ಇಂದೋರ್: ರಾಷ್ಟ್ರೀಯ ಸ್ವಯಂಸೇವಕ‌ ಸಂಘದ ಸರಸಂಘಚಾಲಕ ಡಾ.‌ಮೋಹನ್ ಭಾಗವತ್ ಅವರು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಅವರಿಗೆ ಅಹಲ್ಯಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಾಷಣದ ಸಾರಾಂಶ

“ಪ್ರತಿಷ್ಠಾ ದ್ವಾದಶಿ”, ಪುಷ್ಯ ಶುಕ್ಲ ದ್ವಾದಶಿಗೆ ಹೊಸ ನಾಮಕರಣವಾಗಿದೆ. ಮೊದಲು ನಾವು ವೈಕುಂಠ ಏಕಾದಶಿ, ವೈಕುಂಠ ದ್ವಾದಶಿ ಎಂದು ಕರೆಯುತ್ತಿದ್ದೆವು, ಈಗ ಇದನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಕರೆಯುವುದು ಏಕೆಂದರೆ ಹಲವು ಶತಮಾನಗಳಿಂದ ಪರತಂತ್ರವನ್ನು (ಪರಕೀಯರ ಆಡಳಿತ) ಹೊರಿಸಲ್ಪಟ್ಟು ಸಹಿಸಿದ ಭಾರತದ ನಿಜವಾದ ಸ್ವತಂತ್ರತೆಯ ಪ್ರತಿಷ್ಠಾಪನೆ ಈ ದಿನದಂದು ಆಯಿತು. ಸ್ವಾತಂತ್ರ್ಯವಿತ್ತು, ಆದರೆ ಅದು ಪ್ರತಿಷ್ಠಾಪಿತವಾಗಿರಲಿಲ್ಲ. ಆಗಸ್ಟ್ 15 ರಂದು ಭಾರತ ಸ್ವತಂತ್ರವಾಯಿತು, ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ಭವಿಷ್ಯವನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿದೆ. ನಾವು ಒಂದು ಸಂವಿಧಾನವನ್ನು ಕೂಡಾ ರಚಿಸಿದ್ದೇವೆ, ಅದು ಭಾರತದ ‘ಸ್ವ’ ಆಧಾರಿತವಾಗಿಯೇ ಹೊರಹೊಮ್ಮಿದ ಒಂದು ವಿಶಿಷ್ಟ ದೃಷ್ಟಿಯಾಗಿದೆ. ಆದರೆ ಸಂವಿಧಾನದಲ್ಲಿ ದಿಗ್ದರ್ಶನಗೊಂಡ ಭಾರತದ ಸ್ವತ್ವವನ್ನು, ಅದರ ಭಾವವನ್ನು ಅದನ್ನು ಅನುಸರಿಸಿ ಸಾಗಲು ಆಗಿಲ್ಲ‌.

ಆದ್ದರಿಂದ, ಕವಿವಾಣಿಯೊಂದು ಹೀಗೆ ಹೇಳುತ್ತದೆ. “ನಮ್ಮ ಎಲ್ಲಾ ಕನಸುಗಳು ನನಸಾಗಿವೆ ಎಂದೋ, ನೋವಿನ ಭಾರವನ್ನು ನಮ್ಮ ತಲೆಯಿಂದ ತೆಗೆದುಹಾಕಲಾಗಿದೆ ಎಂದೋ ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ?”

ಸಮಾಜದ ಪರಿಸ್ಥಿತಿ ಹೀಗಿದೆ, ಏಕೆಂದರೆ ‘ಸ್ವ’ದ ಅಧಿಷ್ಠಾನಕ್ಕೆ ಅಗತ್ಯವಾದ ಸ್ವಾತಂತ್ರ್ಯವು ಲಿಖಿತ ರೂಪದ ಸಂವಿಧಾನದ ಮೂಲಕ ಲಭ್ಯವಾಗಿದೆ, ಆದರೆ ನಾವು ಅದರ ದೃಢವಾದ ಅಡಿಪಾಯದಲ್ಲಿ ನಮ್ಮ ಮನಸ್ಸನ್ನು ಸ್ಥಾಪಿಸಿಲ್ಲ.

ನಮ್ಮ ‘ಸ್ವ’ ಯಾವುದು? ರಾಮ – ಕೃಷ್ಣ – ಶಿವ, ಅವರು ಕೇವಲ ದೇವರು ಮತ್ತು ದೇವತೆಗಳೇ ಅಥವಾ ಅವರನ್ನು ಪೂಜಿಸುವವರಿಗೆ ಮಾತ್ರ ಅವರು ಸೀಮಿತರೇ? ಅದು ಹಾಗಲ್ಲ. ರಾಮನು ಉತ್ತರದಿಂದ ಮತ್ತು ದಕ್ಷಿಣ ಭಾರತವನ್ನು ಜೋಡಿಸುತ್ತಾನೆ.

https://twitter.com/PTI_News/status/1878805311534006376?t=KhYGRwAJe6vexmK5P2liIg&s=08

Leave a Reply

Your email address will not be published.

This site uses Akismet to reduce spam. Learn how your comment data is processed.