹಿಂದೂ ಸಮಾಜ ಒಂದಾಗದೆ ಹೋದರೆ ದೇಶಕ್ಕೇ ಅಪಾಯವಿದೆ ಎಂದು ಅವರು ಹೇಳಿದರು.
ಫೇಲಿಕ್ಸ್ ಡೇಸಾ ಕೆಮ್ರಾಲ್, ರಾಮಚಂದ್ರ ಶೆಣೈ ಹಳೆಯಂಗಡಿ, ಉಮೇಶ್ ಪಂಜ ಮತ್ತಿತರರಿದ್ದರು.