ಬೆಂಗಳೂರು: ದಿಶಾ ಭಾರತ್ ಸಂಸ್ಥೆಯ ವತಿಯಿಂದ ಆಗಸ್ಟ್ 1ರಿಂದ ಆರಂಭಗೊಂಡ ‘ನನ್ನ ಭಾರತ’ – ಯುವ ಅಭಿಯಾನ ಇದೀಗ ಮುಕ್ತಾಯದ ಹಂತವನ್ನು ತಲುಪಿದೆ. ಈ ಅಭಿಯಾನದ ಭಾಗವಾಗಿ ಸ್ವರಾಜ್ಯ ರಥ, ಸ್ವರಾಜ್ಯ ವಾಕಥಾನ್, ತಜ್ಞರ ಸರಣಿ ಉಪನ್ಯಾಸ ಕಾರ್ಯಕ್ರಮಗಳು, ರಾಜ್ಯ ಮಟ್ಟದ ವಿಚಾರ ಸಂಕಿರಣ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳು, ಆನ್ ಲೈನ್ ವಿದ್ಯಾರ್ಥಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೀಗ ನನ್ನ ಭಾರತ ಅಭಿಯಾನ ಕೊನೆಯ ಹಂತಕ್ಕೆ ತಲುಪಿದ್ದು ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ ಆಗಸ್ಟ್ 15, ಸಂಜೆ 5.00 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಈ ಕಾರ್ಯಕ್ರಮ ದಿಶಾಭಾರತ್ ವೆಬ್ ಸೈಟ್ (www.facebook.com/DishaBharat)ನಲ್ಲಿ ನೇರಪ್ರಸಾರವಾಗಲಿದೆ.